Bigg Boss Kannada: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​; ಆರು ಪ್ರಮುಖರ ಮೇಲೆ ಎಲಿಮಿನೇಷನ್​ ತೂಗುಗತ್ತಿ!

Bigg Boss Kannada Season 8: ಮನೆಯ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎನಿಸಿರುವ ಅರವಿಂದ್​ ಕೆಪಿ ಮೇಲೂ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಕೂಡ ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ.

Bigg Boss Kannada: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​; ಆರು ಪ್ರಮುಖರ ಮೇಲೆ ಎಲಿಮಿನೇಷನ್​ ತೂಗುಗತ್ತಿ!
ಬಿಗ್​​ಬಾಸ್​​ ಕನ್ನಡ 8
Edited By:

Updated on: Mar 30, 2021 | 10:28 AM

ಬಿಗ್​ ಬಾಸ್​ ಐದನೇ ವಾರಕ್ಕೆ ಕಾಲಿಟ್ಟಿದೆ. ವೀಕ್​ ಇರುವ ಸ್ಪರ್ಧಿಗಳು ಈಗಾಗಲೇ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದು, ಪ್ರಮುಖ ಎನಿಸಿರುವ 13 ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಐದನೇ ವಾರದ ಎಲಿಮಿನೇಷನ್​ಗೆ 6 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಎಲ್ಲಾ ಸ್ಪರ್ಧಿಗಳು ಪ್ರಮುಖರೇ ಅನ್ನೋದು ವಿಶೇಷ.

ಮನೆಯ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್​ಗೆ ಅತಿ ಹೆಚ್ಚು ಮತಗಳು ಬೀಳುವ ಮೂಲಕ ಅವರು ಮೊದಲು ನಾಮಿನೇಟ್​ ಆಗಿದ್ದಾರೆ. ಅವರು ಅಷ್ಟಾಗಿ ಮಾತನಾಡುತ್ತಿಲ್ಲ, ಟಾಸ್ಕ್​ ಚೆನ್ನಾಗಿ ಆಡ್ತಾರೆ ಆದರೆ, ಜಾಸ್ತಿ ಬೆರೆಯುವುದಿಲ್ಲ, ನಾಟಕ ಮಾಡ್ತಿದಾರೆ ಅನಿಸುತ್ತದೆ, ಅವರ ಆರೋಗ್ಯ ಸರಿಯಿಲ್ಲ ಎನ್ನುವ ಕಾರಣ ನೀಡಿ ಮನೆ ಮಂದಿ ನಾಮಿನೇಷನ್​ಗೆ ಅವರ ಹೆಸರನ್ನು ತೆಗೆದುಕೊಂಡರು.

ಶಮಂತ್​ ಕೂಡ ಈ ವಾರ ನಾಮಿನೇಟ್​ ಆಗಿದ್ದಾರೆ. ಅವರು ಬೆರೆಯುತ್ತಿಲ್ಲ ಎನ್ನುವ ಆರೋಪವನ್ನು ಮಾಡಿದರು. ಪ್ರಶಾಂತ್​ ಸಂಬರಗಿ ಕೂಡ ಈ ಬಾರಿ ನಾಮಿನೇಟ್​ ಸಾಲಿನಲ್ಲಿದ್ದಾರೆ. ಅವರು ಎಲ್ಲರ ಜತೆ ಮನಸ್ತಾಪ ಮಾಡಿಕೊಳ್ಳುತ್ತಾರೆ, ಅವರು ಕೆಲಸ ಮಾಡುವುದಿಲ್ಲ, ಬಿಗ್​ ಬಾಸ್​ ಮನೆಗೆ ಮುಳ್ಳು ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದರು. ಹೀಗಾಗಿ, ಅವರು ಕೂಡ ನಾಮಿನೇಟ್ ಆದರು.

ಮನೆಯ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎನಿಸಿರುವ ಅರವಿಂದ್​ ಕೆಪಿ ಮೇಲೂ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಕೂಡ ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ.

ದಿವ್ಯಾ ಸುರೇಶ್​ ಕೂಡ ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದರು. ಆದರೆ, ಮನೆಯ ಕ್ಯಾಪ್ಟನ್​ಗೆ ಒಬ್ಬರನ್ನು ಸೇಫ್​ ಮಾಡಬೇಕು ಎನ್ನುವ ಆಯ್ಕೆಯನ್ನು ಬಿಗ್ ಬಾಸ್​ ನೀಡಿದರು. ಆಗ ಮನೆಯ ಕ್ಯಾಪ್ಟನ್​ ವಿಶ್ವ ಅವರು ದಿವ್ಯಾ ಸುರೇಶ್​ ಅವರನ್ನು ಸೇಫ್​ ಮಾಡಿದರು. ಈ ಬಾರಿ ನಾಮಿನೇಟ್​ ಆಗಿರುವ ಎಲ್ಲಾ ಸ್ಪರ್ಧಿಗಳು ತುಂಬಾನೇ ಸ್ಟ್ರಾಂಗ್​ ಎನ್ನುವ ಮಾತುಗಳನ್ನು ಮನೆ ಮಂದಿ ಹೇಳಿಕೊಂಡರು.

ಇದನ್ನೂ ಓದಿ: BBK8 Elimination: ಬಿಗ್​ ಬಾಸ್​ ಮನೆಯಿಂದ ಚಂದ್ರಕಲಾ ಮೋಹನ್ ಎಲಿಮಿನೇಟ್​

ಬಿಗ್​ ಬಾಸ್​​ ಗೆಲ್ಲೋದು ಅರವಿಂದ್​; ಮುಂದಿನ ವಾರ ಶಂಕರ್​ ಎಲಿಮಿನೇಟ್! ಹಿರಿಯ ನಟಿಯ ಭವಿಷ್ಯ ನಿಜವಾಗತ್ತಾ?

Published On - 7:13 am, Tue, 30 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us