AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಸುರೇಶ್​ ಟ್ರ್ಯಾಪ್​ನಲ್ಲಿ ಸರಿಯಾಗಿ ಸಿಕ್ಕಿಬಿದ್ದ ಮಂಜು; ಹೊರ ಬರೋಕೆ ಮಾತ್ರ ತಿಳಿಯುತ್ತಿಲ್ಲ

ಮಂಜು ಹಾಗೂ ದಿವ್ಯಾ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದಾರೆ. ಆದರೆ, ಅವರ ನಡುವೆ ಗೆಳೆತನ ಇದೆಯೋ ಅಥವಾ ಪ್ರೀತಿಯೋ ಎನ್ನುವ ವಿಚಾರ ಅವರಿಗೂ ಇನ್ನೂ ಸ್ಪಷ್ಟವಾದಂತೆ ಕಾಣುತ್ತಿಲ್ಲ.

ದಿವ್ಯಾ ಸುರೇಶ್​ ಟ್ರ್ಯಾಪ್​ನಲ್ಲಿ ಸರಿಯಾಗಿ ಸಿಕ್ಕಿಬಿದ್ದ ಮಂಜು; ಹೊರ ಬರೋಕೆ ಮಾತ್ರ ತಿಳಿಯುತ್ತಿಲ್ಲ
ಮಂಜು ಪಾವಗಡ - ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 22, 2021 | 7:10 AM

Share

ಬಿಗ್​ ಬಾಸ್ ಮನೆಗೆ ಸೇರಿದ ದಿನದಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ತುಂಬಾನೇ ಆಪ್ತವಾಗಿದ್ದಾರೆ. ಇಬ್ಬರೂ ಪರಸ್ಪರ ಫ್ಲರ್ಟ್​ ಮಾಡಿಕೊಳ್ಳುತ್ತಾ ಹಾಯಾಗಿ ಮನೆಯಲ್ಲಿ ದಿನ ಕಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಸಾಕಷ್ಟು ಮನಸ್ತಾಪಗಳು ಹುಟ್ಟಿಕೊಳ್ಳುತ್ತಿವೆ. ಅಷ್ಟೇ ಅಲ್ಲ, ದಿವ್ಯಾಗೆ ಸಹಾಯ ಮಾಡೋಕೆ ಹೋಗಿ ಮಂಜು ಸಂಕಷ್ಟ ಎದುರಿಸಿದ್ದಾರೆ. ದಿವ್ಯಾ ಸುರೇಶ್​ ಹಾಕಿರೋ ಟ್ರ್ಯಾಪ್​ನಲ್ಲಿ ಸಿಲುಕಿರುವ ವಿಚಾರ ಮಂಜುಗೆ ಸ್ಪಷ್ಟವಾಗುತ್ತಿದೆ. ಆದರೆ, ಅದರಿಂದ ಹೊರ ಬರೋದು ಹೇಗೆ ಎಂಬುದು ಮಾತ್ರ ತಿಳಿಯುತ್ತಿಲ್ಲ.

ಮಂಜು ಹಾಗೂ ದಿವ್ಯಾ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದಾರೆ. ಆದರೆ, ಅವರ ನಡುವೆ ಇರುವುದು ಗೆಳೆತನವೋ ಅಥವಾ ಪ್ರೀತಿಯೋ ಎನ್ನುವ ವಿಚಾರ ಅವರಿಗೂ ಇನ್ನೂ ಸ್ಪಷ್ಟವಾದಂತೆ ಕಾಣುತ್ತಿಲ್ಲ. ಪ್ರತೀ ವಿಚಾರದಲ್ಲೂ ದಿವ್ಯಾ ಅವರನ್ನು ಮಂಜು ವಹಿಸಿಕೊಂಡು ಬರುತ್ತಿದ್ದಾರೆ. ಇದು ಈಗ ಮಂಜುಗೆ ಕಂಟಕವಾಗಿದೆ.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಮೋಸ ಮಾಡಿದ್ದರು. ಇದಕ್ಕೂ ಮೊದಲು ಮಂಜು ಅವರ ಸಲಹೆ ಕೂಡ ಪಡೆದುಕೊಂಡಿದ್ದರು. ಈ ವಿಚಾರದಲ್ಲಿ ಮನೆಯವರು ಬೇಸರಗೊಂಡಿದ್ದಾರೆ. ಹೀಗಾಗಿ, ಯಾರೊಬ್ಬರೂ ಮಂಜು ಹಾಗೂ ದಿವ್ಯಾ ಬಳಿ ಸರಿಯಾಗಿ ಮಾತನಾಡುತ್ತಿಲ್ಲ.

ಇದು ಮಂಜುಗೆ ತೀವ್ರ ಬೇಸರ ತರಿಸಿದೆ. ದಿವ್ಯಾ ಈ ವಿಚಾರಕ್ಕೆ ಪದೇಪದೇ ಬೇಸರಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಿವ್ಯಾ ಹಾಗೂ ಮಂಜು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನೀನು ಏಕೆ ಪದೇ ಪದೇ ಬೇಸರ ಮಾಡಿಕೊಳ್ಳುತ್ತೀಯಾ? ನೀನು ಬೇಸರಗೊಂಡರೆ ನಾನೂ ಬೇಸರಕ್ಕೆ ತುತ್ತಾಗುತ್ತೇನೆ. ನನಗೆ ಇತ್ತೀಚೆಗೆ ಏನು ಮಾಡುತ್ತಿದ್ದೇನೆ ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ. ಈ ಮೂಲಕ ದಿವ್ಯಾ ಅವರನ್ನು ಸಮಾಧಾನ ಮಾಡುವ ಭರದಲ್ಲಿ ಅವರ ನಿಜವಾದ ಪರ್ಫಾರ್ಮೆನ್ಸ್​ ಮಿಸ್​ ಆಗುತ್ತಿದೆ. ಇದು ಅವರ ಗಮನಕ್ಕೂ ಬಂದಿದೆ. ದಿವ್ಯಾ ಹಾಕಿರುವ ಟ್ರ್ಯಾಪ್​ನಿಂದ ಹೊರಗೆ ಬರೋದೋ ಹೇಗೆ ಎಂಬುದು ಮಾತ್ರ ಅವರಿಗೆ ತಿಳಿಯುತ್ತಿಲ್ಲ.

ಇದನ್ನೂ ಓದಿ: Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ