AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ರಾಖಿ ಸಾವಂತ್​ಗೆ ಹೃದಯ ಸಮಸ್ಯೆ, ಆಸ್ಪತ್ರೆಗೆ ದಾಖಲು

ಚಿತ್ರ ವಿಚಿತ್ರ ಕಾರಣಗಳಿಗೆ ಸದಾ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಟಿ ರಾಖಿ ಸಾವಂತ್​ಗೆ ಹೃದಯ ಸಮಸ್ಯೆ, ಆಸ್ಪತ್ರೆಗೆ ದಾಖಲು
ಮಂಜುನಾಥ ಸಿ.
|

Updated on: May 15, 2024 | 9:40 AM

Share

ಸದಾ ಸುದ್ದಿಯಲ್ಲಿರುವ, ಸುದ್ದಿಯಲ್ಲಿರಲೆಂದು ನಾನಾ ವೇಷಗಳನ್ನು ತೊಟ್ಟು, ನಾನಾ ರೀತಿಯ ತಂತ್ರಗಳನ್ನು ಮಾಡುವ ನಟಿ ರಾಖಿ ಸಾವಂತ್ (Rakhi Sawanth)​ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ರಾಖಿ ಸಾವಂತ್ ಪಾಪರಾಟ್ಜಿಯೊಬ್ಬರಿಗೆ ಸಂದೇಶ ಕಳಿಸಿ ತಿಳಿಸಿದ್ದಾರಂತೆ. ಆ ವಿಷಯನ್ನು ಪಾಪರಾಟ್ಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಿಜಕ್ಕೂ ರಾಖಿ ಸಾವಂತ್ ಆರೋಗ್ಯ ಹದಗೆಟ್ಟಿದೆಯೇ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.

ರಾಖಿಯ ಒಂದು ಕೈಗೆ ಆಕ್ಸಿಮೀಟರ್ ಮತ್ತೊಂದು ಕೈಗೆ ಬಿಪಿ ಯಂತ್ರವನ್ನು ಹಾಕಿ, ರಾಖಿ ಬೆಡ್​ ಮೇಲೆ ಮಲಗಿರುವ ಚಿತ್ರವನ್ನು ಪಾಪರಾಟ್ಜಿಯೊಬ್ಬರು ಹಂಚಿಕೊಂಡಿದ್ದಾರೆ. ರಾಖಿಗೆ ಹೃದಯ ಸಮಸ್ಯೆ ಎದುರಾಗಿದೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಾಪರಾಜಿ ಬರೆದುಕೊಂಡಿದ್ದಾರೆ. ರಾಖಿಯ ಮಾಜಿ ಪತಿ ರಿತೇಶ್, ನ್ಯೂಸ್ 18 ಜೊತೆ ಮಾತನಾಡಿದ್ದು, ತಮಗೆ ರಾಖಿಯ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ತಿಳಿದ ಕೂಡಲೇ ತಿಳಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಇದು ನನ್ನ ಮೊದಲ ಮದುವೆ’; ಎರಡನೇ ವಿವಾಹದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ

ಇನ್ನು ರಾಖಿಯ ಮಾಜಿ ಪತಿ, ಮೈಸೂರಿನ ಆದಿಲ್, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದು ತಮ್ಮ ಪಾಲಿನ ಅತ್ಯಂತ ಖುಷಿಯ ದಿನ ಎಂದು ಬರೆದುಕೊಂಡಿದ್ದಾರೆ. ರಾಖಿ ಸಾವಂತ್​ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎಂದಿದ್ದಾರೆ. ಸುಪ್ರೀಂಕೋರ್ಟ್​ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದರೆ ಎಂಬ ಅನುಮಾನವೂ ಮೂಡಿದೆ.

‘ರಾಖಿ ಸಾವಂತ್ ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ಬದ್ಧರಾಗಿದ್ದರೆ ಮಾತ್ರ ರಾಖಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸುತ್ತದೆ, ಇಲ್ಲದಿದ್ದರೆ, ಅಲ್ಲಿಯವರೆಗೆ ಯಾವುದೇ ಜಾಮೀನು ಇರುವುದಿಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ಆದಿಲ್ ದುರಾನಿ ಹೇಳಿದ್ದಾರೆ. ಮೈಸೂರಿನ ಆದಿಲ್ ಹಾಗೂ ರಾಖಿ ಸಾವಂತ್ ವಿವಾಹವಾಗಿದ್ದರು. ಆದರೆ ರಾಖಿ ಸಾವಂತ್ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ವಿವಾದ ಎಬ್ಬಿಸಿದ್ದರು, ರಾಖಿಯ ದೂರು ಆಧರಿಸಿ ಆದಿಲ್ ಬಂಧನವೂ ಆಗಿತ್ತು. ಇದೀಗ ಆದಿಲ್, ರಾಖಿ ವಿರುದ್ಧ ದೂರು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ