AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sara Ali Khan: ದೇವಸ್ಥಾನ, ಮಸೀದಿ ಸುತ್ತುತ್ತ ‘ಶಾಂತಿ ಎಲ್ಲಿ ಸಿಗುತ್ತೆ’ ಎಂದು ಪ್ರಶ್ನಿಸಿದ ನಟಿ ಸಾರಾ ಅಲಿ ಖಾನ್​

ಸಿನಿಮಾ ಗೆದ್ದ ಖುಷಿಯಲ್ಲಿ ಸಾರಾ ಅಲಿ ಖಾನ್​ ಅವರು ಪಾರ್ಟಿ ಮಾಡುತ್ತಿಲ್ಲ. ಬದಲಿಗೆ, ಅನೇಕ ದೇವಾಲಯ ಮತ್ತು ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ.

Sara Ali Khan: ದೇವಸ್ಥಾನ, ಮಸೀದಿ ಸುತ್ತುತ್ತ ‘ಶಾಂತಿ ಎಲ್ಲಿ ಸಿಗುತ್ತೆ’ ಎಂದು ಪ್ರಶ್ನಿಸಿದ ನಟಿ ಸಾರಾ ಅಲಿ ಖಾನ್​
ಸಾರಾ ಅಲಿ ಖಾನ್​
ಮದನ್​ ಕುಮಾರ್​
|

Updated on: Jul 25, 2023 | 10:04 AM

Share

ಬಾಲಿವುಡ್​ ನಟಿ ಸಾರಾ ಅಲಿ ಖಾನ್ (Sara Ali Khan) ಅವರಿಗೆ ದೇವರ ಬಗ್ಗೆ ಅಪಾರ ಭಕ್ತಿ ಇದೆ. ಇತ್ತೀಚೆಗೆ ಅವರು ಅನೇಕ ದೇವಸ್ಥಾನಗಳಿಗೆ (Hindu Temple) ತೆರಳಿ ಪೂಜೆ ಸಲ್ಲಿಸಿದ್ದರು. ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದರು. ಕೆಲವೇ ದಿನಗಳ ಹಿಂದೆ ಅಮರನಾಥ ಯಾತ್ರೆಗೂ ತೆರಳಿದ್ದರು. ಆ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಕಾಶ್ಮೀರಕ್ಕೆ (Kashmir) ಭೇಟಿ ನೀಡಿ ಅಲ್ಲಿನ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಶಾಂತಿ ಪಡೆಯಲು ಅವರು ಇಷ್ಟೆಲ್ಲಾ ಮಾಡುತ್ತಾರೆ. ಶಾಂತಿ ಎಲ್ಲಿ ಸಿಗುತ್ತದೆ ಎಂದು ಅಭಿಮಾನಿಗಳಲ್ಲಿ ಅವರು ಕೇಳಿದ್ದಾರೆ. ಸಾರಾ ಅಲಿ ಖಾನ್​ ಅವರ ಈ ಪೋಸ್ಟ್​ ವೈರಲ್​ ಆಗಿದೆ.

ಸ್ಟಾರ್​ ಕಿಡ್​ ಆಗಿರುವ ಸಾರಾ ಅಲಿ ಖಾನ್​ ಅವರಿಗೆ ಬಾಲಿವುಡ್​ನಲ್ಲಿ ಈಗತಾನೇ ಯಶಸ್ಸು ಸಿಕ್ಕಿದೆ. ವಿಕ್ಕಿ ಕೌಶಲ್​ ಜೊತೆ ಅವರು ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಯಶಸ್ಸು ಕಂಡಿದೆ. ಆ ಮೂಲಕ ಸಾರಾ ಅಲಿ ಖಾನ್​ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ಗೆದ್ದ ಖುಷಿಯಲ್ಲಿ ಅವರು ಪಾರ್ಟಿ ಮಾಡುತ್ತಿಲ್ಲ. ಬದಲಿಗೆ, ಅನೇಕ ದೇವಾಲಗಳನ್ನು ಸುತ್ತುತ್ತಿದ್ದಾರೆ. ದೇವರ ಬಗ್ಗೆ ಅವರಿಗೆ ಇರುವ ಭಕ್ತಿ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

‘ಎಲ್ಲಿ ಮತ್ತು ಹೇಗೆ ನಾವು ಶಾಂತಿ ಪಡೆಯಬಹುದು? 1) ಎಲ್ಲ ಕಡೆ 2) ನಮ್ಮೊಳಗೆ’ ಎಂದು ಅಭಿಮಾನಿಗಳಿಗೆ ಸಾರಾ ಅಲಿ ಖಾನ್​ ಪ್ರಶ್ನೆ ಕೇಳಿ, ಆಯ್ಕೆ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ನೀವು ಸ್ಟಾರ್​ ಹೀರೋನ ಮಗಳಾದರೂ ತುಂಬ ಸಿಂಪಲ್​ ಆಗಿದ್ದೀರಿ’ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವು ನೆಗೆಟಿವ್​ ಕಮೆಂಟ್​ಗಳು ಬಂದಿವೆ ಕೂಡ. ಆದರೆ ಅವುಗಳ ಬಗ್ಗೆ ಸಾರಾ ಅಲಿ ಖಾನ್​ ತಲೆ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: Sara Ali Khan: ಅಮರನಾಥ ಯಾತ್ರೆ ಮಾಡಿ ‘ಹರ ಹರ ಮಹದೇವ​’ ಎಂದ ಸಾರಾ ಅಲಿ ಖಾನ್​; ಧರ್ಮದ ವಿಚಾರ ಎಳೆದು ತಂದ ನೆಟ್ಟಿಗರು

ಸಾರಾ ಅಲಿ ಖಾನ್​ ಅವರ ತಂದೆ ಸೈಫ್​ ಅಲಿ ಖಾನ್​ ಮುಸ್ಲಿಂ ಧರ್ಮಕ್ಕೆ ಸೇರಿದವರು. ಸಾರಾ ಅವರು ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದು ಒಂದು ವರ್ಗದ ನೆಟ್ಟಿಗರಿಗೆ ಇಷ್ಟ ಆಗುವುದಿಲ್ಲ. ಆ ಬಗ್ಗೆ ಪದೇಪದೇ ಟೀಕೆ ಎದುರಾಗುತ್ತಲೇ ಇರುತ್ತದೆ. ಆದರೆ ಸಾರಾ ಅಲಿ ಖಾನ್​ ಅವರು ತಮ್ಮ ನಿಲುವು ಬದಲಾಯಿಸಿಕೊಂಡಿಲ್ಲ. ತಮ್ಮ ಮನಸ್ಸಿಗೆ ಯಾವುದು ಸರಿ ಎನಿಸುವುದೋ ಅದನ್ನೇ ಅವರು ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.