‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದದ ಬೆನ್ನಲ್ಲೇ ನಟಿ ಸಮಂತಾ ಅಕ್ಕಿನೇನಿಗೆ ಬಂತು ಎಚ್ಚರಿಕೆಯ ಸಂದೇಶ

ಸಮಂತಾ ಸಾಕಷ್ಟು ಮಾಧ್ಯಮಗಳಿಗೆ ಈ ವೆಬ್​ ಸೀರಿಸ್​ ಕುರಿತಾಗಿ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಶನದ ವೇಳೆ ವಿವಾದದ ಬಗ್ಗೆ ಪ್ರಶ್ನೆ ಎದುರಾಗೋದು ಸಾಮಾನ್ಯ.

‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದದ ಬೆನ್ನಲ್ಲೇ ನಟಿ ಸಮಂತಾ ಅಕ್ಕಿನೇನಿಗೆ ಬಂತು ಎಚ್ಚರಿಕೆಯ ಸಂದೇಶ
ಸಮಂತಾ ಅಕ್ಕಿನೇನಿ
Follow us
ರಾಜೇಶ್ ದುಗ್ಗುಮನೆ
|

Updated on: May 29, 2021 | 5:44 PM

 ದಿ ಫ್ಯಾಮಿಲಿ ಮ್ಯಾನ್​ 2 ವೆಬ್​ ಸೀರಿಸ್​​​ ಶೂಟಿಂಗ್​ ಆರಂಭವಾದಾಗಿನಿಂದಲೂ ನಟಿ ಸಮಂತಾ ಸುದ್ದಿಯಲ್ಲಿದ್ದಾರೆ. ಅವರು ಸ್ಯೂಸೈಡ್​ ಬಾಂಬರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಟ್ರೇಲರ್​ನಲ್ಲಿ ಸ್ಪಷ್ಟವಾಗಿತ್ತು. ಈಗ ಅವರಿಗೆ ಎಚ್ಚರಿಕೆಯ ಪತ್ರವೊಂದು ಬಂದಿದೆ. ಅದೂ ಅಮೇಜಾನ್​ ಪ್ರೈಮ್​ ಕಡೆಯಿಂದ ಅನ್ನೋದು ವಿಶೇಷ.

2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಮನೋಜ್​ ಬಾಜಪೇಯ್​, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್​ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ವೆಬ್​​ಸೀರಿಸ್​ ಟ್ರೇಲರ್​ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್​ ಪ್ರೈಮ್​ ಟ್ರೇಲರ್ ಎಡಿಟ್​ ಮಾಡುವ ಕೆಲಸವನ್ನು ಕೂಡ ಮಾಡಿತ್ತು.

ಸಮಂತಾ ಸಾಕಷ್ಟು ಮಾಧ್ಯಮಗಳಿಗೆ ಈ ವೆಬ್​ ಸೀರಿಸ್​ ಕುರಿತಾಗಿ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಶನದ ವೇಳೆ ವಿವಾದದ ಬಗ್ಗೆ ಪ್ರಶ್ನೆ ಎದುರಾಗೋದು ಸಾಮಾನ್ಯ. ಆದರೆ, ಯಾವುದೇ ಕಾರಣಕ್ಕೂ ಈ ವಿವಾದದ ಬಗ್ಗೆ ಮಾತನಾಡದಂತೆ ಅಮೇಜಾನ್​ ಪ್ರೈಮ್​ ಸಮಂತಾಗೆ ಎಚ್ಚರಿಸಿದೆ. ಈ ಮೂಲಕ ವಿವಾದ ದೊಡ್ಡದಾಗದಂತೆ ನೋಡಿಕೊಳ್ಳುವ ಆಲೋಚನೆ ಪ್ರೈಮ್​ನದ್ದು.

ದೊಡ್ಡ ದೊಡ್ಡ ವೆಬ್​ ಸೀರಿಸ್​ಗಳು ಹಾಗೂ ಸಿನಿಮಾಗಳು ತೆರೆಕಾಣುತ್ತಿರುವಾಗ ಯಾರಾದರೂ ಒಬ್ಬರು ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ತಕಾರಾರು ತೆಗೆಯುತ್ತಾರೆ. ಈಗ ತಮಿಳಿಯನ್ನರು ಉಗ್ರಗಾಮಿಗಳಂತೆ ತೋರಿಸಲಾಗುತ್ತಿದೆ ಎನ್ನುವ ವಿಚಾರ ಇಟ್ಟುಕೊಂಡು ಕೆಲವು ದಿ ಫ್ಯಾಮಿಲಿ ಮ್ಯಾನ್​ 2 ವೆಬ್​ ಸೀರಿಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ವೆಬ್​ ಸೀರಿಸ್​ ನೋಡದೆಯೇ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಂಡ ವ್ಯಕ್ತಪಡಿಸಿದೆ.

‘ದಿ ಫ್ಯಾಮಿಲಿ ಮ್ಯಾನ್​ ಸೀಸನ್​-2’ ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ. ಈ ವೆಬ್​ ಸೀರಿಸ್​ನ ನಿರ್ದೇಶನ ಜವಾಬ್ದಾರಿಯನ್ನು ರಾಜ್​ ಮತ್ತು​ ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್​ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್​ಮೇಲೆ ಹೆಚ್ಚು ನಿರೀಕ್ಷೆ ಇದೆ.

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್​ ಬಾಜಪೇಯ್

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ