‘ಇದು ನನ್ನ ಅಡ್ಡಾ’: ‘ಪುಷ್ಪ’ ರಿಲೀಸ್​ಗೂ ಮುನ್ನ ಮಾಸ್​ ಆಗಿ ವಾರ್ನಿಂಗ್​ ಕೊಟ್ಟ ಅಲ್ಲು ಅರ್ಜುನ್​

Eyy Bidda Idhi Naa Adda: ತೆಲುಗು, ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲಿ ‘ಪುಷ್ಪ’ ರಿಲೀಸ್​ ಆಗಲಿದೆ. ಈಗ ಬಂದಿರುವ ‘ಏ ಬಿಡ್ಡಾ ಇದಿ ನಾ ಅಡ್ಡಾ’ ಹಾಡು ಸಹ ಈ ಐದೂ ಭಾಷೆಗಳಲ್ಲಿ ಬಿಡುಗಡೆ ಆಗಿದೆ.

‘ಇದು ನನ್ನ ಅಡ್ಡಾ’: ‘ಪುಷ್ಪ’ ರಿಲೀಸ್​ಗೂ ಮುನ್ನ ಮಾಸ್​ ಆಗಿ ವಾರ್ನಿಂಗ್​ ಕೊಟ್ಟ ಅಲ್ಲು ಅರ್ಜುನ್​
ಅಲ್ಲು ಅರ್ಜುನ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 19, 2021 | 1:43 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪುಷ್ಪ’ ಚಿತ್ರ (Pushpa Movie) ಮುಂಚೂಣಿಯಲ್ಲಿದೆ. ಅಲ್ಲು ಅರ್ಜುನ್​ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಈ ಸಿನಿಮಾದ ರಿಲೀಸ್​ ಡೇಟ್​ (Pushpa Release Date) ಹತ್ತಿರ ಆಗುತ್ತಿದೆ. ಡಿ.17ರಂದು ಅದ್ದೂರಿಯಾಗಿ ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ‘ಪುಷ್ಪ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡುತ್ತಿರುವ ಚಿತ್ರತಂಡವು ಸಿನಿಪ್ರಿಯರ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ಸಾಮಿ ಸಾಮಿ’, ‘ಶ್ರೀವಲ್ಲಿ’ ಹಾಡುಗಳನ್ನು ಜನರು ಇಷ್ಟಪಟ್ಟಿದ್ದಾರೆ. ಈಗ ‘ಪುಷ್ಪ’ ಚಿತ್ರದ ಇನ್ನೊಂದು ಹಾಡು ರಿಲೀಸ್​ ಆಗಿದೆ. ‘ಏ ಬಿಡ್ಡಾ ಇದಿ ನಾ ಅಡ್ಡಾ’ (Eyy Bidda Idhi Naa Adda) ಸಾಂಗ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಅಲ್ಲು ಅರ್ಜುನ್​ ಅವರು ಪಕ್ಕಾ ಮಾಸ್​ ಆಗಿ ಅಬ್ಬರಿಸಿದ್ದಾರೆ. 

ತೆಲುಗು, ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲಿ ‘ಪುಷ್ಪ’ ರಿಲೀಸ್​ ಆಗಲಿದೆ. ಈಗ ಬಂದಿರುವ ‘ಏ ಬಿಡ್ಡಾ ಇದಿ ನಾ ಅಡ್ಡಾ’ ಕೂಡ ಈ ಐದೂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಭಾರಿ ವೀಕ್ಷಣೆ ಕಂಡಿದೆ. ಕನ್ನಡ ವರ್ಷನ್​ಗೆ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರು ಧ್ವನಿ ನೀಡಿದ್ದಾರೆ. ‘ಇದಿ ನಾ ಅಡ್ಡಾ’ (ಇದು ನನ್ನ ಅಡ್ಡಾ) ಎನ್ನುತ್ತ ಅಲ್ಲು ಅರ್ಜುನ್​ ಅವರು ಸಿನಿಮಾದಲ್ಲಿ ಯಾರಿಗೆ ವಾರ್ನಿಂಗ್​ ಕೊಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್​ ಮಾತ್ರ ಬಿಡುಗಡೆ ಆಗುತ್ತಿದೆ.

ನಿರ್ದೇಶಕ ಸುಕುಮಾರ್​ ಅವರ ಬಹುತೇಕ ಸಿನಿಮಾಗಳಲ್ಲಿ ಒಂದು ಐಟಂ ಸಾಂಗ್​ ಇರುತ್ತದೆ. ಅದೇ ರೀತಿ ‘ಪುಷ್ಪ’ ಸಿನಿಮಾದಲ್ಲೂ ಒಂದು ಭರ್ಜರಿ ಐಟಂ ಸಾಂಗ್​ ಇಟ್ಟಿದ್ದಾರಂತೆ. ಈ ಹಾಡಿನಲ್ಲಿ ನರ್ತಿಸಲು ಈ ಮೊದಲು ಪೂಜಾ ಹೆಗ್ಡೆ ಮತ್ತು ಸನ್ನಿ ಲಿಯೋನ್​ ಅವರಿಗೆ ಆಫರ್​ ನೀಡಲಾಗಿತ್ತು. ಆದರೆ ಆ ನಟಿಯರು ಒಪ್ಪಿಕೊಂಡಿಲ್ಲ. ಅಂತಿಮವಾಗಿ ಸಮಂತಾ ಅವರು ಒಪ್ಪಿಕೊಂಡಿದ್ದಾರೆ. ಈ ಹಾಡಿಗಾಗಿ ಅವರು ಒಂದೂವರೆ ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಮಾಹಿತಿ ಹಬ್ಬಿದೆ.

ಇದನ್ನೂ ಓದಿ:

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

Puneeth Rajkumar: ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!