‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ

Priyanka Chopra: ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಿರುವ ಪಾತ್ರದ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ.

‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ
Priyanka Chopra

Updated on: Jul 18, 2026 | 10:52 AM

ಹಾಲಿವುಡ್ (Hollywood) ಮತ್ತು ಭಾರತೀಯ ಚಿತ್ರರಂಗ ಎರಡರಲ್ಲೂ ಬ್ಯುಸಿಯಾಗಿರುವ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಹುಟ್ಟುಹಬ್ಬದ ಇಂದು (ಜುಲೈ 18). ಪ್ರಿಯಾಂಕಾ ಚೋಪ್ರಾ, ಭಾರತದ ಬಹು ನಿರೀಕ್ಷಿತ ಸಿನಿಮಾ ‘ವಾರಣಾಸಿ’ಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಿರುವ ಪಾತ್ರದ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ.

ಈ ಹಿಂದೆ ಬಿಡುಗಡೆ ಮಾಡಿದ್ದ ಲುಕ್ ನೋಡಿದವರು ಪ್ರಿಯಾಂಕಾ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ ಎಂದುಕೊಂಡಿದ್ದರು. ಆದರೆ ಈಗ ಬಿಡುಗಡೆ ಮಾಡಿರುವ ಲುಕ್ ನೋಡಿದರೆ ಪ್ರಿಯಾಂಕಾ ಚೋಪ್ರಾ ವಿಲನ್ ಗ್ಯಾಂಗಿನ ಸದಸ್ಯೆ ಇರಬಹುದಾ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ಅವರ ಲುಕ್ ಅಷ್ಟು ಭಿನ್ನವಾಗಿ, ಸಖತ್ ಖಡಕ್ ಆಗಿಯೂ ಇದೆ.

‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ‘ಮಂದಾಕಿನಿ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರವನ್ನು ‘ಬಲಶಾಲಿ, ದುರ್ಬಲ ಮತ್ತು ಮರೆಯಲಾಗದಂತಹ ಗುಣಗಳನ್ನು ಹೊಂದಿರುವ, ಪ್ರಪಂಚದಾದ್ಯಂತ ಸಂಚರಿಸುವ ಉಗ್ರ ಪಾತ್ರ’ ಎಂದು ರಾಜಮೌಳಿ ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಉಡುಗೆ ತೊಟ್ಟು, ಮೊನಚಾದ ಲುಕ್ ನೀಡುತ್ತಿದ್ದಾರೆ. ‘ಆಕೆ ನಕ್ಕರೆ ಬೆಡಗು, ನಗದಿದ್ದರೆ ಬೆಂಕಿ’ ಎಂದು ಬರೆದಿದ್ದಾರೆ ರಾಜಮೌಳಿ.

ಇದನ್ನೂ ಓದಿ:ಹೊಸ ಹಾಲಿವುಡ್ ಸಿನಿಮಾ ಘೋಷಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಅವರ ಎರಡು ಚಿತ್ರಗಳನ್ನು ರಾಜಮೌಳಿ ಹಂಚಿಕೊಂಡಿದ್ದಾರೆ. ಒಂದರಲ್ಲಿ ಪ್ರಿಯಾಂಕಾ ಮೊನಚಾದ ಲುಕ್ ನೀಡುತ್ತಾ ಉಗ್ರವಾಗಿ ಕಂಡರೆ ಮತ್ತೊಂದರಲ್ಲಿ ನಗುತ್ತಾ, ಕುಣಿಯುತ್ತಾ ಸುಂದರವಾಗಿ ಕಾಣುತ್ತಿದ್ದಾರೆ. ಒಟ್ಟಾರೆ ರಾಜಮೌಳಿ ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದರೆ ಪ್ರಿಯಾಂಕಾರ ಪಾತ್ರಕ್ಕೆ ಎರಡು ಶೇಡ್ ಇರುವುದು ಖಾತ್ರಿ ಆಗುತ್ತಿದೆ. ಬಹುಷಃ ವಿಲನ್ ಗುಂಪಿನ ಸದಸ್ಯೆ ಆಗಿದ್ದ ಪ್ರಿಯಾಂಕಾ ಆ ಬಳಿಕ ಹೀರೋ ಕಡೆ ಪಕ್ಷ ಬದಲಿಸುತ್ತಾರೆ ಎಂಬ ಊಹೆಯನ್ನು ಕಮೆಂಟ್ ಸೆಕ್ಷನ್​​ನಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿದ್ದಾರೆ.

2019ರ ‘ದಿ ಸ್ಕೈ ಈಸ್ ಪಿಂಕ್’ ನಂತರ ಪ್ರಿಯಾಂಕಾ ಚೋಪ್ರಾ ಭಾರತದ ಸಿನಿಮಾಗಳಲ್ಲಿ ನಟಿಸಿರಲಿಲ್ಲ, ಇದೀಗ ಸುಮಾರು ಏಳು ವರ್ಷಗಳ ಬಳಿಕ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಹಾಲಿವುಡ್ ಆಕ್ಷನ್ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಅವರು ‘ಆಮ್ರಿ’ ಹೆಸರಿನ ಮತ್ತೊಂದು ಹಾಲಿವುಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯ ಹೊಸ ಸೀಸನ್​​ನಲ್ಲೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us