ನನ್ನ ಕಾಲ್ಗುಣ ಸರಿ ಇಲ್ಲ ಎಂದರು; ನಟಿ ಶ್ರುತಿ ಹಾಸನ್ ಬೇಸರದ ಮಾತು

Shruti Haasan: ಶ್ರುತಿ ಹಾಸನ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ದುರಾದೃಷ್ಟ ನಟಿ ಎಂಬ ಟೀಕೆ ಎದುರಿಸಿದ್ದರು. ಆದರೆ, ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ಅವರ ಸಿನಿಮಾದಿಂದಾಗಿ ಅವರು ಯಶಸ್ವಿಯಾದರು. ಇಂದು ಅವರು ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು "ಕೂಲಿ," "ಟ್ರೇನ್," "ಜನ ನಾಯಗನ್," ಮತ್ತು "ಸಲಾರ್ 2" ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ನನ್ನ ಕಾಲ್ಗುಣ ಸರಿ ಇಲ್ಲ ಎಂದರು; ನಟಿ ಶ್ರುತಿ ಹಾಸನ್ ಬೇಸರದ ಮಾತು
Shruti Haasan
Edited By:

Updated on: Jul 28, 2025 | 7:55 AM

ಒಂದು ಸಿನಿಮಾ ಸೋತರೆ ಅದು ಹೇಗೆ ಸೋತಿತು ಎಂದು ನೋಡುವ ಬದಲು ಅನೇಕರು ನಟಿಯರನ್ನು ದೂಷಿಸಿದ್ದು ಇದೆ. ಆ ನಟಿ ಇದ್ದಿದ್ದರಿಂದಲೇ ಸಿನಿಮಾ ಸೋತಿತು ಎಂದು ಹೇಳಿದನ್ನು ನೀವು ಕೇಳಿರಬಹುದು. ನಟಿ ಶ್ರುತಿ ಹಾಸನ್ (Shruti Haasan) ಅವರು ಇದನ್ನೇ ಅನುಭವಿಸಿದ್ದರು. ಅವರ ಕಾಲ್ಗುಣ ಸರಿ ಇಲ್ಲ, ಐರನ್ ಲೆಗ್ ಎಂದೆಲ್ಲ ಹೇಳಿದ ಉದಾಹರಣೆ ಇದೆ. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಅವರು ಬ್ಯುಸಿ ನಟಿಯರಲ್ಲೊಬ್ಬರಾಗಿದ್ದಾರೆ.

ಶ್ರುತಿ ಹಾಸನ್ ಅವರು ಬಾಲ ಕಲಾವಿದಳಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಹೇ ರಾಮ್’ ಅವರು ನಟಿಸಿದ ಮೊದಲ ಸಿನಿಮಾ. ಇದು 2000ನೇ ಇಸ್ವಿಯಲ್ಲಿ ಮೂಡಿ ಬಂತು. 2009ರಲ್ಲಿ ‘ಲಕ್’ ಹೆಸರಿನ ಚಿತ್ರ ಬಂತು. ಈ ಸಿನಿಮಾ ಮೂಲಕ ಅವರು ನಟಿಯಾಗಿ ಪರಚಿಯಗೊಂಡರು. ಈ ವೇಳೆ ಅವರು ಮೂರು ವರ್ಷ ಸೈಕಲ್ ಹೊಡೆದರು. ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’ ಸಿನಿಮಾ 2012ರಲ್ಲಿ ಮೂಡಿ ಬಂತು. ಇದಕ್ಕೆ ಅವರು ನಾಯಕಿ. ಆ ಬಳಿಕ ಅವರು ನಟಿಸಿದ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ಆರಂಭದಲ್ಲಿ ಅವರನ್ನು ಐರನ್ ಲೆಗ್ ಎನ್ನುತ್ತಿದ್ದರು.

ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಹಾಗೂ ನಿರ್ದೇಶಕ ಹರೀಶ್ ಶಂಕರ್​ಗೆ ಅವರು ಧನ್ಯವಾದ ಹೇಳಿದ್ದಾರೆ. ಅವರನ್ನು ಹಾಕಿಕೊಂಡರೆ ಸಿನಿಮಾ ಸೋಲುತ್ತದೆ ಎಂಬ ಟಾಕ್ ಇದ್ದರೂ ಧೈರ್ಯ ಮಾಡಿ ಅವರಿಗೆ ಅವಕಾಶ ಕೊಟ್ಟರು. ಇದರಿಂದ ಗೆಲುವು ಸಿಕ್ಕಿತು. ಅಲ್ಲದೆ, ಶ್ರುತಿ ಹಾಸನ್ ಗೆಲ್ಲಲು ಸಹಕಾರಿ ಆಯಿತು.

ಇದನ್ನೂ ಓದಿ:ರಜನೀಕಾಂತ್ ಸಿನಿಮಾಕ್ಕಾಗಿ ಒಳ್ಳೆಯ ಪಾತ್ರವುಳ್ಳ ಸಿನಿಮಾ ಬಿಟ್ಟ ಶ್ರುತಿ ಹಾಸನ್

ಅದೃಷ್ಟವಂತೆ, ದುರದೃಷ್ಟವಂತೆ ಎಂಬ ಎರಡೂ ವಿಚಾರಗಳು ಅವರಿಗೆ ಇಷ್ಟ ಆಗೋದಿಲ್ಲ. ನಟಿಯಾಗಿ ಕೆಲಸ ಎಂಜಾಯ್ ಮಾಡೋದು ಎಂದರೆ ಅವರಿಗೆ ಇಷ್ಟ. ‘ನನಗೆ ಸಿನಿಮಾಗಳು ಇಷ್ಟ. ನಾನು ಅದನ್ನು ಮಾಡಿಕೊಂಡು ಹೋದರೆ ಸಾಕು’ ಎಂದು ಹೇಳಿಕೊಂಡಿದ್ದಾರೆ ಶ್ರುತಿ.

ಸದ್ಯ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಕೂಲಿ’, ‘ಟ್ರೇನ್’ ‘ಜನ ನಾಯಗನ್’, ‘ಸಲಾರ್ 2’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ‘ಕೂಲಿ’ ಚಿತ್ರದಲ್ಲಿ ರಜನಿ ಹೀರೋ. ‘ಜನ ನಾಯಗನ್’ಗೆ ದಳಪತಿ ವಿಜಯ್ ನಾಯಕ. ಈ ಕಾರಣಕ್ಕೆ ಅವರ ಅದೃಷ್ಟ ಖುಲಾಯಿಸುವ ಸೂಚನೆ ಸಿಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:50 pm, Sat, 26 July 25