ಸುದೀಪ್ ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿಗಳಲ್ಲಿ ಗೆದ್ದವರೆಷ್ಟು? ಸೋತವರೆಷ್ಟು? ಇಲ್ಲಿದೆ ಪಟ್ಟಿ
Sudeep: ನಟ ಸುದೀಪ್ ಈ ಬಾರಿ ರಾಜ್ಯದಾದ್ಯಂತ ಸಂಚರಿಸಿ ಹಲವಾರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ಹೀಗೆ ಸುದೀಪ್ ಪ್ರಚಾರ ಮಾಡಿದ ಎಷ್ಟು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ? ಎಷ್ಟು ಸೋತಿ್ದ್ದಾರೆ ಇಲ್ಲಿದೆ ಪಟ್ಟಿ.
ಕರ್ನಾಟಕ ವಿಧಾನಸಭೆ ಚುನಾವಣೆ 2023ರ (Karnataka Assembly Election2023) ಫಲಿತಾಂಶ ಬಹುತೇಕ ಹೊರಬಿದ್ದಿದೆ. ಕಾಂಗ್ರೆಸ್ಗೆ (Congress) ನಿಚ್ಚಳ ಬಹುಮತ ದೊರೆತಿದೆ. ಬಿಜೆಪಿ ತೀವ್ರ ಹಿನ್ನೆಡೆ ಅನುಭವಿಸಿದೆ. ಈ ಬಾರಿಯ ಚುನಾವಣೆ ಪ್ರಚಾರ ಹಲವು ಕಾರಣಗಳಿಗೆ ಗಮನ ಸೆಳೆದಿತ್ತು. ಆಡಳಿತದಲ್ಲಿದ್ದ ಬಿಜೆಪಿ ಪರವಾಗಿ ಸುದೀಪ್ ಕಣಕ್ಕಿಳಿದಿದ್ದು ದೊಡ್ಡ ಬದಲಾವಣೆಗೆ ಕಾರಣವಾಗುತ್ತೆ ಎಂಬ ನಿರೀಕ್ಷೆ ಇತ್ತು. ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ (Sudeep) ತಳೆದ ನಿರ್ಧಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂತೆಯೇ ಸುದೀಪ್ ಸಹ ರಾಜ್ಯದ ಹಲವು ಕ್ಷೇತ್ರಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಈಗ ಬಿಜೆಪಿ ಹಿನ್ನಡೆ ಅನುಭವಿಸಿದೆ. ಸುದೀಪ್ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಎಷ್ಟರಲ್ಲಿ ಬಿಜೆಪಿ ಗೆದ್ದಿದೆ? ಎಷ್ಟರಲ್ಲಿ ಸೋತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸುದೀಪ್ ಪ್ರಚಾರ ಮಾಡಿ ಗೆದ್ದ ಅಭ್ಯರ್ಥಿಗಳು
ಶಿಗ್ಗಾವಿ- ಬಸವರಾಜ ಬೊಮ್ಮಾಯಿ ಗೆಲುವು
ದೊಡ್ಡಬಳ್ಳಾಪುರ- ಧೀರಜ್ ಗೆಲುವು
ಶಿಕಾರಿಪುರ- ವಿಜಯೇಂದ್ರ ಗೆಲುವು
ಲಿಂಗಸುಗೂರು- ಮಾನಪ್ಪ ವಜ್ಜಲ್ ಗೆಲುವು
ರಾಜರಾಜೇಶ್ವರಿ ನಗರ- ಮುನಿರತ್ನ ಗೆಲುವು
ರಾಯಚೂರು- ಶಿವರಾಜ್ ಪಾಟೀಲ್ ಗೆಲುವು
ಕುಷ್ಟಗಿ- ಜಿಎಚ್ ಪಾಟೀಲ್ ಗೆಲುವು
ಹುಬಳ್ಳಿ-ಧಾರಾವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ ಗೆಲುವು
ಜಮಖಂಡಿ- ಜಗದೀಶ್ ಗೆಲುವು
ಸುದೀಪ್ ಪ್ರಚಾರ ಮಾಡಿಯೂ ಸೋತ ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ- ಸುಧಾಕರ್ ಸೋಲು
ಶಿಡ್ಲಘಟ್ಟ- ಸೀಕಲ್ ರಾಮೇಗೌಡ ಸೋಲು
ಯಮಕನಮರಡಿ-ಬಸವರಾಜ ಹುಂಡ್ರಿ ಸೋಲು
ಬಾಗಲಕೋಟೆ- ಚರಂತಿಮಠ ಸೋಲು
ಮಾನ್ವಿ- ಬಿವಿ ನಾಯಕ್ ಸೋಲು
ವರುಣ- ಸೋಮಣ್ಣ ಸೋಲು
ಹಾವೇರಿ- ಗವಿಸಿದ್ದಪ್ಪ ಸೋಲು
ರಾಣೆಬೆನ್ನೂರು- ಅರುಣ್ ಕುಮಾರ್ ಸೋಲು
ಕೂಡ್ಲಿಗಿ- ಲೋಕೇಶ್ ನಾಯಕ್ ಸೋಲು
ಬೀಳಗಿ- ಮುರಗೇಶ ನಿರಾಣಿ ಸೋಲು
ಯಲಬುರ್ಗಾ- ಹಾಲಪ್ಪ ಆಚಾರ್ ಸೋಲು
ದೇವನಹಳ್ಳಿ- ಪಿಳ್ಳ ಮುನಿಶಾಮಪ್ಪ ಸೋಲು
ಬದಾಮಿ- ಎಸ್ಟಿ ಪಾಟೀಲ್ ಸೋಲು
ಯಾದಗಿರಿ- ವಿ ಮುಂಡಾಳ್ ಸೋಲು
ಕೊಪ್ಪಳ- ಕರಡಿ ಮಂಜುಳಾ ಸೋಲು
ಚಿತ್ರದುರ್ಗ- ತಿಪ್ಪಾರೆಡ್ಡಿ ಸೋಲು
ಮೊಳಕಾಲ್ಮೂರು-ತಿಪ್ಪೆಸ್ವಾಮಿ ಸೋಲು
ಸುರಪುರ-ರಾಜುಗೌಡ ಸೋಲು
ಬೆಳಗಾವಿ ಗ್ರಾಮಾಂತರ- ನಾಗೇಶ್ ಅಣ್ಣಪ್ಪ ಮಾನೋಲ್ಕರ್
ಕೊಳ್ಳೆಗಾಲ-ಎನ್ ಮಹೇಶ್
ಬ್ಯಾಡಗಿ- ಬಿವಿ ರುದ್ರಪ್ಪ
ಸಂಡೂರು-ಶಿಲ್ಪಾ ರಾಘವೇಂದ್ರ ಸೋಲು
ಯಾದಗಿರಿ- ವೆಂಕಟರೆಡ್ಡಿ ಮುಂಡಾಳ್ ಸೋಲು
ರೋಣ- ಕಳಕಪ್ಪ ಬಂಡಿ ಸೋಲು
ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್ ಸೋಲು
ದಾವಣಗೆರೆ ದಕ್ಷಿಣ- ಅಜಯ್ ಕುಮಾರ್ ಸೋಲು
ಕಲಘಟಗಿ- ಛಬ್ಬಿ ನಾಗರಾಜ್ ಸೋಲು
ದೇವನಗೌಡ- ಶಿವನಗೌಡ ಸೋಲು
ಜಗಳೂರು-ಎಸ್ವಿ ರಾಮಚಂದ್ರ ಸೋಲು
ಕಿತ್ತೂರು- ಡಿ ಮಹಾಂತೇಶ್ ಸೋಲು
ಹನೂರು- ಪ್ರೀತನ್ ಸೋಲು
ಗದಗ- ಅನಿಲ್ ಪಿ ಸೋಲು
ಗುಂಡ್ಲುಪೇಟೆ- ನಿರಂಜನ್ ಕುಮಾರ್ ಸೋಲು
ಶಹಾಪುರ- ಅಮೀನ್ ರೆಡ್ಡಿ ಯಳಗ ಸೋಲು
ಬಳ್ಳಾರಿ ಗ್ರಾಮೀಣ- ಶ್ರೀರಾಮುಲು ಸೋಲು
ಹೊನ್ನಾಳಿ- ರೇಣುಕಾಚಾರ್ಯ ಸೋಲು
ಚಾಮರಾಜನಗರ- ಸೋಮಣ್ಣ ಸೋಲು
(ಉಳಿಕೆ ಕ್ಷೇತ್ರಗಳ ಪಟ್ಟಿ ಅಪ್ಡೇಟ್ ಮಾಡಲಾಗುತ್ತದೆ)
Published On - 6:26 pm, Sat, 13 May 23