SIIMA 2026: ಮೊದಲ ದಿನ ಕನ್ನಡ ಚಿತ್ರರಂಗದ ಹಲವರಿಗೆ ಪ್ರಶಸ್ತಿ

ದಕ್ಷಿಣ ಭಾರತದ ಅತ್ಯುತ್ತಮ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರಿಗೆ ನೀಡಲಾಗುವ ‘ಸೈಮಾ 2026’ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ (ಸೆಪ್ಟೆಂಬರ್ 12) ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ಹಲವಾರು ಗಣ್ಯ ಕಲಾವಿದರು ಶೋನಲ್ಲಿ ಭಾಗಿ ಆಗಿದ್ದರು. ಮೊದಲ ದಿನ ಕನ್ನಡ ಹಾಗೂ ತೆಲುಗಿನ ಅತ್ಯುತ್ತಮ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಅವರ ಪಟ್ಟಿ ಇಲ್ಲಿದೆ ನೋಡಿ....

SIIMA 2026: ಮೊದಲ ದಿನ ಕನ್ನಡ ಚಿತ್ರರಂಗದ ಹಲವರಿಗೆ ಪ್ರಶಸ್ತಿ
Siima 2026

Updated on: Sep 13, 2026 | 3:15 PM

ಮುಖ್ಯಾಂಶಗಳು

  • ಸೈಮಾ 2026 ಪ್ರಶಸ್ತಿ ವಿತರಣಾ ಸಮಾರಂಭ
  • ಸೈಮಾ 2026 ಈ ಬಾರಿ ಬೆಂಗಳೂರಿನಲ್ಲಿ ನಡೆದಿದೆ.
  • ಕನ್ನಡ ಚಿತ್ರರಂಗದ ಹಲವರಿಗೆ ಸೈಮಾ ಪ್ರಶಸ್ತಿ ಲಭಿಸಿದೆ.

ದಕ್ಷಿಣದ ನಾಲ್ಕು ಪ್ರಮುಖ ಚಿತ್ರರಂಗಗಳಾದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಒಟ್ಟಿಗೆ ಸೇರಿ ವರ್ಷದ ಅತ್ಯುತ್ತಮ ಸಿನಿಮಾ, ನಟ-ನಟಿಯರು, ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಮೂಲಕ ಸನ್ಮಾನಿಸುವ ವೇದಿಕೆಯೇ ಸೈಮಾ. ಈ ವರ್ಷ ಸೈಮಾ ಬೆಂಗಳೂರಿನಲ್ಲಿ ನಡೆದಿದೆ. ಎರಡು ದಿನ ನಡೆಯುವ ಈ ಕಾರ್ಯಕ್ರಮ ನಿನ್ನೆ (ಸೆಪ್ಟೆಂಬರ್ 12) ಪ್ರಾರಂಭವಾಗಿದ್ದು, ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ನಿನ್ನೆ ತೆಲುಗು ಮತ್ತು ಕನ್ನಡದ ಅತ್ಯುತ್ತಮ ಸಿನಿಮಾ, ಕಲಾವಿದರು ಮತ್ತು ತಂತ್ರಜ್ಙರಿಗೆ ಪ್ರಶಸ್ತಿ ನೀಡಲಾಗಿದೆ.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಎಂರ್ಟೈನರ್​ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರುಕ್ಮಿಣಿ ವಸಂತ್ ಅವರಿಗೆ ಅದೇ ಸಿನಿಮಾದ ನಟನೆಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಲಭಿಸಿದೆ. ‘ಸು ಫ್ರಂ ಸೋ’ ಸಿನಿಮಾದ ನಿರ್ದೇಶಕ ಜೆಪಿ ತುಮ್ಮಿನಾಡು ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಹ ಲಭಿಸಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅವರಿಗೆ ‘ಜೂನಿಯರ್’ ಸಿನಿಮಾಕ್ಕೆ ಭರವಸೆಯ ನಟ ಪ್ರಶಸ್ತಿ ಲಭಿಸಿತು. ‘ಏಳುಮಲೆ’ ಸಿನಿಮಾದ ನಟಿ ಪ್ರಿಯಾಂಕಾ ಅವರಿಗೆ ಭರವಸೆಯ ನಟಿ ಪ್ರಶಸ್ತಿ ಲಭಿಸಿತು. ಭಾರತಿ ವಿಷ್ಣುವರ್ಧನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯ್ತು.

ಇದನ್ನೂ ಓದಿ:‘ಸಿಟಿ ಲೈಟ್ಸ್’ ಸಿನಿಮಾ ಟ್ರೇಲರ್ ರಿಲೀಸ್; ಸಿಕ್ತು ಹ್ಯಾಟ್ರಿಕ್ ಹೀರೋ ಮೆಚ್ಚುಗೆ

ಕಾಂತಾರ ಚಾಪ್ಟರ್ 1 ಸಿನಿಮಾಕ್ಕಾಗಿ ಅಜನೀಶ್ ಲೋಕನಾಥ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ. ‘ಗತವೈಭವ’ ಸಿನಿಮಾದ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ವಿಮರ್ಶಕರ ಪ್ರಶಸ್ತಿ ಲಭಿಸಿತು. ಅನುರಾಗ್ ಕುಲಕರ್ಣಿ ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ, ಪ್ರಮೋದ್ ಮರವಂತೆ ಅವರಿಗೆ ಅತ್ಯುತ್ತಮ ಗೀತ ಸಾಹಿತಿ ಪ್ರಶಸ್ತಿ, ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿ ಪ್ರಗತಿ ಶೆಟ್ಟಿ ಅವರಿಗೆ ದೊರೆತಿದೆ. ‘ಕಮಲ್ ಶ್ರೀದೇವಿ’ ಸಿನಿಮಾದ ಅತ್ಯುತ್ತಮ ನಟನೆಗೆ ಅಕ್ಷಿತಾ ಬೋಪಯ್ಯ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿದೆ.

ತೆಲುಗಿನಲ್ಲಿ ಸಹ ಹಲವು ಕಲಾವಿದರಿಗೆ ನಿನ್ನೆ ಪ್ರಶಸ್ತಿ ನೀಡಲಾಗಿದೆ. ತೇಜ್ ಸಜ್ಜಾ ಅವರಿಗೆ ‘ಮಿರಾಯ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ‘ಕೋರ್ಟ್’ ಸಿನಿಮಾದ ನಟ ನಟಿ ಇಬ್ಬರಿಗೂ ಸಹ ಭರವಸೆಯ ನಟ-ನಟಿ ಪ್ರಶಸ್ತಿ ನೀಡಲಾಗಿದೆ. ‘ಡಾಕು ಮಹಾರಾಜ್’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳ ಅತ್ಯುತ್ತಮ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ಪೂರ್ಣ ಪಟ್ಟಿಯನ್ನು ‘ಸೈಮಾ’ ಇನ್ನಷ್ಟೆ ಬಿಡುಗಡೆ ಮಾಡಬೇಕಿದೆ. ಇಂದು (ಸೆಪ್ಟೆಂಬರ್ 13) ತಮಿಳು ಮತ್ತು ಮಲಯಾಳಂನ ಅತ್ಯುತ್ತಮ ಸಿನಿಮಾ, ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us