ಅವಕಾಶ ನೀಡಿ ನಂತರ ನಿರ್ಮಾಪಕರು ನಡೆದುಕೊಳ್ಳುವ ರೀತಿಗೆ ಸೋನಾಕ್ಷಿ ಸಿನ್ಹಾ ಅಸಮಾಧಾನ

| Updated By: ರಾಜೇಶ್ ದುಗ್ಗುಮನೆ

Updated on: May 15, 2024 | 8:16 AM

ಸೋನಾಕ್ಷಿ ಸಿನ್ಹಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಸಲ್ಮಾನ್ ಖಾನ್. ‘ದಬಾಂಗ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಆದಾಗ್ಯೂ ನಂತರದಲ್ಲಿ ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಗಲೇ ಇಲ್ಲ. ಅವರು ಸಂಭಾವನೆ ವಿಚಾರ ಮಾತನಾಡಿದ್ದಾರೆ.

ಅವಕಾಶ ನೀಡಿ ನಂತರ ನಿರ್ಮಾಪಕರು ನಡೆದುಕೊಳ್ಳುವ ರೀತಿಗೆ ಸೋನಾಕ್ಷಿ ಸಿನ್ಹಾ ಅಸಮಾಧಾನ
ಸೋನಾಕ್ಷಿ
Follow us on

ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸ್ಟಾರ್ ನಟಿ ಎಂದು ಒಪ್ಪಿಕೊಳ್ಳೋಕೆ ಅನೇಕರು ರೆಡಿ ಇಲ್ಲ. ಏಕೆಂದರೆ ಅವರಿಗೆ ಇತ್ತೀಚೆಗೆ ಬೇಡಿಕೆ ಕಡಿಮೆ ಆಗಿದೆ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಇದರಲ್ಲಿ ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ಮಹಿಳೆಯರಿಗೆ ಚಿತ್ರರಂಗದಲ್ಲಿ ಸಿಗುತ್ತಿರುವ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಸಲ್ಮಾನ್ ಖಾನ್. ‘ದಬಾಂಗ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಆದಾಗ್ಯೂ ನಂತರದಲ್ಲಿ ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಗಲೇ ಇಲ್ಲ. ಅವರು ‘ಅಕಿರಾ’, ‘ನೂರ್’, ‘ಹ್ಯಾಪಿ ಫಿರ್ ಭಾಗ್ ಜಾಯೇಗಿ’ ಮೊದಲಾದ ಸಿನಿಮಾಗಳಲ್ಲಿ ಸೋಲೋ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಯಾವ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗೆಲುವು ಕಾಣೋಕೆ ಸಾಧ್ಯವಾಗಿಲ್ಲ.

‘ನನ್ನ ಎಲ್ಲಾ ಶ್ರಮ ಹಾಕಿದರೂ ಕೆಲವೊಮ್ಮೆ ಸಿನಿಮಾ ಗೆಲ್ಲಲಿಲ್ಲ. ಆಗ ನಾನು ಪಾತ್ರಗಳ ಆಯ್ಕೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡೆ. ಕೆಲವು ಯಶಸ್ಸು ಕಂಡವು, ಇನ್ನೂ ಕೆಲವು ಕಂಡಿಲ್ಲ. ನಾನು ಕಲಾವಿದನಾಗಿ ಆ ಸಿನಿಮಾಗಳನ್ನು ಆನಂದಿಸಿದೆ. ಈ ಸಿನಿಮಾಗಳು ಕಮರ್ಷಿಯಲ್ ಆಗಿ ಗೆಲುವು ಕಾಣದೆ ಇರಬಹುದು. ಆದರೆ, ಕೆಲವು ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಆದರೂ ಗೆಲುವು ಏಕೆ ಸಿಗುತ್ತಿಲ್ಲ ಎಂದು ಕೇಳಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಅವರು.

‘ಚಿತ್ರದ ಗಲ್ಲಾಪೆಟ್ಟಿಗೆಯ ಭವಿಷ್ಯ ನನ್ನ ಕೈಯಲ್ಲಿ ಇಲ್ಲ. ಅದು ನನಗೂ ಗೊತ್ತಿತ್ತು. ಒಬ್ಬ ನಟನಾಗಿ ನೀವು ನಿಮ್ಮ ಪ್ರಯತ್ನ ಮಾಡಬೇಕು. ನನ್ನ ನಟನೆ ಯಾವಾಗಲೂ ಮೆಚ್ಚುಗೆ ಪಡೆಯುತ್ತಿದ್ದವು. ನಾನು ಮುಂದೆ ಸಾಗಿದಂತೆ ನನ್ನಿಷ್ಟದ ಕೆಲಸವನ್ನು ಮಾಡುತ್ತಲೇ ಇದ್ದೆ. ಅದು ಈಗ ಫಲ ನೀಡುತ್ತಿದೆ’ ಎಂದಿದ್ದಾರೆ ಸೋನಾಕ್ಷಿ.

ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಇರೋ ಈ ಹುಡುಗ ಈಗ ನಟ; ಸೋನಾಕ್ಷಿ ಜೊತೆ ನಡೀತಿದೆ ಡೇಟಿಂಗ್

‘ನಿರ್ಮಾಪಕರು ನಿಮಗೆ ಕರೆ ಮಾಡಿದಾಗ ಎಲ್ಲವನ್ನೂ ಚರ್ಚಿಸುತ್ತಾರೆ. ಸಂಭಾಷಣೆಯ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರೂ ನಟಿಯರಿಗೆ ಅವಕಾಶ ನೀಡಲು ಬಯಸುತ್ತಾರೆ. ಆದರೆ, ಹಣದ ವಿಚಾರ ಬಂದಾಗ ಸಂಭಾವನೆ ಕಡಿಮೆ ಮಾಡುವಂತೆ ಒತ್ತಾಯಿಸುತ್ತಾರೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.