ಮತ್ತೊಂದು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ

Sreeleela movie: ತಮಿಳಿಗೂ ಎಂಟ್ರಿ ಕೊಟ್ಟು, ಅಲ್ಲಿಯೂ ಈಗ ಸತತ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಬಾಲಿವುಡ್​​ನಲ್ಲೂ ಸಹ ಶ್ರೀಲೀಲಾ ಬ್ಯುಸಿ, ಆದರೆ ಕೆಲ ಒಳ್ಳೆಯ ಅವಕಾಶಗಳನ್ನು ಶ್ರೀಲೀಲಾ ಕಳೆದುಕೊಳ್ಳುತ್ತಿದ್ದಾರೆ ಸಹ. ಈ ಹಿಂದೆ ಎರಡು ಒಳ್ಳೆ ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದ ನಟಿ ಶ್ರೀಲೀಲಾ, ಈಗ ತಮಿಳಿನ ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಮತ್ತೊಂದು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ
Sreeleela Kayadu

Updated on: Jul 16, 2026 | 8:22 AM

ಶ್ರೀಲೀಲಾ (Sreeleela), ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗುವ ಹಾದಿಯಲ್ಲಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ, ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ, ಚಿತ್ರರಂಗದ ನಂಬರ್ 1 ನಟಿ ಎನಿಸಿಕೊಂಡಿದ್ದರು. ಅದಾದ ಬಳಿಕ ತಮಿಳಿಗೂ ಎಂಟ್ರಿ ಕೊಟ್ಟು, ಅಲ್ಲಿಯೂ ಈಗ ಸತತ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಬಾಲಿವುಡ್​​ನಲ್ಲೂ ಸಹ ಶ್ರೀಲೀಲಾ ಬ್ಯುಸಿ, ಆದರೆ ಕೆಲ ಒಳ್ಳೆಯ ಅವಕಾಶಗಳನ್ನು ಶ್ರೀಲೀಲಾ ಕಳೆದುಕೊಳ್ಳುತ್ತಿದ್ದಾರೆ ಸಹ. ಈ ಹಿಂದೆ ಎರಡು ಒಳ್ಳೆ ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದ ನಟಿ ಶ್ರೀಲೀಲಾ, ಈಗ ತಮಿಳಿನ ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಈ ಹಿಂದೆ ಶ್ರೀಲೀಲಾ, ವಿಜಯ್ ದೆವರಕೊಂಡ ಜೊತೆಗೆ ಶ್ರೀಲೀಲಾ ಸಿನಿಮಾ ಒಪ್ಪಿಕೊಂಡಿದ್ದರು. ಸಿನಿಮಾಕ್ಕೆ ಆಗ ವಿಡಿ 12 ಎಂದು ಕರೆಯಲಾಗಿತ್ತು. ಫೋಟೊಶೂಟ್ ಸಹ ಆಗಿತ್ತು. ಆದರೆ ಬಳಿಕ ಆ ಸಿನಿಮಾ ಅವಕಾಶ ಭಾಗ್ಯಶ್ರೀ ಭೋರ್ಸೆ ಪಾಲಾಯ್ತು. ‘ಕಿಂಗ್​​ಡಮ್’ ಹೆಸರಿನ ಆ ಸಿನಿಮಾ ಬಿಡುಗಡೆ ಆಗಿ, ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಬಳಿಕ, ಶ್ರೀಲೀಲಾ, ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆದರು. ಆದರೆ ಆ ಸಿನಿಮಾದಿಂದಲೂ ಹೊರಬಂದರು ನಟಿ. ಆ ಸಿನಿಮಾ ಸಹ ಭಾಗ್ಯಶ್ರೀ ಭೋರ್ಸೆ ಅವರ ಕೈಸೇರಿತು. ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ, ಬ್ಲಾಕ್ ಬಸ್ಟರ್ ಆಗಿದೆ.

ಇದನ್ನೂ ಓದಿ:ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿರುವ ‘ಪೆದ್ದಿ’ ಸಿನಿಮಾ

ಇನ್ನು ಈಗ ತಮಿಳಿನ ಸೂಪರ್ ಸ್ಟಾರ್ ನಟರೊಬ್ಬರ ಜೊತೆಗೆ ನಟಿಸುವ ಅವಕಾಶವನ್ನು ಶ್ರೀಲೀಲಾ ಕಳೆದುಕೊಂಡಿದ್ದಾರೆ. ಶ್ರೀಲೀಲಾ ಅವರು, ತಮಿಳಿನ ಸ್ಟಾರ್ ನಟ ಅಜಿತ್ ಅವರ ನಟನೆಯ ಹೊಸ ಸಿನಿಮಾನಲ್ಲಿ ನಟಿಸಲಿದ್ದರು. ಸಿನಿಮಾದ ಕುರಿತು ಮಾತುಕತೆ ಸಹ ನಡೆದಿತ್ತು. ಆದರೆ ಇದೀಗ ಹಠಾತ್ತನೆ ಅಜಿತ್ ಅವರ ಸಿನಿಮಾಕ್ಕೆ ನಾಯಕಿ ಬದಲಾವಣೆ ಆಗಿದೆ. ಅಜಿತ್ ಅವರ ಸಿನಿಮಾದಿಂದ ಶ್ರೀಲೀಲಾ ಹೊರನಡೆದಿದ್ದು, ಅವರ ಜಾಗವನ್ನು ಖಯಾದು ಲೋಹರ್ ತುಂಬಲಿದ್ದಾರೆ. ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ನಟನೆ ಆರಂಭಿಸಿದ್ದ ಖಯಾದು ಲೋಹರ್, ಈಗ ಅಜಿತ್ ಸಿನಿಮಾದ ಹೊಸ ನಾಯಕಿ.

ಶ್ರೀಲೀಲಾಗೆ ಅವಕಾಶ ತಪ್ಪಿದೆ ಆದರೂ ಅವರ ಕೈಯಲ್ಲಿ ಹಲವಾರು ಹೊಸ ಸಿನಿಮಾ ಅವಕಾಶಗಳು ಇವೆ. ಧನುಶ್ ನಟನೆಯ ಹೊಸ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ. ತೆಲುಗಿನ ಎರಡು ಹೊಸ ಸಿನಿಮಾ ಕೈಯಲ್ಲಿವೆ. ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದು, ಭರ್ಜರಿಯಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ಹಿಂದಿಯ ಇನ್ನೂ ಎರಡು ಸಿನಿಮಾಗಳನ್ನು ಈಗಾಗಲೇ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಶ್ರೀಲೀಲಾ ಬಹಳ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us