ಎಸ್​ಪಿಬಿ​ ಜನ್ಮದಿನದ ವಿಶೇಷ; ಸ್ಟಾರ್​ ಸಿಂಗರ್​ಗಳಿಂದ 12 ಗಂಟೆ ನಾನ್​ ಸ್ಟಾಪ್​ ಹಾಡು, ನೀವು ಕೇಳಬಹುದು

ಎಸ್​ಪಿ ಬಾಲಸುಬ್ರಹ್ಮಣ್ಯಮ್ ಅವರ ಜನ್ಮದಿನದ ಪ್ರಯುಕ್ತ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ನಿರ್ದೇಶಕರು, ನಟರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಬರಹಗಾರರು ಪಾಲ್ಗೊಳ್ಳುತ್ತಿದ್ದಾರೆ.

ಎಸ್​ಪಿಬಿ​ ಜನ್ಮದಿನದ ವಿಶೇಷ; ಸ್ಟಾರ್​ ಸಿಂಗರ್​ಗಳಿಂದ 12 ಗಂಟೆ ನಾನ್​ ಸ್ಟಾಪ್​ ಹಾಡು, ನೀವು ಕೇಳಬಹುದು
ಎಸ್​ಪಿ ಬಾಲಸುಬ್ರಹ್ಮಣ್ಯಮ್
Edited By:

Updated on: Jun 01, 2021 | 7:24 AM

ಜೂನ್​ 4 ಅಪ್ರತಿಮ ಹಾಡುಗಾರ ಎಸ್​ಪಿ ಬಾಲಸುಬ್ರಹ್ಮಣ್ಯಮ್ ಅವರ ಜನ್ಮದಿನ. ಸುಮಧುರ ಕಂಠದ ಮೂಲಕ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ​ಎಸ್​ಪಿಬಿ ಇಲ್ಲದೆ ಅಭಿಮಾನಿಗಳು ಇದೇ ಮೊದಲ ಬಾರಿ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ನಾನಾ ಗಾಯಕರು ಸತತ 12 ಗಂಟೆಗಳ ಕಾಲ ಎಸ್​ಪಿಬಿ ಹಾಡನ್ನು ಹಾಡಲಿದ್ದಾರೆ.

ಕೊವಿಡ್​ 19 ಎರಡನೇ ಅಲೆ ಜೋರಾಗಿಲ್ಲದೆ ಹೋಗಿದ್ದರೆ ಬಹುಶಃ ಅಭಿಮಾನಿಗಳು ಅಥವಾ ಬಾಲಸುಬ್ರಹ್ಮಣ್ಯಮ್​ ಶಿಶ್ಯಂದಿರು ಕಾರ್ಯಕ್ರಮ ಆಯೋಜನೆ ಮಾಡಿ, ನಾನಾ ಗಾಯಕರ ಮೂಲಕ ಹಾಡುಗಳನ್ನು ಹಾಡಿಸುತ್ತಿದ್ದರೇನೋ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಕೊವಿಡ್​ 19 ಇರುವ ಕಾರಣಕ್ಕೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಹೀಗಾಗಿ, ಜನರು ಆನ್​ಲೈನ್ ಮೊರೆ ಹೋಗಿದ್ದಾರೆ.

ತೆಲುಗಿನ ಖ್ಯಾತ ಸಂಗೀತ ಸಂಯೋಜಕ ಆರ್​ಪಿ ಪಟ್ನಾಯಕ್​ ಅವರು ಈಗ 12 ಗಂಟೆಗಳ ಕಾರ್ಯಕ್ರಮ ಒಂದನ್ನು ಆಯೋಜನೆ ಮಾಡಿದ್ದಾರೆ. ಜೂನ್​ ನಾಲ್ಕರಂದು ಮುಂಜಾನೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಎಸ್​ಪಿಬಿ ಹಾಡುಗಳನ್ನು ಹಾಡಲಾಗುತ್ತಿದೆ. ಫಿಲ್ಮ್​ ಇಂಡಸ್ಟ್ರಿಯ ಅನೇಕರು ಇವರಿಗೆ ಸಹಕಾರ ನೀಡುತ್ತಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ನಿರ್ದೇಶಕರು, ನಟರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಬರಹಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದಹಾಗೆ, ಶೀಘ್ರದಲ್ಲೇ ಅವರು ಯೂಟ್ಯೂಬ್​ ಲಿಂಕ್​ ಅನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಶೇರ್​ ಮಾಡಲಿದ್ದಾರೆ.

ಎಸ್​ಪಿಬಿ ಅವರಿಗೆ ಕಳೆದ ಆಗಸ್ಟ್​ನಲ್ಲಿ ಕೊವಿಡ್​ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ಇದ್ದರು. ಅವರಿಗೆ ಚಿಕಿತ್ಸೆ ನೀಡಿದರೂ ಯಶಸ್ಸಿಯಾಗಿರಲಿಲ್ಲ. ಸೆಪ್ಟೆಂಬರ್ 25ರಂದು ಅವರು ನಿಧನರಾದರು.

ಇದನ್ನೂ ಓದಿ: National Film Awards 2019: ‘ಅಕ್ಷಿ’ ಸಿನಿಮಾದಲ್ಲಿ ಎಸ್​ಪಿಬಿ ಹಾಡಿದ ಕೊನೇ ಹಾಡು; ಇದು ಅಂತಿಂಥ ಸಾಂಗ್​ ಅಲ್ಲವೇ ಅಲ್ಲ!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us