ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ

| Updated By: ರಾಜೇಶ್ ದುಗ್ಗುಮನೆ

Updated on: Nov 19, 2021 | 2:47 PM

ನಯನತಾರಾ ಶೀಘ್ರವೇ ವಿವಾಹವಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಂದ ಆಫರ್​ಗಳನ್ನು ರಿಜೆಕ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡ ಕೆಲ ಸಿನಿಮಾಗಳಿದ್ದು, ಅದರ ಶೂಟಿಂಗ್ ಮುಗಿಸಲೇಬೇಕಿದೆ.

ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ
ನಯನತಾರಾ
Follow us on

ತಮಿಳು, ತೆಲುಗು ಹಾಗೂ ಬಾಲಿವುಡ್​ನಲ್ಲಿ ಕನ್ನಡದ ಸಾಕಷ್ಟು ನಟಿಯರು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸೇರಿ ಸಾಕಷ್ಟು ಹೀರೋಯಿನ್​ಗಳನ್ನು ಪರಭಾಷೆಗಳಿಂದ ಆಫರ್​ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty), ಪೂಜಾ ಹೆಗ್ಡೆ (Pooja Hegde) ಮೊದಲಾದವರು ಕೂಡ ಈ ಸಾಲಿನಲ್ಲಿ ಇದ್ದಾರೆ. ಈಗ ನಟಿ ನಯನತಾರಾ (Nayanthara) ಅವರಿಗೆ ಸಿಕ್ಕಿದ್ದ ಆಫರ್​ಅನ್ನು ಕನ್ನಡದ ನಟಿ ಬಾಚಿಕೊಂಡಿದ್ದಾರೆ. ಯಾರವರು? ಶ್ರದ್ಧಾ ಶ್ರೀನಾಥ್ (Shraddha Srinath)​. ಅದ್ಭುತ ನಟನೆ ಮೂಲಕ ಹೆಸರು ಮಾಡಿರುವ ಶ್ರದ್ಧಾ ಈಗ ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ನಯನತಾರಾ ಶೀಘ್ರವೇ ವಿವಾಹವಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಂದ ಆಫರ್​ಗಳನ್ನು ರಿಜೆಕ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡ ಕೆಲ ಸಿನಿಮಾಗಳಿದ್ದು, ಅದರ ಶೂಟಿಂಗ್ ಮುಗಿಸಲೇಬೇಕಿದೆ. ಶಾರುಖ್​ ಖಾನ್​ ಹಾಗೂ ನಿರ್ದೇಶಕ ಅಟ್ಲೀ ಸಿನಿಮಾದಿಂದ ನಯನತಾರಾ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಈ ಸಿನಿಮಾದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಈ ಸಿನಿಮಾ ಬದಲಿಗೆ ಯುವರಾಜ್​ ಧಯಲಾನ್​ ನಿರ್ದೇಶನದ ತಮಿಳು ಸಿನಿಮಾದಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ, ಶಾರುಖ್​ ಸಿನಿಮಾ ಕೆಲಸಗಳು ವಿಳಂಬವಾಗಿದೆ. ನಯನತಾರಾ ಇಲ್ಲದೆ ಇರುವ ದೃಶ್ಯಗಳ ಚಿತ್ರೀಕರಣವನ್ನು ಯುವರಾಜ್​ ಮಾಡಿ ಮುಗಿಸಿದ್ದಾರೆ. ಅಟ್ಲೀ ಚಿತ್ರದ ಕೆಲಸಗಳನ್ನು ಮುಗಿಸಿ ನಯನತಾರಾ ಇತ್ತ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಶಾರುಖ್​ ಸಿನಿಮಾ ಕೆಲಸಗಳು ವಿಳಂಬವಾಗುತ್ತಿರುವುದರಿಂದ ಅವರಿಗೆ ಡೇಟ್​ ಹೊಂದಿಸೋದು ಕಷ್ಟವಾಗುತ್ತಿದೆ. ಹೀಗಾಗಿ, ಅವರು ಯುವರಾಜ್​ ನಿರ್ದೇಶನದ ಚಿತ್ರದಿಂದ ಹೊರ ಬಂದಿದ್ದಾರೆ.

ನಯನತಾರಾ ಬದಲಿಗೆ ಶ್ರದ್ಧಾ ಅವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಿನಿಮಾ ನಿರ್ಮಾಪಕ ಎಸ್​.ಆರ್. ಪ್ರಭು ಅವರು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಶ್ರದ್ಧಾ ಅಭಿಮಾನಿಗಳ ಖುಷಿ ಹೆಚ್ಚಿದೆ. ಕನ್ನಡದ ಯು-ಟರ್ನ್​ ಸಿನಿಮಾ ಶ್ರದ್ಧಾಗೆ ಖ್ಯಾತಿ ತಂದು ಕೊಟ್ಟಿತು. ಈ ಸಿನಿಮಾ ತೆರೆಕಂಡ ನಂತರ ಸಾಕಷ್ಟು ಆಫರ್​ಗಳು ಅವರಿಗೆ ಬಂದವು.

ಇದನ್ನೂ ಓದಿ: ಪ್ರಿಯಕರನ​ ಬದಲು ಮರದ ಜತೆ ನಯನತಾರಾ ಮದುವೆ; ಏನಿದು ಸಮಾಚಾರ?