15 ದಿನ ಆಸ್ಪತ್ರೆಯಲ್ಲಿದ್ದರೂ ಬದುಕಲಿಲ್ಲ; ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ನಿಧನ

|

Updated on: Jul 25, 2023 | 7:39 AM

ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು.

15 ದಿನ ಆಸ್ಪತ್ರೆಯಲ್ಲಿದ್ದರೂ ಬದುಕಲಿಲ್ಲ; ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ನಿಧನ
ಜಯಂತ್
Follow us on

ಹಿರಿಯ ನಟ ಜಯಂತ್ ಸಾವರ್ಕರ್ (Jayant Savarkar) ಅವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಅವರ ಮಗ ಕೌಸ್ತುಭ್ ಸಾವರ್ಕರ್ ಅವರು ಖಚಿತಪಡಿಸಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಜಯಂತ್ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು. ‘ಸಿಂಗಂ’ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿತ್ತು. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು. ‘ಹರಿ ಓಂ ವಿಠಲ’, ‘ಗಡ್ಬಡ್​ ಗೋಂಧಾಲ್’, ‘66 ಸದಾಶಿವ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ 2011ರಲ್ಲಿ ರಿಲೀಸ್ ಆದ ‘ಸಿಂಗಂ’ ಸಿನಿಮಾದಲ್ಲಿ ಕಮಲಾಕಾಂತ್ ಭೋಸ್ಲೆ ಪಾತ್ರ ಮಾಡಿದ್ದರು. ನಾಯಕಿ ಕಾಜಲ್ ​ಅಗರ್​ವಾಲ್ ಅವರ ಅಜ್ಜನ ಪಾತ್ರ ಇದಾಗಿತ್ತು. ‘ರಾಕಿ ಹ್ಯಾಂಡ್ಸಮ್​’, ‘ವಾಸ್ತವ್​: ದಿ ರಿಯಾಲಿಟಿ’ ಮೊದಲಾದ ಚಿತ್ರಗಳಲ್ಲಿ ಜಯಂತ್ ಬಣ್ಣ ಹಚ್ಚಿದ್ದಾರೆ. ಹಿಂದಿಯಲ್ಲಿ ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ‘ಆ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವಾಗ ನಿದ್ದೆ ಬಂದಿಲ್ಲ’; ದೆವ್ವದ ಚಿತ್ರಕ್ಕೆ ಹೆದರಿದ್ರಾ ಕೀರವಾಣಿ?

‘ತಂದೆಯವರಿಗೆ 15 ದಿನಗಳ ಹಿಂದೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ, ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ’ ಎಂದು ಕೌಸ್ತುಭ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಜಯಂತ್ ಅವರಿಗೆ ಪತ್ನಿ, ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಂದು (ಜುಲೈ 25)  ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 7:09 am, Tue, 25 July 23