ಬಾಲಿವುಡ್ ನಟಿ ಶ್ರೀದೇವಿ (Sridevi) ನಿಧನರಾಗಿ ಬಹಳ ವರ್ಷಗಳಾಗಿವೆ. ಅವರು ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾಲೇ ಮೃತಪಟ್ಟರು. ಅವರು ಸಿನಿಮಾಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರು. ಈಗ ಅವರ ಮಗಳು ಜಾನ್ವಿ ಕಪೂರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಚೆನ್ನೈನ ಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಬೇಕು ಎನ್ನುವ ಕನಸು ಶ್ರೀದೇವಿಗೆ ಇತ್ತು. ಜಾನ್ವಿ ಕಪೂರ್ ಮತ್ತು ಬೋನಿ ಕಪೂರ್ ಒಟ್ಟಾಗಿ ಶ್ರೀದೇವಿಯ ಈ ಕನಸನ್ನು ನನಸಾಗಿಸಿದ್ದಾರೆ.
‘ನಮಗೆ ನೆನಪಿರುವಂತೆ ಚೆನ್ನೈನ ಮನೆಯಲ್ಲಿ ಅನೇಕ ಬಾರಿ ನನ್ನ ತಾಯಿಯ ಜನ್ಮದಿನವನ್ನು ಆಚರಿಸಿದ್ದೇವೆ. ಈ ಮನೆಯಲ್ಲಿ ನನ್ನ ಮತ್ತು ತಂದೆಯ ಹುಟ್ಟುಹಬ್ಬವನ್ನೂ ಆಚರಿಸಲಾಗಿದೆ. ಆದರೆ ಅಮ್ಮನ ನಿರ್ಗಮನದ ನಂತರ, ನವೀಕರಣ ಕಾರ್ಯದಿಂದಾಗಿ ನಾವು ಆ ಮನೆಯಲ್ಲಿ ಹೆಚ್ಚು ಇರಲು ಸಾಧ್ಯವಾಗಲಿಲ್ಲ. ಇದನ್ನು ಹೋಟೆಲ್ ಆಗಿ ಮಾಡಬೇಕು ಎಂದು ಅಮ್ಮ ಕನಸು ಕಾಣುತ್ತಿದ್ದರು’ ಎಂದಿದ್ದಾರೆ ಜಾನ್ವಿ ಕಪೂರ್.
‘ನವೀಕರಣದ ಕೆಲಸ ಮುಗಿದ ಮೇಲೆ ಮತ್ತೆ ಅಪ್ಪನ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿದೆವು. ಅಪ್ಪ ಸರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಆದರೆ ಆ ಹುಟ್ಟುಹಬ್ಬದಂದು ಅವರು ತುಂಬಾ ಸಂತೋಷವಾಗಿದ್ದರು. ಅವಳ ಆಸೆ ಈಡೇರಿಸಬೇಕು ಎಂದು ಅವರು ಸದಾ ಹೇಳುತ್ತಲೇ ಇದ್ದರು’ ಎಂದಿದ್ದಾರೆ ಜಾನ್ವಿ ಕಪೂರ್.
ಶ್ರೀದೇವಿ ನಟಿಯಾಗಿ ಸಾಕಷ್ಟು ಸಂಪಾದನೆ ಮಾಡಿದರು. ನಟಿಯಾದ ಬಳಿಕ ಅವರು ಖರೀದಿ ಮಾಡಿದ ಮೊದಲ ಮನೆ ಇದು. ಈ ಮನೆಯನ್ನು ಈಗ ಹೋಮ್ಸ್ಟೇ ರೀತಿ ಬದಲಿಸಿ, ಬಾಡಿಗೆ ನೀಡಲಾಗುತ್ತಿದೆ. ಈ ಮನೆ ನಾಲ್ಕು ಎಕರೆ ಜಾಗದಲ್ಲಿ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅದೇ ರೀತಿ ದಿನದ ಬಾಡಿಗೆ ಕೂಡ ಭರ್ಜರಿಯಾಗಿದೆ.
ಇದನ್ನೂ ಓದಿ: ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
ಶ್ರೀದೇವಿ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದವರು. ಅವರು 2018ರಲ್ಲಿ ದುಬೈನ ಹೋಟೆಲ್ ಒಂದರಲ್ಲಿ ಬಾತ್ ಟಬ್ನಲ್ಲಿ ಮುಳುಗಿ ಸತ್ತರು. ಈ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಆದರೆ, ಇದೊಂದು ಸಹಜ ಸಾವು ಎಂದು ಪೊಲೀಸರು ವರದಿ ನೀಡಿದ್ದಾರೆ. ಶ್ರೀದೇವಿ ದಕ್ಷಿಣ ಭಾರತದಲ್ಲೂ ನಟಿಸಿದ್ದರು. ತಾಯಿ ರೀತಿಯೇ ಜಾನ್ವಿ ಕಪೂರ್ ಕೂಡ ದಕ್ಷಿಣ ಭಾರತದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.