Vedha: ಒಟಿಟಿಯಲ್ಲಿಯೂ ವೇದನದ್ದೇ ಅಬ್ಬರ, 125 ಮಿಲಿಯನ್ ನಿಮಿಷಗಳ ವೀಕ್ಷಣೆ

|

Updated on: Mar 01, 2023 | 11:29 PM

ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ವೇದ ಒಟಿಟಿಯಲ್ಲಿಯೂ ತನ್ನ ನಾಗಾಲೋಟ ಮುಂದುವರೆಸಿದ್ದು 125 ಮಿಲಿಯನ್ ನಿಮಿಷಗಳ ವೀವ್ಸ್ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವಣ್ಣನ 125ನೇ ಸಿನಿಮಾ 125 ಮಿಲಿಯನ್ ವೀವ್ಸ್ ಕಂಡಿದ್ದನ್ನು ಜೀ5, ಶಿವಣ್ಣನ ಅಭಿಮಾನಿಗಳೊಂದಿಗೆ ಸಂಭ್ರಮಿಸಿದೆ.

Vedha: ಒಟಿಟಿಯಲ್ಲಿಯೂ ವೇದನದ್ದೇ ಅಬ್ಬರ, 125 ಮಿಲಿಯನ್ ನಿಮಿಷಗಳ ವೀಕ್ಷಣೆ
ವೇದ ಕನ್ನಡ ಸಿನಿಮಾ
Follow us on

ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಶಿವರಾಜ್ ಕುಮಾರ್ (Shiva Rajkumar) ನಟನೆಯ 125ನೇ ಸಿನಿಮಾ ‘ವೇದ’ (Vedha) ಒಟಿಟಿಯಲ್ಲಿಯೂ (OTT) ತನ್ನ ನಾಗಾಲೋಟ ಮುಂದುವರೆಸಿದ್ದು 125 ಮಿಲಿಯನ್ ನಿಮಿಷಗಳ ವೀವ್ಸ್ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವಣ್ಣನ 125ನೇ ಸಿನಿಮಾ 125 ಮಿಲಿಯನ್ ವೀವ್ಸ್ ಕಂಡಿದ್ದನ್ನು ಜೀ5, ಶಿವಣ್ಣನ ಅಭಿಮಾನಿಗಳೊಂದಿಗೆ ಸಂಭ್ರಮಿಸಿದೆ.

ಶಿವರಾಜ್ ಕುಮಾರ್ ಅವರ ಮೊದಲ ಹೋಂ ಬ್ಯಾನರ್ ಸಿನಿಮಾ ಆಗಿರುವ ವೇದ ಡಿಸೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಹಿಳೆಯರೇ ಸಿಡಿದು ನಿಲ್ಲುವ ಪಕ್ಕಾ ಆಕ್ಷನ್ ಥ್ರಿಲ್ಲರ್ ಆದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು. ಮೊದಲ ಸಿನಿಮಾ ಮೂಲಕವೇ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹಿಟ್ ಬಾಚಿಕೊಂಡರು.

ಕನ್ನಡದಲ್ಲಿ ಹಿಟ್ ಆದ ವೇದ ಸಿನಿಮಾ, ತೆಲುಗಿಗೆ ಡಬ್ ಆಗಿ ಬಿಡುಗಡೆ ಆಲ್ಲಿಯೂ ಹಿಟ್ ಆಯಿತು. ಫೆಬ್ರವರಿ 9 ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆ ಆದ ಸಿನಿಮಾ ಅಂದಿನಿಂದಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಕೆಲವೇ ದಿನದಲ್ಲಿ 125 ಮಿಲಿಯನ್ ಗಿಂತಲೂ ಹೆಚ್ಚು ನಿಮಿಷಗಳ ಕಾಲ ಸ್ಟ್ರೀಂ ಆಗಿ ದಾಖಲೆ ಬರೆದಿದೆ. ಇಷ್ಟೋಂದು ದೀರ್ಘ ಅವಧಿಯ ಸ್ಟ್ರೀಂ ಆದ ಕನ್ನಡ ಸಿನಿಮಾ ವಿರಳ.

125 ಮಿಲಿಯನ್ ಎಂದರೆ ಸುಮಾರು 12 ಕೋಟಿಗೂ ಹೆಚ್ಚು ನಿಮಿಷಗಳ ಕಾಲ ವೇದ ಸಿನಿಮಾ ವಿಶ್ವದಾದ್ಯಂತ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಿದೆ. ಇದನ್ನು ಗಂಟೆಗೆ ಪರಿವರ್ತಿಸಿದರೆ ಸುಮಾರು 20.83 ಲಕ್ಷ ಗಂಟೆಗಳ ಕಾಲ ಈ ಸಿನಿಮಾ ಸ್ಟ್ರೀಮ್ ಆಗಿದೆ.

ವೇದ ಸಿನಿಮಾವು 125 ಮಿಲಿಯನ್ ನಿಮಿಷ ಸ್ಟ್ರೀಂ ಆದ ಖುಷಿಯ ವಿಷಯವನ್ನು ಶಿವಣ್ಣನ ಅಭಿಮಾನಿಗಳೊಟ್ಟಿಗೆ ಜೀ5 ಸಂಭ್ರಮಿಸಿದೆ. ಈ ಮೈಲುಗಲ್ಲು ಸ್ಥಾಪಿಸಿದ್ದಕ್ಕೆ, ಸಂತೋಶ್ ಚಿತ್ರಮಂದಿರದ ಎದುರು ಶಿವಣ್ಣನ ದೊಡ್ಡ ಕಟೌಟ್ ಕಟ್ಟಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ದೊಡ್ಮನೆಯೊಟ್ಟಿಗೆ ಮೊದಲ ಬಾರಿಗೆ ಜೀ5 ಕೈ ಜೋಡಿಸಿದ್ದಕ್ಕೆ ಖುಷಿಯನ್ನು ಸಹ ಕೆಲವು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಸಂತೋಶ್ ಚಿತ್ರಮಂದಿರದ ಬಳಿ ನಡೆದ ಸಂಭ್ರಮಾಚರಣೆಯ ವಿಡಿಯೋವನ್ನು ಜೀ5 ಕನ್ನಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ವೇದ ಸಿನಿಮಾವು, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ, ದೌರ್ಜನ್ಯಕ್ಕೊಳಗಾದ ಯುವತಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಮಗಳಿಗೆ ಸಾಥ್ ನೀಡುವ ತಂದೆಯ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಶಿವಣ್ಣನ ಮಗಳ ಪಾತ್ರದಲ್ಲಿ ನಟ ಅರುಣ್ ಸಾಗರ್ ಮಗಳು ಅದಿತಿ ಸಾಗರ್ ನಟಿಸಿದ್ದು, ಅದಿತಿಯ ನಟನೆಗೆ ಅಭಿಮಾನಿಗಳು ಉಘೆ ಎಂದಿದ್ದಾರೆ.

ಸ್ವತಃ ಮಾಸ್ ಹೀರೋ ಆಗಿದ್ದರೂ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಮಿಂಚಲು ಸ್ಪೇಸ್ ನೀಡಿದ್ದಾರೆ ಶಿವಣ್ಣ. ಸಿನಿಮಾದ ನಾಯಕನಷ್ಟೆ ಸಿನಿಮಾದ ಇತರೆ ಮಹಿಳಾ ಪಾತ್ರಗಳು ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಂಡಿವೆ. ಅದಿತಿ ಸಾಗರ್ ಮಾಡುವ ಫೈಟ್​ಗಳಂತೂ ಅದ್ಭುತವಾಗಿವೆ. ಸಿನಿಮಾವನ್ನು ಶಿವಣ್ಣನ ಮೆಚ್ಚಿನ ನಿರ್ದೇಶಕ ಹರ್ಷ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ