ಸೈಮಾನಲ್ಲಿ ಮಿಂಚಿದ ‘ಅಮರನ್’, ಪ್ರಶಸ್ತಿ ಗೆದ್ದ ತಮಿಳು ಸಿನಿಮಾಗಳ ಪಟ್ಟಿ ಇಲ್ಲಿದೆ

SIIMA 2025 Tamil: ದುಬೈನಲ್ಲಿ ನಡೆಯುತ್ತಿರುವ ಸೈಮಾ 2025ರಲ್ಲಿ ನಿನ್ನೆ ತಡರಾತ್ರಿ ಅತ್ಯುತ್ತಮ ತಮಿಳು ಮತ್ತು ಮಲಯಾಳಂ ಸಿನಿಮಾಗಳು, ನಟ-ನಟಿಯರು ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ತಮಿಳಿನಲ್ಲಿ ‘ಅಮರನ್’, ‘ಮಹಾರಾಜ’, ‘ವಾಳೈ’, ‘ಲಬ್ಬರ್ ಪಂಡು’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಇವುಗಳಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳು ಯಾವುವು?

ಸೈಮಾನಲ್ಲಿ ಮಿಂಚಿದ ‘ಅಮರನ್’, ಪ್ರಶಸ್ತಿ ಗೆದ್ದ ತಮಿಳು ಸಿನಿಮಾಗಳ ಪಟ್ಟಿ ಇಲ್ಲಿದೆ
Siima 2025

Updated on: Sep 07, 2025 | 3:15 PM

ಸೈಮಾ 2025 ದುಬೈನಲ್ಲಿ ನಿನ್ನೆ ರಾತ್ರಿಯಷ್ಟೆ ಸಮಾರೋಪಗೊಂಡಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಇದಾಗಿದೆ. ಸೆಪ್ಟೆಂಬರ್ 5 ರಂದು ರಾತ್ರಿ ಅತ್ಯುತ್ತಮ ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಕನ್ನಡದಲ್ಲಿ ದುನಿಯಾ ವಿಜಯ್, ಉಪೇಂದ್ರ, ಅತ್ಯುತ್ತಮ ನಟರಾಗಿ ಸುದೀಪ್ ಇನ್ನೂ ಹಲವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ತೆಲುಗಿನಲ್ಲಿ ‘ಪುಷ್ಪ 2’ ಸಿನಿಮಾ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನಿನ್ನೆ ರಾತ್ರಿ (ಸೆಪ್ಟೆಂಬರ್ 06) ತಮಿಳು ಮತ್ತು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾ ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ರಾಷ್ಟ್ರಪ್ರಶಸ್ತಿ ವಂಚಿತ ಮಲಯಾಳಂ ಸಿನಿಮಾ ‘ಆಡುಜೀವಿತಂ’ಗೆ ಕೆಲವು ಪ್ರಮುಖ ಪ್ರಶಸ್ತಿಗಳು ಸಂಧಿವೆ. ತಮಿಳಿನಲ್ಲಿ ‘ಅಮರನ್’, ‘ಮಹಾರಾಜ’, ‘ವಾಳೈ’, ‘ಲಬ್ಬರ್ ಪಂಡು’, ‘ತಂಗಲಾನ್’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳು ಪರಸ್ಪರ ಸ್ಪರ್ಧೆಯಲ್ಲಿದ್ದವು, ಯಾವ ಸಿನಿಮಾಗಳಿಗೆ ಯಾವ ವಿಭಾಗಗಳಲ್ಲಿ ಪ್ರಶಸ್ತಿ ದೊರಕಿದೆ? ಇಲ್ಲಿದೆ ನೋಡಿ ಪಟ್ಟಿ…

ಪ್ರಶಸ್ತಿ ಗೆದ್ದ ತಮಿಳು ಸಿನಿಮಾಗಳ ಪಟ್ಟಿ

ಅತ್ಯುತ್ತಮ ಸಿನಿಮಾ: ಅಮರನ್

ಅತ್ಯುತ್ತಮ ನಿರ್ದೇಶಕ: ರಾಜ್​ಕುಮಾರ್ ಪೆರಿಯಸ್ವಾಮಿ (ಅಮರನ್)

ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಅಮರನ್)

ಅತ್ಯುತ್ತಮ ವಿಲನ್: ಅನುರಾಗ್ ಕಶ್ಯಪ್ (ಮಹಾರಾಜ)

ಅತ್ಯುತ್ತಮ ಹಾಸ್ಯನಟ: ಬಾಲ ಸರವಣನ್ (ಲಬ್ಬರ್ ಪಂಡು)

ಅತ್ಯುತ್ತಮ ನಿರ್ದೇಶಕ ವಿಮರ್ಶಕರ ಆಯ್ಕೆ: ನಿತಿಲನ್ ಸ್ವಾಮಿನಾಥನ್ (ಮಹಾರಾಜ)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಕಾರ್ತಿ (ಮೇಯಳಗನ್)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ದುಶಾರ (ರಾಯನ್)

ಉದಯೋನ್ಮುಖ ತಾರೆ: ಹರೀಶ್ ಕಲ್ಯಾಣ್ (ಲಬ್ಬರ್ ಪಂಡು)

ಇದನ್ನೂ ಓದಿ:SIIMA 2025 Telugu: ಅಲ್ಲು ಅರ್ಜುನ್ ಅತ್ಯುತ್ತಮ ನಟ, ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ

ಅತ್ಯುತ್ತಮ ಪೋಷಕ ನಟ: ಹರೀಶ್ ಕಲ್ಯಾಣ್ (ವಾಳೈ)

ಅತ್ಯುತ್ತಮ ಪೋಷಕ ನಟಿ: ಅಭಿರಾಮಿ (ಮಹಾರಾಜ)

ಅತ್ಯುತ್ತಮ ಹೊಸ ನಟ: ವಿಜಯ್ ಕೃಷ್ಣ (ಹಿಟ್ ಲಿಸ್ಟ್)

ಅತ್ಯುತ್ತಮ ಹೊಸ ನಟಿ: ಗೌರಿ ಪ್ರಿಯಾ (ಲವರ್)

ಅತ್ಯುತ್ತಮ ಸಂಗೀತ ನಿರ್ದೇಶಕ: ಜಿವಿ ಪ್ರಕಾಶ್ (ಅಮರನ್)

ಅತ್ಯುತ್ತಮ ಗಾಯಕ: ಹರಿ ಚರಣ್ (ಹೇ ಮಿನ್ನಲೆ-ಅಮರನ್)

ಅತ್ಯುತ್ತಮ ಗಾಯಕಿ: ಸಿಂಧೂರಿ (ಮಿನಿಕಿ ಮಿನಿಕಿ-ತಂಗಾಲನ್)

ಅತ್ಯುತ್ತಮ ಗೀತ ಸಾಹಿತಿ: ಉಮಾದೇವಿ ಕುಪ್ಪನ್ (ಪೋರೆ ನಾ ಪೋರೆನ್)

ಅತ್ಯುತ್ತಮ ಸಿನಿಮಾಟೊಗ್ರಫಿ: ಸಿಎಚ್ ಸಾಯಿ (ಅಮರನ್)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ