Jawan Poster: ವಿಜಯ್​ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ ನೀಡಿದ ‘ಜವಾನ್​’ ಚಿತ್ರತಂಡ; ಹೊಸ ಪೋಸ್ಟರ್​ ಬಿಡುಗಡೆ

Vijay Sethupathi: ‘ಜವಾನ್​’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ವಿಜಯ್ ಸೇತುಪತಿ ಮತ್ತು ಶಾರುಖ್​ ಖಾನ್​ ಅವರ ಮುಖಾಮುಖಿ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ.

Jawan Poster: ವಿಜಯ್​ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ ನೀಡಿದ ‘ಜವಾನ್​’ ಚಿತ್ರತಂಡ; ಹೊಸ ಪೋಸ್ಟರ್​ ಬಿಡುಗಡೆ
ವಿಜಯ್​ ಸೇತುಪತಿ, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Jul 24, 2023 | 4:26 PM

ಬಾಲಿವುಡ್​ನ ಜನಪ್ರಿಯ ನಟ ಶಾರುಖ್ ಖಾನ್ (Shah Rukh Khan) ಅಭಿನಯಿಸುತ್ತಿರುವ ಹೊಸ ಸಿನಿಮಾ ‘ಜವಾನ್’ (Jawan) ಬಗ್ಗೆ ಜನರಿಗೆ ಇರುವ ನಿರೀಕ್ಷೆ ದೊಡ್ಡದು. ದಿನದಿಂದ ದಿನಕ್ಕೆ ಈ ನಿರೀಕ್ಷೆಯ ಮಟ್ಟ ಹೆಚ್ಚಾಗುತ್ತಲೇ ಇದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಇಂದು (ಜುಲೈ 24) ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಜವಾನ್​’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವುದು ವಿಜಯ್​ ಸೇತುಪತಿ. ಅವರ ಗೆಟಪ್​ ಹೇಗಿರಲಿದೆ ಎಂಬುದು ಈ ಫೋಸ್ಟರ್​ನಲ್ಲಿ ಗೊತ್ತಾಗಿದೆ. ವಿಜಯ್​ ಸೇತುಪತಿ (Vijay Sethupathi) ಅವರ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

‘ಜವಾನ್​’ ಸಿನಿಮಾದಲ್ಲಿನ ವಿಜಯ್ ಸೇತುಪತಿ ಅವರ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಶಾರುಖ್ ಖಾನ್ ಅವರು ಬಿಡುಗಡೆ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್​ನಲ್ಲಿ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆಯುತ್ತಿದೆ. ಆ ಮೂಲಕ ವಿಜಯ್ ಸೇತುಪತಿ ಪಾತ್ರ ಎಷ್ಟು ಭಯಂಕರವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ.

ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ಶಾರುಖ್​ ಖಾನ್​ ಅವರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ಇತ್ತೀಚೆಗಷ್ಟೇ ‘ಜವಾನ್​’ ಸಿನಿಮಾದ ಪ್ರಿವ್ಯೂ ಬಿಡುಗಡೆ ಆಗಿತ್ತು. ಅದರಲ್ಲೂ ವಿಜಯ್​ ಸೇತುಪತಿ ಅವರ ಪಾತ್ರದ ಝಲಕ್​ ಕಾಣಿಸಿತ್ತು. ಈಗ ಪೋಸ್ಟರ್​ ಮೂಲಕ ಇನ್ನಷ್ಟು ಕೌತುಕ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಸೌತ್​ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ವಿಜಯ್​ ಸೇತುಪತಿ ಅವರು ಶಾರುಖ್​ ಖಾನ್​ ಎದುರು ಹೇಗೆ ಅಬ್ಬರಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

ಇದನ್ನೂ ಓದಿ: Jawan: ‘ತಾಕತ್ತಿದ್ದರೆ ಜವಾನ್​ ಎದುರು ನಿಮ್ಮ ಸಿನಿಮಾ ರಿಲೀಸ್​ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೇರ ಸವಾಲು

‘ಜವಾನ್’ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಪ್ರಿವ್ಯೂ ವಿಡಿಯೋದಲ್ಲಿ ಶಾರುಖ್ ಖಾನ್ ಅವರ ಬೋಳು ತಲೆ ಗೆಟಪ್​ ಗಮನ ಸೆಳೆದಿದೆ. ಹಾಗೆಯೇ ನಯನತಾರಾ ಅವರು ಆ್ಯಕ್ಷನ್​ ಅವತಾರದಲ್ಲಿ ಬರುತ್ತಿದ್ದಾರೆ. ಈಗ ವಿಜಯ್ ಸೇತುಪತಿ ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆಯುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ. ಅಟ್ಲಿ ನಿರ್ದೇಶನ ಮಾಡಿರುವ ‘ಜವಾನ್​’ ಸಿನಿಮಾ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಶಾರುಖ್​ ಖಾನ್​ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್​ಟೇನ್ಮೆಂಟ್’ ಬ್ಯಾನರ್​ ಮೂಲಕ ಗೌರಿ ಖಾನ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಗೌರವ ವರ್ಮಾ ಅವರು ಸಹ-ನಿರ್ಮಾಪಕನಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್