AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ನನ್ನ ಮೊದಲ ಮದುವೆ’; ಎರಡನೇ ವಿವಾಹದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ

ಆದಿಲ್ ಹಾಗೂ ರಾಖಿ ಸಾವಂತ್ ಈ ಮೊದಲು ಮದುವೆ ಆಗಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಇಬ್ಬರೂ ಗುಟ್ಟಾಗಿ ಇಟ್ಟಿದ್ದರು. ಆದಿಲ್​ಗೋಸ್ಕರ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದರು. ಈ ವಿಚಾರವನ್ನು ರಾಖಿ ರಿವೀಲ್ ಮಾಡಿದ ಬಳಿಕ ಇದನ್ನು ಆದಿಲ್ ಒಪ್ಪಿಕೊಳ್ಳೋಕೆ ರೆಡಿ ಇರಲಿಲ್ಲ. ಹೀಗಾಗಿ ರಾಖಿ ಅವರು ಆದಿಲ್ ಮೇಲೆ ಕೇಸ್ ಹಾಕಿದರು.

‘ಇದು ನನ್ನ ಮೊದಲ ಮದುವೆ’; ಎರಡನೇ ವಿವಾಹದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ
ಆದಿಲ್-ರಾಖಿ ಸಾವಂತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 08, 2024 | 3:05 PM

Share

ರಾಖಿ ಸಾವಂತ್ (Rakhi Sawant) ಅವರು ಕೆಲವು ವಿವಾದಗಳನ್ನು ತಾವಾಗಿಯೇ ಮೈಮೇಲೆ ಎಳೆದುಕೊಳ್ಳುತ್ತಾರೆ. ಇನ್ನೂ ಕೆಲವು ವಿವಾದಗಳು ಅವರನ್ನು ಅರಸಿ ಬರುತ್ತವೆ. ಒಟ್ಟಿನಲ್ಲಿ ಅವರು ವೈಯಕ್ತಿಕ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಮದುವೆ ವಿಚಾರಕ್ಕೆ ಸುದ್ದಿ ಆಗಿದ್ದರು. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಅವರನ್ನು ಮದುವೆ ಆಗಿದ್ದರು ರಾಖಿ. ಆದರೆ, ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಈಗ ಆದಿಲ್ ಮತ್ತೊಂದು ಮದುವೆ ಆಗಿದ್ದಾರೆ. ಅಷ್ಟೇ ಅಲ್ಲ ಇದು ತಮ್ಮ ಮೊದಲ ಮದುವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ತಂದಿದ್ದಾರೆ.

ರಾಖಿ ಸಾವಂತ್ ಹಾಗೂ ಆದಿಲ್ ಈ ಮೊದಲು ಮದುವೆ ಆಗಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಇಬ್ಬರೂ ಗುಟ್ಟಾಗಿ ಇಟ್ಟಿದ್ದರು. ಆದಿಲ್​ಗೋಸ್ಕರ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದರು. ಈ ವಿಚಾರವನ್ನು ರಾಖಿ ರಿವೀಲ್ ಮಾಡಿದ ಬಳಿಕ ಇದನ್ನು ಆದಿಲ್ ಒಪ್ಪಿಕೊಳ್ಳೋಕೆ ರೆಡಿ ಇರಲಿಲ್ಲ. ಹೀಗಾಗಿ ರಾಖಿ ಅವರು ಆದಿಲ್ ಮೇಲೆ ಕೇಸ್ ಹಾಕಿದರು. ಆದಿಲ್​ ಜೈಲಿನಲ್ಲಿ ಸಮಯ ಕಳೆದು ಬರುವಂತೆ ಆಯಿತು. ನಂತರ ಇಬ್ಬರೂ ಬೇರೆ ಆದರು ಈಗ ಆದಿಲ್ ಬಿಗ್ ಬಾಸ್ ಖ್ಯಾತಿಯ ಸೋಮಿ ಖಾನ್​ ಜೊತೆ ಮದುವೆ ಆಗಿದ್ದಾರೆ.

ತಮ್ಮ ಮದುವೆ ಬಗ್ಗೆ ಆದಿಲ್ ನ್ಯೂಸ್​18 ಇಂಗ್ಲಿಷ್​ ಜೊತೆ ಮಾತನಾಡಿದ್ದಾರೆ. ‘ಇದು ನನ್ನ ಮೊದಲ ಮದುವೆ. ನಾವು ಬೆಂಗಳೂರಿನಲ್ಲಿ ಇದ್ದೇವೆ. ಮುಂಬೈಗೆ ಬಂದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ. ನಾನು ಎಲ್ಲವನ್ನೂ ಇಂಚಿಂಚಾಗಿ ವಿವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅಸಲಿಗೆ ನಡೆದಿದ್ದು ಏನು ಎಂಬ ವಿಚಾರವನ್ನು ಅವರು ಬಿಚ್ಚಿಡೋ ಸಾಧ್ಯತೆ ಇದೆ.

ಆದಿಲ್ ಹಾಗೂ ಸೋಮಿ ಖಾನ್ ಅವರು ಮಾರ್ಚ್ 2ರಂದು ವಿವಾಹ ಆದರು. ಮುಸ್ಲಿಂ ಧರ್ಮದ ಪ್ರಕಾರ ಈ ಮದುವೆ ನಡೆದಿದೆ. ಸೋಮಿ ಊರಾದ ಜೈಪುರದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ರಾಖಿ ಸಾವಂತ್ ಯಾವ ರೀತಿಯಲ್ಲು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೀಡಬೇಕಿದೆ.

ಇದನ್ನೂ ಓದಿ: ರಾಖಿ ಸಾವಂತ್​ಗೆ ಶಾಕ್: ಎರಡನೇ ಮದುವೆಯಾದ ಆದಿಲ್ ಖಾನ್

ರಾಖಿ ಸಾವಂತ್ ಈ ಮೊದಲು ಕೂಡ ಒಂದು ಮದುವೆ ಆಗಿದ್ದರು. ರಾಖಿ ಹಾಗೂ ರಿತೇಶ್ ವಿವಾಹ ನೆರವೇರತ್ತು. ಆದರೆ, ಇವರ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ರಾಖಿ ಮಾಡೋ ಡ್ರಾಮಾಗಳು ಒಂದೆರಡಲ್ಲ. ಈ ಕಾರಣಕ್ಕೆ ಅವರನ್ನು ಡ್ರಾಮಾ ಕ್ವೀನ್ ಎಂದು ಕರೆಯಲಾಗುತ್ತದೆ. ಅನೇಕ ಬಾರಿ ಅವರು ಮಾಡೋ ಓವರ್ ಆ್ಯಕ್ಟಿಂಗ್​ನಿಂದ ಅನೇಕರಿಗೆ ಕಿರಿಕಿರಿ ಆಗಿದ್ದಿದೆ. ಈಗ ಆದಿಲ್ ಖಾನ್ ಮದುವೆ ವಿಚಾರದಲ್ಲಿ ಅವರು ಮತ್ತೆ ಸಿಟ್ಟಿಗೇಳುವ ಸಾಧ್ಯತೆ ಇದೆ. ಈ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Fri, 8 March 24