‘ಮದುವೆ ಇಷ್ಟ ಇರಲಿಲ್ಲ, ಈಗೆಲ್ಲ ಬಗೆಹರಿದಿದೆ’; ಸೋನಾಕ್ಷಿ ವಿವಾಹದ ಬಗ್ಗೆ ಶತ್ರುಘ್ನ ಸಿನ್ಹಾ ಮಾತು

‘ಜೂನ್ 23ರ ಸಂಜೆ ನಾವು ವಿವಾಹ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದೇವೆ. ಮದುವೆ ಬಗ್ಗೆ ನಮ್ಮ ಕುಟುಂಬದವರು ಏನ್ನನೂ ಹೇಳಿಲ್ಲ. ಕೆಲವು ಮಾಧ್ಯಮಗಳು ಕೆಲವನ್ನು ಊಹಿಸಿಕೊಂಡು ಬರೆದರು. ಇದು ಕುಟುಂಬದ ಖಾಸಗಿ ವಿಚಾರ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದಿದ್ದಾರೆ ಶತ್ರುಘ್ನ ಸಿನ್ಹ.

‘ಮದುವೆ ಇಷ್ಟ ಇರಲಿಲ್ಲ, ಈಗೆಲ್ಲ ಬಗೆಹರಿದಿದೆ’; ಸೋನಾಕ್ಷಿ ವಿವಾಹದ ಬಗ್ಗೆ ಶತ್ರುಘ್ನ ಸಿನ್ಹಾ ಮಾತು
ಝಹೀರ್-ಸೋನಾಕ್ಷಿ ಮದುವೆ ಬಗ್ಗೆ ಶತ್ರುಘ್ನ ಸಿನ್ಹಾ ಮಾತು
Edited By:

Updated on: Jun 22, 2024 | 9:24 AM

ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಝಹೀರ್ ಇಖ್ಬಾಲ್​ನ ವಿವಾಹ ಆಗುತ್ತಿದ್ದಾರೆ. ಇದನ್ನು ಅನೇಕರು ಟೀಕಿಸುತ್ತಿದ್ದಾರೆ. ಮತ್ತೊಂದು ವಿಚಾರ ಎಂದರೆ ಈ ಮದುವೆ ಬಗ್ಗೆ ಸ್ವತ್ರಃ ಶತ್ರುಘ್ನ ಸಿನ್ಹಾ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗಿತ್ತು. ‘ಮಗಳು ಮದುವೆ ಆಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಸ್ವತಃ ಅವರೇ ಈ ವಿಚಾರ ಒಪ್ಪಿಕೊಂಡಿದ್ದಾರೆ. ಜೂನ್ 23ರಂದು ಮದುವೆ ರಿಸೆಪ್ಷನ್ ನಡೆಯುತ್ತಿದೆ.

‘ಜೂನ್ 23ರ ಸಂಜೆ ನಾವು ವಿವಾಹ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದೇವೆ. ಮದುವೆ ಬಗ್ಗೆ ನಮ್ಮ ಕುಟುಂಬದವರು ಏನ್ನನೂ ಹೇಳಿಲ್ಲ. ಕೆಲವು ಮಾಧ್ಯಮಗಳು ಕೆಲವನ್ನು ಊಹಿಸಿಕೊಂಡು ಬರೆದರು. ಇದು ಕುಟುಂಬದ ಖಾಸಗಿ ವಿಚಾರ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದಿದ್ದಾರೆ ಶತ್ರುಘ್ನ ಸಿನ್ಹ.

ಇದನ್ನೂ ಓದಿ: ಸೋನಾಕ್ಷಿ-ಝಹೀರ್​ ಇಖ್ಬಾಲ್​ ವಿವಾಹದ ಬಗ್ಗೆ ಖುಷಿಯಿಂದ ಮಾತಾಡಿದ ಶತ್ರುಘ್ನ ಸಿನ್ಹಾ

‘ಮದುವೆ ಎಲ್ಲರ ಮನೆಯಲ್ಲೂ ಆಗುತ್ತದೆ. ಮದುವೆಗೂ ಮೊದಲು ಕೆಲವು ವಿಚಾರಕ್ಕೆ ಮಾತುಕತೆ ಆಗೋದು ಸಾಮಾನ್ಯ. ನಮಗೆ ಎಲ್ಲವೂ ಓಕೆ. ಏನೆಲ್ಲ ತೊಂದರೆ ಇತ್ತೋ ಅದೆಲ್ಲೆ ಪರಿಹಾರ ಆಗಿದೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಎಲ್ಲಾ ಮದುವೆಯಲ್ಲೂ ಈ ರೀತಿ ಆಗುತ್ತದೆ. ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಹೊಂದಲು ಸಾಧ್ಯವಿಲ್ಲ ಎಂದಲ್ಲ. ಜೂನ್ 23ರಂದು ನಾವು ಭರ್ಜರಿ ಎಂಜಾಯ್ ಮಾಡುತ್ತೇವೆ’ ಎಂದಿದ್ದಾರೆ ಅವರು.

ಈ ಮೊದಲು ಹೇಳಿದ್ದೇನು?

‘ನನ್ನ ಮಗಳ ಬಗ್ಗೆ, ಅವಳ ನಿರ್ಧಾರಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಆದ ವರದಿ ಬಗ್ಗೆ ಅಷ್ಟೇ ನನಗೆ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಹೆಂಡತಿ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ನಾವು ಬಯಸುತ್ತೇವೆ’ ಎಂದು ಶತ್ರುಘ್ನ ಸಿನ್ಹಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.

ಪ್ರೀತಿ

ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ ಭೇಟಿ ಆಗಿದ್ದು ಸಲ್ಮಾನ್ ಖಾನ್ ಅವರಿಂದ. ಇಖ್ಬಾಲ್ ಅವರು ಸಲ್ಲುನ ಗೆಳೆಯ. ಸಲ್ಲುನಿಂದಾಗಿ ಇವರು ಭೇಟಿ ಆದರು. ಇಬ್ಬರ ಮಧ್ಯೆ ಗೆಳೆತನ ಬೆಳೆದು, ಆ ಬಳಿಕ ಪ್ರೀತಿ ಮೂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us