50 ಡೇಸ್ ಸಂಭ್ರಮದ ಬಳಿಕ ‘ಜೀ 5’ ಒಟಿಟಿಯಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರಸಾರ
ರಮ್ಯಾ ಅವರದ್ದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅತಿಥಿ ಪಾತ್ರ. ಪವನ್ ಕುಮಾರ್, ರಿಷಬ್ ಶೆಟ್ಟಿ, ಶೈನ್ ಶೆಟ್ಟಿ ಕೂಡ ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ. ಎಲ್ಲರಿಂದಾಗಿ ಈ ಸಿನಿಮಾದ ಮೆರುಗು ಹೆಚ್ಚಿದೆ. ಯುವ ಪ್ರೇಕ್ಷಕರಿಗೆ ಈ ಚಿತ್ರ ಸಖತ್ ಇಷ್ಟ ಆಗಿದೆ. ಚಿತ್ರಮಂದಿರದಲ್ಲಿ ಗೆದ್ದ ಈ ಸಿನಿಮಾವನ್ನು ಈಗ ಒಟಿಟಿ ಮೂಲಕ ನೋಡಬಹುದು.
2023ರಲ್ಲಿ ಗೆಲುವು ಕಂಡ ಕನ್ನಡ ಸಿನಿಮಾಗಳಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಕೂಡ ಸದ್ದು ಮಾಡಿದೆ. ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಭರಪೂರ ನಗಿಸಿದ ಈ ಸಿನಿಮಾ 50 ದಿನಗಳನ್ನು ಪೂರೈಸಿದೆ. ಈಗ ಈ ಚಿತ್ರ ಒಟಿಟಿ ಅಂಗಳಕ್ಕೆ ಎಂಟ್ರಿ ನೀಡಿದೆ. ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿದ ಈ ಸೂಪರ್ ಹಿಟ್ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ‘ಜೀ 5’ (Zee5) ಸಂಸ್ಥೆಯ ಪಾಲಾಗಿದೆ. ಥಿಯೇಟರ್ನಲ್ಲಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಈಗ ಒಟಿಟಿ (OTT) ಪ್ಲಾಟ್ಫಾರ್ಮ್ನಲ್ಲೂ ಗಮನ ಸೆಳೆಯುತ್ತಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಕಥೆ ಸಖತ್ ಭಿನ್ನವಾಗಿದೆ. ಈ ಸಿನಿಮಾದ ಗೆಲುವಿಗೆ ಇದು ಮುಖ್ಯ ಕಾರಣ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ಆ್ಯಕ್ಷನ್-ಕಟ್ ಹೇಳಿದ ಮೊದಲ ಸಿನಿಮಾ ಇದು. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ಆರಂಭದ ದಿನಗಳಲ್ಲೇ ಪುನೀತ್ ರಾಜ್ಕುಮಾರ್ ಅವರಿಂದ ಬೆಂಬಲ ಸಿಕ್ಕಿತ್ತು. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಕೊಡುವ ಮೂಲಕ ಅವರ ಹೊಸಬರ ಬೆನ್ನು ತಟ್ಟಿದ್ದರು. ಅಪ್ಪು ಮತ್ತು ಪ್ರೇಕ್ಷಕರ ಆಶೀರ್ವಾದದಿಂದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಯಶಸ್ಸು ಕಂಡಿತು. ಅನೇಕ ಸ್ಟಾರ್ ಕಲಾವಿದರು ಈ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದ್ದಾರೆ.
The mad fun and adventurous chaos of the hostel is here and you can’t miss it!#ComeOnBoys !!!
STREAMING NOWhttps://t.co/3ckwrBL2y4#HostelHudugaruBekagiddareOnZee5 #HHBOnZee5@ParamvahStudios @zeestudiossouth #GulmoharFilms #VarunStudios #hostelhudugaruarmy pic.twitter.com/XyYfZDmP23
— ZEE5 Kannada (@ZEE5Kannada) September 14, 2023
ನಟಿ ರಮ್ಯಾ ದಿವ್ಯ ಸ್ಪಂದನಾ ಅವರದ್ದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅತಿಥಿ ಪಾತ್ರ. ಅದೇ ರೀತಿ ಪವನ್ ಕುಮಾರ್, ರಿಷಬ್ ಶೆಟ್ಟಿ, ಶೈನ್ ಶೆಟ್ಟಿ ಕೂಡ ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ. ಎಲ್ಲರಿಂದಾಗಿ ಈ ಸಿನಿಮಾದ ಮೆರುಗು ಹೆಚ್ಚಿದೆ. ಹುಡುಗರ ಹಾಸ್ಟೆಲ್ನಲ್ಲಿ ನಡೆಯುವ ತರಲೆ-ತಮಾಷೆಯೇ ಈ ಚಿತ್ರದ ಮುಖ್ಯ ಕಥಾವಸ್ತು. ಯುವ ಪ್ರೇಕ್ಷಕರಿಗೆ ಈ ಸಿನಿಮಾ ಸಖತ್ ಇಷ್ಟ ಆಗಿದೆ. ಈಗ ಒಟಿಟಿ ಮೂಲಕ ಮನೆಯಲ್ಲೇ ಕುಳಿತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನೋಡಬಹುದು.
ಕನ್ನಡ ಮಾತ್ರವಲ್ಲದೇ ತೆಲುಗಿಗೆ ‘ಬಾಯ್ಸ್ ಹಾಸ್ಟೆಲ್’ ಹೆಸರಿನಲ್ಲಿ ಡಬ್ ಆಗಿ ಈ ಸಿನಿಮಾ ತೆರೆಕಂಡಿತು. ಅಲ್ಲಿಯೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ವರುಣ್ ಗೌಡ, ಪ್ರಜ್ವಲ್ ಬಿ.ಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಎಸ್. ಕಶ್ಯಪ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘ಪರಂವಾ ಪಿಕ್ಚರ್ಸ್’ ಮೂಲಕ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದ ಗೆಲುವಿನಲ್ಲಿ ಅಜನೀಶ್ ಲೋಕನಾಥ್ ಅವರ ಸಂಗೀತದ ಕೊಡುಗೆ ಕೂಡ ಇದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.