Sandeep Singh: ಬೆದರಿಕೆಗೆ ಹೆದರಿ ಟಿಪ್ಪು ಸುಲ್ತಾನ್​ ಕುರಿತ ಸಿನಿಮಾ ನಿರ್ಮಾಣ ನಿಲ್ಲಿಸಿ ಕ್ಷಮೆ ಕೇಳಿದ ಸಂದೀಪ್​ ಸಿಂಗ್​

Tipu Sultan Movie: ‘ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ’ ಎಂದು ಸಂದೀಪ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

Sandeep Singh: ಬೆದರಿಕೆಗೆ ಹೆದರಿ ಟಿಪ್ಪು ಸುಲ್ತಾನ್​ ಕುರಿತ ಸಿನಿಮಾ ನಿರ್ಮಾಣ ನಿಲ್ಲಿಸಿ ಕ್ಷಮೆ ಕೇಳಿದ ಸಂದೀಪ್​ ಸಿಂಗ್​
ಸಂದೀಪ್​ ಸಿಂಗ್ ಪೋಸ್ಟ್​
Follow us
ಮದನ್​ ಕುಮಾರ್​
|

Updated on: Jul 24, 2023 | 9:31 PM

ಟಿಪ್ಪು ಸುಲ್ತಾನ್​ (Tipu Sultan) ಕುರಿತು ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದ ನಿರ್ಮಾಪಕ ಸಂದೀಪ್​ ಸಿಂಗ್​ ಅವರು ಹಿಂದೆ ಸರಿದಿದ್ದಾರೆ. ಈ ಸಿನಿಮಾವನ್ನು ಅವರು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬದವರಿಗೆ ಬೆದರಿಕೆ (Threat) ಬಂದ ಹಿನ್ನೆಲೆಯಲ್ಲಿ ಸಂದೀಪ್​ ಸಿಂಗ್ (Sandeep Singh)​ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಯಾವುದೇ ಧರ್ಮದವರ ಭಾವನೆಗೆ ನೋವು ಉಂಟುಮಾಡುವ ಉದ್ದೇಶ ತಮಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಸಂದೀಪ್​ ಸಿಂಗ್​ ಈ ನಿರ್ಧಾರ ತೆಗೆದುಕೊಳ್ಳಲು ಬೇರೆಯದೇ ಕಾರಣ ಇದೆ ಎಂದು ಕೆಲವರು ಊಹಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಸಂದೀಪ್​ ಸಿಂಗ್​ ಟ್ವೀಟ್​ನಲ್ಲಿ ಏನಿದೆ?

‘ನನಗೆ, ನನ್ನ ಕುಟುಂಬದವರಿಗೆ, ನನ್ನ ಸ್ನೇಹಿತರಿಗೆ ಬೆದರಿಕೆ ಹಾಕುವುದನ್ನು ಮತ್ತು ನಿಂದಿಸುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರದ್ದಾದರೂ ಧಾರ್ಮಿಕ ಭಾವನೆಗೆ ನಾನು ಧಕ್ಕೆ ತಂದಿದ್ದರೆ ಕ್ಷಮೆ ಕೇಳುತ್ತೇನೆ. ಆ ಉದ್ದೇಶ ನನಗೆ ಇಲ್ಲ. ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ’ ಎಂದು ಸಂದೀಪ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ನೆಟ್ಟಿಗರು ಹೇಳೋದೇ ಬೇರೆ:

ಸಂದೀಪ್​ ಸಿಂಗ್​ ಅವರ ಈ ನಿರ್ಧಾರವನ್ನು ನೆಟ್ಟಿಗರೊಬ್ಬರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ‘ಇದಕ್ಕೆ ನಿಜವಾದ ಕಾರಣ ಬೇರೆ ಇದೆ. ನನ್ನ ಅನಿಸಿಕೆ ಪ್ರಕಾರ, ‘72 ಹೂರೇ’ ಮತ್ತು ‘ಅಜ್ಮೇರ್​ 92’ ಸಿನಿಮಾಗಳು ಸೋತಿವೆ. ಹಾಗಾಗಿ ಇಂಥ ಸಿನಿಮಾಗಳಿಗೆ ಯಶಸ್ಸಿನ ಗ್ಯಾರಂಟಿ ಇಲ್ಲ. ಐತಿಹಾಸಿಕ ಸಿನಿಮಾಗೆ ಬಜೆಟ್​ ಜಾಸ್ತಿ ಆಗುತ್ತದೆ. ಹಾಗಾಗಿ ಈ ಸಿನಿಮಾದ ಮೇಲೆ ಹಣ ಹಾಕೋದು ರಿಸ್ಕಿ’ ಎಂಬ ಕಮೆಂಟ್​ ಬಂದಿದೆ.

ಇದನ್ನೂ ಓದಿ: Tipu Sultan: ಟಿಪ್ಪು ಸುಲ್ತಾನ್​ ಕುರಿತು ಪ್ಯಾನ್​ ಇಂಡಿಯಾ ಸಿನಿಮಾ; ಮೋಷನ್​ ಪೋಸ್ಟರ್​ನಲ್ಲೇ ಹಲವು ಆರೋಪ

ಈ ಸಿನಿಮಾವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಬೇಕು ಎಂಬುದು ನಿರ್ಮಾಪಕರ ಆಲೋಚನೆ ಆಗಿತ್ತು. ಹಿಂದಿ, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ಮೂಡಿಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಮೇ 4ರಂದು ಈ ಎಲ್ಲ ಭಾಷೆಗಳಲ್ಲಿ ‘ಟಿಪ್ಪು’ ಸಿನಿಮಾದ ಪೋಸ್ಟರ್ ರಿಲೀಸ್​ ಮಾಡಲಾಗಿತ್ತು. ಮೋಷನ್​ ಪೋಸ್ಟರ್​ನಲ್ಲಿ ಚಿತ್ರದ ಬಗ್ಗೆ ಅನೇಕ ಆರೋಪಗಳನ್ನು ಮಾಡಲಾಗಿತ್ತು. ಆಗಲೇ ಈ ಸಿನಿಮಾದ ಬಗ್ಗೆ ವಿರೋಧ ಕೇಳಿಬಂದಿತ್ತು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.