ಶಿವರಾಜ್​ಕುಮಾರ್ ಪ್ರಚಾರ ಮಾಡಿದವರ ಪೈಕಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ವಿವರ

|

Updated on: May 13, 2023 | 4:38 PM

ಕಿಚ್ಚ ಸುದೀಪ್, ಶಿವರಾಜ್​ಕುಮಾರ್ ಮೊದಲಾದ ಸ್ಟಾರ್​ ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದರು. ಆ ಪೈಕಿ ಶಿವರಾಜ್​ಕುಮಾರ್ ಮತಬೇಟೆ ಮಾಡಿದವರಲ್ಲಿ ಗೆದ್ದವರೆಷ್ಟು ಸೋತವರೆಷ್ಟು? ಇಲ್ಲಿದೆ ವಿವರ.

ಶಿವರಾಜ್​ಕುಮಾರ್ ಪ್ರಚಾರ ಮಾಡಿದವರ ಪೈಕಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ವಿವರ
ಶಿವರಾಜ್​ಕುಮಾರ್
Follow us on

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಅನೇಕ ಸೆಲೆಬ್ರಿಟಿಗಳು ಪ್ರಚಾರಕ್ಕೆ ಧುಮುಕಿದ್ದರು. ಕಿಚ್ಚ ಸುದೀಪ್(Kichcha Sudeep), ಶಿವರಾಜ್​ಕುಮಾರ್ ಮೊದಲಾದ ಸ್ಟಾರ್​ ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದರು. ಆ ಪೈಕಿ ಅನೇಕ ನಾಯಕರು ಗೆದ್ದಿದ್ದಾರೆ, ಕೆಲವರು ಸೋತಿದ್ದಾರೆ. ಶಿವರಾಜ್​ಕುಮಾರ್ ಮತಬೇಟೆ ಮಾಡಿದವರಲ್ಲಿ ಗೆದ್ದವರೆಷ್ಟು ಸೋತವರೆಷ್ಟು? ಇಲ್ಲಿದೆ ವಿವರ.

ಗೆದ್ದವರು..

ಮಧು ಬಂಗಾರಪ್ಪ: ಸೊರಬ ಕ್ಷೇತ್ರದಿಂದ ಮಧು ಬಂಗಾರಪ್ಪ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು. ಅವರ ಪರವಾಗಿ ಶಿವರಾಜ್​ಕುಮಾರ್ ಪ್ರಚಾರ ಮಾಡಿದರು. ಅವರು ಗೆದ್ದು ಬೀಗಿದ್ದಾರೆ. 94 ಸಾವಿರ ಮತ ಪಡೆದು ಪ್ರಭಲ ಸ್ಪರ್ಧಿ ಎಸ್​. ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದ್ದಾರೆ.

ಭೀಮಣ್ಣ ನಾಯ್ಕ್: ಶಿರಸಿ ಕ್ಷೇತ್ರದಿಂದ ಭೀಮಣ್ಣ ನಾಯ್ಕ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು. ಅವರ ಎದುರು ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪರ್ಧಿಸಿದ್ದರು. ಭೀಮಣ್ಣ ಪರ ಶಿವಣ್ಣ ಪ್ರಚಾರ ಮಾಡಿದ್ದರು.

ಸಿದ್ದರಾಮಯ್ಯ: ಕಾಂಗ್ರೆಸ್ ಪ್ರಮುಖ ನಾಯಕ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಪರವಾಗಿ ಶಿವಣ್ಣ ಕ್ಯಾಂಪೇನ್ ಮಾಡಿದ್ದರು. ಅವರು ಗೆದ್ದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್: ಬೆಳಗಾವಿ ಗ್ರಾಮಾಂತರದಿಂದ ಸ್ಪರ್ಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದಿದ್ದಾರೆ. ಅವರ ಪರ ಶಿವಣ್ಣ ಮತಯಾಚನೆ ಮಾಡಿದ್ದರು.

ಬೇಲೂರು ಗೋಪಾಲಕೃಷ್ಣ: ಸಾಗರ ಅಭ್ಯರ್ಥಿ ಬೇಲೂರು ಗೋಪಾಲ ಕೃಷ್ಣ ಗೆದ್ದಿದ್ದಾರೆ. ಅವರ ಪರವಾಗಿ ಶಿವಣ್ಣ ಮತ ಕೇಳಿದ್ದರು.

ಸೋಲು..

ಸತೀಶ್ ಕೃಷ್ಣ ಸೈಲ್: ​ಕಾಂಗ್ರೆಸ್​ನಿಂದ ಸತೀಷ್​ ಕೃಷ್ಣ ಸೈಲ್ ಕಾರವಾರದಲ್ಲಿ ಪ್ರಚಾರ ನಡೆಸಿದ್ದರು. ಅವರು ಸೋಲು ಕಂಡಿದ್ದಾರೆ. ಶಿವಣ್ಣ ಇವರ ಪರವಾಗಿ ಪ್ರಚಾರ ಮಾಡಿದ್ದರು.

ಜಗದೀಶ್ ಶೆಟ್ಟರ್: ಬಿಜೆಪಿಯಲ್ಲಿ ಇದ್ದ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಆದರೆ, ಅವರು ಸೋತಿದ್ದಾರೆ.

ಅಶೋಕ್ ಖೇಣಿ: ಬೀದರ್ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಅಶೋಕ್ ಖೇಣಿ ಅವರು ಸೋತಿದ್ದಾರೆ. ಇವರ ಪರವಾಗಿ ಶಿವಣ್ಣ ಮತಬೇಟೆ ಮಾಡಿದ್ದರು.

ಕಿಮ್ಮಾನೇ ರತ್ನಾಕರ್: ತೀರ್ಥಹಳ್ಳಿಯಿಂದ ಕಿಮ್ಮಾನೇ ರತ್ನಾಕರ್ ಸ್ಪರ್ಧಿಸಿ ಸೋತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:37 pm, Sat, 13 May 23