AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಮೂಲಕ​ ವೋಟ್​ ಮಾಡಿದ್ದೇನೆ ಎಂದ ಜ್ಯೋತಿಕಾ ಬಗ್ಗೆ ಸಖತ್ ಟ್ರೋಲ್

ಇತ್ತೀಚೆಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಬಂದು ವೋಟ್ ಮಾಡಿದ್ದಾರೆ. ಆದರೆ, ಜ್ಯೋತಿಕಾ ವೋಟ್ ಮಾಡಿಲ್ಲ. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ಈ ಬಗ್ಗೆ ಅವರು ಉತ್ತರಿಸಿದ್ದಾರೆ.  ಈ ವೇಳೆ ಅವರು ಆನ್​ಲೈನ್ ವೋಟಿಂಗ್ ಬಗ್ಗೆ ಮಾತನಾಡಿದ್ದಾರೆ.

ಆನ್​ಲೈನ್ ಮೂಲಕ​ ವೋಟ್​ ಮಾಡಿದ್ದೇನೆ ಎಂದ ಜ್ಯೋತಿಕಾ ಬಗ್ಗೆ ಸಖತ್ ಟ್ರೋಲ್
ಜ್ಯೋತಿಕಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 05, 2024 | 8:00 AM

Share

ನಟಿ ಜ್ಯೋತಿಕಾ (Jyothika) ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಖ್ಯಾತಿ ಪಡೆದಿದ್ದಾರೆ. ಅವರು ಸದ್ಯ ಹಿಂದಿಯ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತುಶಾರ್ ಹಿರಾನಂದನಿ ಇದನ್ನು ನಿರ್ದೇಶನ ಮಾಡಿದ್ದು, ರಾಜ್​ಕುಮಾರ್ ರಾವ್, ಅಲಾಯ ಎಫ್, ಶರದ್ ಕೇಲ್ಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮಧ್ಯೆ ಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಜ್ಯೋತಿಕಾ ಟ್ರೋಲ್ ಆಗಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಬಂದು ವೋಟ್ ಮಾಡಿದ್ದಾರೆ. ಆದರೆ, ಜ್ಯೋತಿಕಾ ವೋಟ್ ಮಾಡಿಲ್ಲ. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ಈ ಬಗ್ಗೆ ಅವರು ಉತ್ತರಿಸಿದ್ದಾರೆ.  ‘ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ’ ಎಂದಿದ್ದಾರೆ ಜ್ಯೋತಿಕಾ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು. ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ.

‘ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದ, ನಮಗೆ ಅನಾರೋಗ್ಯ ಆಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿ ಬಂದಿರುತ್ತೇವೆ, ಆನ್​ಲೈನ್​ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಶ್ ಆಗಬೇಕೆಂದಿಲ್ಲ. ಜೀವನಕ್ಕೆ ಒಂದು ಖಾಸಗಿ ಭಾಗವಿದೆ ಮತ್ತು ಅದನ್ನು ನಾವು ಗೌರವಿಸಬೇಕು’ ಎಂದಿದ್ದಾರೆ ಜ್ಯೋತಿಕಾ.

ಆನ್​ಲೈನ್ ವೋಟಿಂಗ್ ವಿಚಾರವನ್ನು ಇಟ್ಟುಕೊಂಡು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ‘ಮೇಡಂ ನೀವು ಸರ್ಕಾರವು ತೆಗೆದುಕೊಂಡ ಹೊಸ ನೀತಿ ನಿರ್ಧಾರದ ಬ್ರಾಂಡ್ ಅಂಬಾಸಿಡರ್ ಆಗಿರುವಂತೆ ತೋರುತ್ತಿದೆ. ಆನ್‌ಲೈನ್ ಮತದಾನ! ನೀವು ದಯವಿಟ್ಟು ಅದರ ಬಗ್ಗೆ ಹೇಳುವಿರೇ? ನನ್ನಂತಹ ಬಡವರಿಗೆ ಸಹಾಯ ಆಗುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದಯವಿಟ್ಟು ಸಹಾಯ ಮಾಡಿ, ಜ್ಯೋತಿಕಾ ರೀತಿ ಆನ್​ಲೈನ್​ ವೋಟ್ ಮಾಡೋದು ಹೇಗೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

‘ಸಮಾಜ ಸುಧಾರಕಿ ಜ್ಯೋತಿಕಾ, ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷಕ್ಕೆ ಅಲ್ಲ, 5 ವರ್ಷಕ್ಕೊಮ್ಮೆ ಎಂದು. ನಾನು ಭಾರತದಲ್ಲಿ ಈವರೆಗೆ ಆನ್‌ಲೈನ್ ಮತದಾನದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಒಂದೇ ಒಂದು ವಿಡಿಯೋದಿಂದ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಜ್ಯೋತಿಕಾ-ಸೂರ್ಯ

ಜ್ಯೋತಿಕಾ ಅವರು ಇತ್ತೀಚೆಗೆ ಮುಂಬೈನಲ್ಲಿ ವಾಸವಾಗಿದ್ದಾರೆ. ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಶೈತಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಆರ್ ಮಾಧವನ್ ಹಾಗೂ ಅಜಯ್ ದೇವಗನ್ ಕೂಡ ನಟಿಸಿದ್ದರು. ಈಗ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ