ವಿಜಯ್ ದೇವರಕೊಂಡ ಸಿನಿಮಾದಿಂದ ಹೊರನಡೆದ ಶ್ರೀಲೀಲಾ: ಬದಲಿ ನಟಿ ರಶ್ಮಿಕಾ?

Sreeleela: ಕನ್ನಡತಿ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಹ್ಯಾಂಡ್ಸಮ್ ನಟ ವಿಜಯ್ ದೇವರಕೊಂಡ ಜೊತೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದ ಶ್ರೀಲೀಲಾ, ಇದೀಗ ಆ ಸಿನಿಮಾದಿಂದ ಹೊರಬಂದಿದ್ದಾರೆ.

ವಿಜಯ್ ದೇವರಕೊಂಡ ಸಿನಿಮಾದಿಂದ ಹೊರನಡೆದ ಶ್ರೀಲೀಲಾ: ಬದಲಿ ನಟಿ ರಶ್ಮಿಕಾ?

Updated on: Oct 29, 2023 | 2:57 PM

ಕನ್ನಡತಿ, ನಟಿ ಶ್ರೀಲೀಲಾ (Sreeleela) ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಕಾಲಿಟ್ಟು ಈಗ ತೆಲುಗು ಚಿತ್ರರಂಗದಲ್ಲಿ ಮಿರಿ-ಮಿರಿ ಮಿಂಚುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಪ್ರಸ್ತುತ ಅತ್ಯಂತ ಬ್ಯುಸಿ ನಟಿ ಆಗಿದ್ದಾರೆ ಶ್ರೀಲೀಲಾ. ಅವರ ಕೈಯಲ್ಲಿ ಈಗ ಆರು ತೆಲುಗು ಸಿನಿಮಾಗಳಿವೆ. ಬಹುತೇಕ ಎಲ್ಲವೂ ಬಿಗ್​ ಬಜೆಟ್ ಸ್ಟಾರ್ ಸಿನಿಮಾಗಳು.

ಸಿನಿಮಾಗಳೇನೋ ಒಂದರ ಹಿಂದೆ ಒಂದು ಶ್ರೀಲೀಲಾರನ್ನು ಅರಸಿ ಬರುತ್ತಿದೆ, ಆದರೆ ಇದೇ ಅವರಿಗೆ ಸಮಸ್ಯೆಯನ್ನೂ ತಂದಿದೆ. ಶ್ರೀಲೀಲಾಗೆ ಡೇಟ್ಸ್​ಗಳ ಸಮಸ್ಯೆ ಎದುರಾಗಿದ್ದು ಕೆಲವು ಒಳ್ಳೆಯ ಸಿನಿಮಾಗಳನ್ನು ಕೈಬಿಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಜಯ್ ದೇವರಕೊಂಡ ನಟಿಸಲಿರುವ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಗೌತಮ್ ತಿನ್ನನೂರಿ ನಿರ್ದೇಶಿಸಲಿದ್ದ ಆಕ್ಷನ್ ಸಿನಿಮಾದ ಮುಹೂರ್ತವೂ ನಡೆದಿತ್ತು. ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣವೂ ಆರಂಭವಾಗಲಿತ್ತು. ಆದರೆ ಈಗ ಶ್ರೀಲೀಲಾ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಮಾತ್ರವೇ ಅಲ್ಲದೆ ಮತ್ತೊಂದು ದೊಡ್ಡ ಬ್ಯಾನರ್​ನ ಸಿನಿಮಾದಿಂದಲೂ ಶ್ರೀಲೀಲಾ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಹಾರ್ಟ್ ಕೊಟ್ಟ ನಟಿ ಶ್ರೀಲೀಲಾ

ಶ್ರೀಲೀಲಾ ಹೊರನಡೆದ ಕಾರಣ ತೆರವಾಗಿರುವ ನಾಯಕಿ ಸ್ಥಾನಕ್ಕೆ ರಶ್ಮಿಕಾ ಮಂದಣ್ಣರನ್ನು ಕರೆತರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕೆಲವು ಮೂಲಗಳ ಪ್ರಕಾರ, ‘ಏಜೆಂಟ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಸಾಕ್ಷಿ ವೈದ್ಯ ಅವರನ್ನು ಸಂಪರ್ಕಿಸಿದ್ದು ಅವರು ಸಹ ನಾಯಕಿಯಾಗಿ ನಟಿಸಲು ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಶ್ರೀಲೀಲಾ ನಟನೆಯ ‘ಭಗವಂತ್ ಕೇಸರಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ‘ಆದಿಕೇಶವಲು’, ‘ಎಕ್ಸ್​ಟ್ರಾ ಆರ್ಡಿನರಿ ಮ್ಯಾನ್’ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ಶ್ರೀಲೀಲಾ ಪ್ರಸ್ತುತ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ