SIIMA Awards 2023: ಸೈಮಾ ಅವಾರ್ಡ್​ ಗೆದ್ದ ರಿಷಬ್​ ಶೆಟ್ಟಿ, ಯಶ್​, ರಕ್ಷಿತ್ ಶೆಟ್ಟಿ; ಈ ಬಾರಿ ಯಾರಿಗೆಲ್ಲ ಒಲಿದಿದೆ ಪ್ರಶಸ್ತಿ?

SIIMA Awards 2023 Kannada Winners List: ಝಗಮಗಿಸುವ ವೇದಿಕೆಯಲ್ಲಿ 2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. 2022ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’, ‘ವಿಕ್ರಾಂತ್​ ರೋಣ’ ಮುಂತಾದ ಸಿನಿಮಾಗಳ ನಡುವೆ ಪೈಪೋಟಿ ನಡೆಯಿತು. ಈ ಬಾರಿ ಸೈಮಾ ಅವಾರ್ಡ್​ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ..

SIIMA Awards 2023: ಸೈಮಾ ಅವಾರ್ಡ್​ ಗೆದ್ದ ರಿಷಬ್​ ಶೆಟ್ಟಿ, ಯಶ್​, ರಕ್ಷಿತ್ ಶೆಟ್ಟಿ; ಈ ಬಾರಿ ಯಾರಿಗೆಲ್ಲ ಒಲಿದಿದೆ ಪ್ರಶಸ್ತಿ?
ದಿಗಂತ್​, ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಅಚ್ಯುತ್​ ಕುಮಾರ್​
Follow us
|

Updated on:Sep 16, 2023 | 7:31 AM

ದುಬೈನ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ಸೆಪ್ಟೆಂಬರ್​ 15ರ ರಾತ್ರಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ (SIIMA Awards 2023) ನಡೆದಿದೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಅನೇಕ ತಾರೆಯರು ಭಾಗಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು, ತಂತ್ರಜ್ಞರು ಸೈಮಾ ಪ್ರಶಸ್ತಿ ಪಡೆದು ಬೀಗಿದ್ದಾರೆ. ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾಗೆ ‘ಅತ್ತುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ರಿಷಬ್​ ಶೆಟ್ಟಿ (Rishab Shetty) ಅವರು ‘ಕಾಂತಾರ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ (ಕ್ರಿಟಿಕ್ಸ್​) ಅವಾರ್ಡ್​ ಪಡೆದಿದ್ದಾರೆ. ಅದೇ ಸಿನಿಮಾದಲ್ಲಿ ನಟಿಸಿದ ಅಚ್ಯುತ್​ ಕುಮಾರ್​ ಅವರು ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿನ ಅಭಿನಯಕ್ಕೆ ಯಶ್​ (Yash) ‘ಅತ್ಯುತ್ತಮ ನಟ’ ಹಾಗೂ ಶ್ರೀನಿಧಿ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.

‘ಗಾಳಿಪಟ 2’ ಸಿನಿಮಾದಲ್ಲಿನ ನಟನೆಗೆ ದಿಗಂತ್​ ಅವರು ‘ಅತ್ಯುತ್ತಮ ಪೋಷಕ ನಟ’ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಕಾಶ್​ ತುಮ್ಮಿನಾಡು ಅವರಿಗೆ ‘ಕಾಂತಾರ’ ಚಿತ್ರಕ್ಕಾಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸಿಕ್ಕಿದೆ. ‘ಡೊಳ್ಳು’ ಚಿತ್ರದ ಡೈರೆಕ್ಟರ್​ ಸಾಗರ್​ ಪುರಾಣಿಕ್​ ಅವರು ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾಗಾಗಿ ಅಜನೀಶ್​ ಬಿ. ಲೋಕನಾಥ್​ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಸಿನಿಮಾದ ‘ಸಿಂಗಾರ ಸಿರಿಯೇ..’ ಹಾಡಿಗಾಗಿ ವಿಜಯ್​ ಪ್ರಕಾಶ್​ ಅವರು ಅತ್ಯುತ್ತಮ ಗಾಯಕ ಹಾಗೂ ಪ್ರಮೋದ್​ ಮರವಂತೆ ಅವರು ಅತ್ಯುತ್ತಮ ಗೀತಸಾಹಿತಿ ಅವಾರ್ಡ್​ ಪಡೆದಿದ್ದಾರೆ.

ಝಗಮಗಿಸುವ ವೇದಿಕೆಯಲ್ಲಿ 2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. 2022ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’, ‘ವಿಕ್ರಾಂತ್​ ರೋಣ’ ಮುಂತಾದ ಸಿನಿಮಾಗಳ ನಡುವೆ ಪೈಪೋಟಿ ನಡೆಯಿತು. ಈ ಬಾರಿ ಸೈಮಾ ಅವಾರ್ಡ್​ ಗೆದ್ದವರ ಪೂರ್ತಿ ಪಟ್ಟಿ ಇಲ್ಲಿದೆ..

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್​ 2, 777 ಚಾರ್ಲಿ

ಅತ್ಯುತ್ತಮ ನಟ: ಯಶ್​ (ಕೆಜಿಎಫ್​: ಚಾಪ್ಟರ್​ 2) ಅತ್ಯುತ್ತಮ ನಟಿ: ಶ್ರೀನಿಧಿ ಶೆಟ್ಟಿ (ಕೆಜಿಎಫ್​: ಚಾಪ್ಟರ್​ 2) ಅತ್ಯುತ್ತಮ ನಟ (ಕ್ರಿಟಿಕ್ಸ್​): ರಿಷಬ್​ ಶೆಟ್ಟಿ (ಕಾಂತಾರ) ಅತ್ಯುತ್ತಮ ಸಿನಿಮಾ: 777 ಚಾರ್ಲಿ (ನಿರ್ದೇಶನ- ಕಿರಣ್​ ರಾಜ್​) ಅತ್ಯುತ್ತಮ ಸಂಗೀತ: ಅಜನೀಶ್​ ಬಿ. ಲೋಕನಾಥ್​ (ಕಾಂತಾರ) ಅತ್ಯುತ್ತಮ ಹಾಸ್ಯನಟ: ಪ್ರಕಾಶ್​ ತುಮ್ಮಿನಾಡು (ಕಾಂತಾರ) ಅತ್ಯುತ್ತಮ ಗಾಯಕ: ವಿಜಯ್​ ಪ್ರಕಾಶ್​ (ಸಿಂಗಾರ ಸಿರಿಯೇ) ಅತ್ಯುತ್ತಮ ಪೋಷಕ ನಟ: ದಿಗಂತ್​ ಮಂಚಾಲೆ (ಗಾಳಿಪಟ 2) ಅತ್ಯುತ್ತಮ ಖಳನಟ: ಅಚ್ಯುತ್​ ಕುಮಾರ್​ (ಕಾಂತಾರ)

ಇದನ್ನೂ ಓದಿ: ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023: ನಾಮಿನೇಟ್ ಆದ ‘ಕಾಂತಾರ’, ‘ಹದಿನೇಳೆಂಟು’ ಸಿನಿಮಾ

ಅತ್ಯುತ್ತಮ ಗಾಯಕಿ: ಸುನಿಧಿ ಚೌಹಾಣ್​ (ರಾರಾ ರಕ್ಕಮ್ಮ) ಅತ್ಯುತ್ತಮ ಹೊಸ ನಟ: ಪೃಥ್ವಿ ಶ್ಯಾಮನೂರು (ಪದವಿ ಪೂರ್ವ) ಅತ್ಯುತ್ತಮ ಛಾಯಾಗ್ರಹಣ: ಭುವನ್​ ಗೌಡ (ಕೆಜಿಎಫ್​ 2) ಅತ್ಯುತ್ತಮ ನಟಿ (ಕ್ರಿಟಿಕ್ಸ್​): ಸಪ್ತಮಿ ಗೌಡ (ಕಾಂತಾರ)

ಇದನ್ನೂ ಓದಿ: ಆಸ್ಕರ್​ಗೆ ಕಾಂತಾರ​ ಪೈಪೋಟಿ, ಕಮಲ್​ ಪತ್ರ ಸೇರಿದಂತೆ ಅನೇಕ ವಿಚಾರಕ್ಕೆ ರಿಷಬ್​ ಶೆಟ್ಟಿ ಪ್ರತಿಕ್ರಿಯೆ

ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ): ರಕ್ಷಿತ್​ ಶೆಟ್ಟಿ (777 ಚಾರ್ಲಿ) ಅತ್ಯುತ್ತಮ ಹೊಸ ನಟಿ: ನೀತಾ ಅಶೋಕ್​ (ವಿಕ್ರಾಂತ್​ ರೋಣ) ಅತ್ಯುತ್ತಮ ಹೊಸ ನಿರ್ಮಾಣ: ಅಪೇಕ್ಷಾ ಪುರೋಹಿತ್​, ಪವನ್​ ಒಡೆಯರ್​ (ಡೊಳ್ಳು) ಅತ್ಯುತ್ತಮ ಪೋಷಕ ನಟಿ: ಶುಭಾ ರಕ್ಷಾ (ಹೋಮ್​ ಮಿನಿಸ್ಟರ್​)

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:17 am, Sat, 16 September 23

ತಾಜಾ ಸುದ್ದಿ
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​