SIIMA Awards 2023: ಪ್ರಶಸ್ತಿ ಗೆದ್ದ ತೆಲುಗು ಸಿನಿಮಾಗಳಿವು: ‘RRR’ಗೆ ಸಿಗಲಿಲ್ಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ

|

Updated on: Sep 17, 2023 | 12:04 AM

SIIMA 2023: ದುಬೈನ ವರ್ಲ್ಡ್​ ಟ್ರೇಡ್ ಸೆಂಟರ್​ನಲ್ಲಿ ನಿನ್ನೆ (ಸೆಪ್ಟೆಂಬರ್ 15) ನಡೆದ ಸೈಮಾ 2023 ಪ್ರಶಸ್ತಿ ವಿತರಣೆ ಸಮಾರಂಭ ನಡೆದಿದ್ದು, ಕನ್ನಡ ಹಾಗೂ ತೆಲುಗು ಚಿತ್ರರಂಗದ ಅತ್ಯುತ್ತಮ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ.

SIIMA Awards 2023: ಪ್ರಶಸ್ತಿ ಗೆದ್ದ ತೆಲುಗು ಸಿನಿಮಾಗಳಿವು: RRRಗೆ ಸಿಗಲಿಲ್ಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ
ಸೈಮಾ-2023
Follow us on

ಸೈಮಾ 2023 (ಸೈಮಾ 2023) ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ ಹಾಗೂ ಇಂದು (ಸೆಪ್ಟೆಂಬರ್ 16) ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳ ಅತ್ಯುತ್ತಮ ಸಿನಿಮಾಗಳನ್ನು, ಕಲಾವಿದರನ್ನು, ತಂತ್ರಜ್ಞರನ್ನು ಗುರುತಿಸಿ ಅವರಿಗೆಲ್ಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕನ್ನಡದಲ್ಲಿ ‘ಕಾಂತಾರ’, ‘ಕೆಜಿಎಫ್ 2’, ‘777 ಚಾರ್ಲಿ’ ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಗೆದ್ದಿವೆ, ಇದೀಗ ತೆಲುಗು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ ಹಾಗೂ ಕಲಾವಿದರ ಪಟ್ಟಿ ಇಲ್ಲಿದೆ.

ಸೈಮಾ 2023 ಪ್ರಶಸ್ತಿ ಗೆದ್ದ ತೆಲುಗು ಸಿನಿಮಾಗಳು

ಅತ್ಯುತ್ತಮ ಸಿನಿಮಾ: ಸೀತಾ ರಾಮಂ

ಅತ್ಯುತ್ತಮ ನಟ: ಜೂ ಎನ್​ಟಿಆರ್ (ಆರ್​ಆರ್​ಆರ್)

ಅತ್ಯುತ್ತಮ ನಿರ್ದೇಶಕ: ಎಸ್​ಎಸ್ ರಾಜಮೌಳಿ (ಆರ್​ಆರ್​ಆರ್)

ಅತ್ಯುತ್ತಮ ಸಂಗೀತ ನಿರ್ದೇಶಕ: ಎಂಎಂ ಕೀರವಾಣಿ (ಆರ್​ಆರ್​ಆರ್)

ಅತ್ಯುತ್ತಮ ಗೀತರಚನೆಕಾರ: ಚಂದ್ರಭೋಸ್ (ಆರ್​ಆರ್​ಆರ್)

ಅತ್ಯುತ್ತಮ ಸಿನಿಮಾಟೊಗ್ರಫಿ: ಸೆಂಥಿಲ್ ಕುಮಾರ್ (ಆರ್​ಆರ್​ಆರ್)

ಅತ್ಯುತ್ತಮ ನಟಿ: ಮೃಣಾಲ್ ಠಾಕೂರ್ (ಸೀತಾ ರಾಮಂ)

ಅತ್ಯುತ್ತಮ ಹೊಸ ನಟಿ: ಮೃಣಾಲ್ ಠಾಕೂರ್ (ಸೀತಾ ರಾಮಂ)

ಅತ್ಯುತ್ತಮ ಗಾಯಕ: ರಾಮ್ ಮಿರಿಯಾಲ (ಡಿಕೆ ಟಿಲ್ಲು)

ಭರವಸೆಯ ಹೊಸ ಪ್ರತಿಭೆ: ಬೆಲ್ಲಂಕೊಂಡ ಗಣೇಶ್

ಅತ್ಯುತ್ತಮ ಹೊಸ ನಿರ್ಮಾಪಕರು: ಶರತ್-ಅನುರಾಗ್

ಸೆನ್ಸೇಷನ್ ಆಫ್​ ದಿ ಇಯರ್: ಕಾರ್ತಿಕೇಯ 2

ಅತ್ಯುತ್ತಮ ನಟಿ (ಕ್ರಿಟಿಕ್ಸ್): ಶ್ರೀಲೀಲಾ (ಧಮಾಕಾ)

ಅತ್ಯುತ್ತಮ ನಟ (ಕ್ರಿಟಿಕ್ಸ್): ಅಡವಿಶೇಷ್ (ಮೇಜರ್)

ಇದನ್ನೂ ಓದಿ: SIIMA Awards 2023: ಸೈಮಾ ಅವಾರ್ಡ್​ ಗೆದ್ದ ರಿಷಬ್​ ಶೆಟ್ಟಿ, ಯಶ್​, ರಕ್ಷಿತ್ ಶೆಟ್ಟಿ; ಈ ಬಾರಿ ಯಾರಿಗೆಲ್ಲ ಒಲಿದಿದೆ ಪ್ರಶಸ್ತಿ?

ಇಂದು (ಸೆಪ್ಟೆಂಬರ್ 16) ರಂದು ನಡೆವ ಕಾರ್ಯಕ್ರಮದಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರು ಹಾಗೂ ಕಲಾವಿದರಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Sat, 16 September 23