ಆರ್​ಆರ್​ಆರ್​ ಚಿತ್ರದ ಒಂದು ಹಾಡಿನ ಶೂಟ್​ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು

|

Updated on: May 29, 2021 | 4:16 PM

ಮೂಲಗಳ ಪ್ರಕಾರ ಎರಡು ಹಾಡುಗಳ ಶೂಟ್​ ಬಾಕಿ ಇದೆಯಂತೆ. ರಾಮ್​ ಚರಣ್​ ಮತ್ತು ಆಲಿಯಾ ಭಟ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಹಾಡಿಗೆ ಒಂದು ವಾರದ ಕಾಲ್​ಶೀಟ್​ ನಿಗದಿ ಮಾಡಲಾಗಿದೆ.

ಆರ್​ಆರ್​ಆರ್​ ಚಿತ್ರದ ಒಂದು ಹಾಡಿನ ಶೂಟ್​ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು
ರಾಜಮೌಳಿ
Follow us on

ಎಸ್​ಎಸ್​ ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಸಿನಿಮಾದಲ್ಲಿ ಬರುವ ಫೈಟ್​ ಇರಲಿ ಅಥವಾ ಹಾಡಿರಲಿ ಪ್ರೇಕ್ಷಕರಿಗೆ ವಾಹ್​ ಎನಿಸದೇ ಇರದು. ಈಗ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಸಾಕಷ್ಟು ವಿಚಾರಗಳಿಗೆ ನಿರೀಕ್ಷೆ ಹುಟ್ಟುಹಾಕಿದೆ. ಅಚ್ಚರಿ ಎಂದರೆ ಈ ಸಿನಿಮಾದಲ್ಲಿ ಬರುವ ಹಾಡೊಂದರ ಶೂಟಿಂಗ್​ಗೆ ರಾಜಮೌಳಿ 30 ದಿನ ತೆಗೆದುಕೊಳ್ಳುತ್ತಿದ್ದಾರಂತೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಆರ್​ಆರ್​ಆರ್​ ಸಿನಿಮಾದ ಶೂಟಿಂಗ್​ ಕೊನೆಯ ಹಂತದಲ್ಲಿದೆ. ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳದೆ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿರುತ್ತಿತ್ತು. ಆದರೆ, ಈಗ ಚಿತ್ರೀಕರಣ ನಡೆಯುತ್ತಿಲ್ಲ. ಪರಿಸ್ಥಿತಿ ಸುಸ್ಥಿತಿಗೆ ಮರಳಿದ ಮೇಲೆಯೇ ಶೂಟಿಂಗ್​ ಮಾಡಲು ಆರ್​ಆರ್​ಆರ್​ ತಂಡ ನಿರ್ಧರಿಸಿದೆ. ಈಗ ಸಿನಿಮಾ ಬಗ್ಗೆ ಕೇಳಿ ಬಂದ ಹೊಸ ವಿಚಾರ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.

ಮೂಲಗಳ ಪ್ರಕಾರ ಎರಡು ಹಾಡುಗಳ ಶೂಟ್​ ಬಾಕಿ ಇದೆಯಂತೆ. ರಾಮ್​ ಚರಣ್​ ಮತ್ತು ಆಲಿಯಾ ಭಟ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಹಾಡಿಗೆ ಒಂದು ವಾರದ ಕಾಲ್​ಶೀಟ್​ ನಿಗದಿ ಮಾಡಲಾಗಿದೆ. ಇದಲ್ಲದೆ, ಜ್ಯೂ. ಎನ್​ಟಿಆರ್ ಹಾಗೂ ರಾಮ್​ ಚರಣ್​ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಸಾಂಗ್​ ಒಂದರ ಶೂಟ್​ಗೆ ಒಂದು ತಿಂಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿದೆಯಂತೆ.

ಸಿನಿಮಾ ಶೂಟಿಂಗ್​ ಬಹುತೇಕ ಪೂರ್ಣಗೊಂಡಿದೆ. ಕೆಲ ಪ್ಯಾಚ್​ಅಪ್​ ಕೆಲಸಗಳು ಬಾಕಿ ಇವೆ. ಹೀಗಾಗಿ, ಇದಕ್ಕೆ 10 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲವೂ ಸೇರಿ ಸುಮಾರು 50 ದಿನಗಳ ಶೂಟ್​ ಬಾಕಿ ಇದೆಯಂತೆ. ಅದಾದ ನಂತರದಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಲಿವೆ.

ಆರ್​ಆರ್​ಆರ್​ ಚಿತ್ರ ಶೂಟಿಂಗ್​ ಮುಗಿಸುವ ಮುನ್ನವೇ ದೊಡ್ಡ ದೊಡ್ಡ ಡೀಲ್​ಗಳನ್ನು ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕುಗಳು 325 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎನ್ನಲಾಗಿದೆ. ಜ್ಯೂ. ಎನ್​ಟಿಆರ್ ಮತ್ತು ರಾಮ್​ಚರಣ್​ ಮುಖ್ಯಭೂಮಿಕೆಯಲ್ಲಿದ್ದಾರೆ. ಬಾಲಿವುಡ್​ ಸ್ಟಾರ್​ ಕಲಾವಿದರಾದ ಅಜಯ್​ ದೇವಗನ್​ ಮತ್ತು ಆಲಿಯಾ ಭಟ್​ ಕೂಡ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಮತ್ತೆ ಆಲಿಯಾ ಭಟ್​ ಬೇಕು ಎಂದು ಬಯಸಿದ ರಾಮ್​ ಚರಣ್​; ಏನಿದು ವಿಷ್ಯ?

RRR ಫೈಟಿಂಗ್​ ದೃಶ್ಯದಲ್ಲಿ ರಾಜಮೌಳಿ ಹೊಸ ಪ್ರಯೋಗ; ತಂದೆಯಿಂದಲೇ ಬಯಲಾದ ಸೀಕ್ರೆಟ್​ ಏನು?