SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ

| Updated By: ಮಂಜುನಾಥ ಸಿ.

Updated on: Feb 22, 2025 | 6:50 AM

SS Rajamouli: ನಿರ್ದೇಶಕ ಎಸ್​ಎಸ್ ರಾಜಮೌಳಿ ಅದ್ಭುತವಾದ ಸಿನಿಮಾಗಳನ್ನು ಮಾಡುವುದು ಮಾತ್ರವೇ ಅಲ್ಲದೆ ಒಳ್ಳೆಯ ಸಿನಿಮಾಗಳನ್ನು ಹುಡುಕಿ ವೀಕ್ಷಿಸುತ್ತಾರೆ ಸಹ. ಅದರಲ್ಲಿಯೂ ಸಂಗೀತದ ಬಗ್ಗೆ ಎಸ್​ಎಸ್ ರಾಜಮೌಳಿಗೆ ವಿಶೇಷ ಆಸಕ್ತಿ. ತಮ್ಮ ಸಿನಿಮಾಕ್ಕೆ ಅತ್ಯುತ್ತಮ ಸಂಗೀತವನ್ನು ಬಳಸಿಕೊಳ್ಳುವ ಜೊತೆಗೆ ಖುದ್ದಾಗಿಯೂ ಸದಾ ಒಳ್ಳೆಯ ಸಂಗೀತವನ್ನು ಆಲಿಸುತ್ತಾರೆ.

SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ
Ss Rajamouli
Follow us on

ಎಸ್ಎಸ್ ರಾಜಮೌಳಿ ಅವರು ತಮ್ಮ ಸಿನಿಮಾ ಮೇಕಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ ಎನ್ನುವುದಕ್ಕಿಂತ ಅವರು ನೀಡಿರೋ ಎಲ್ಲಾ ಚಿತ್ರಗಳು ಹಿಟ್ ಎಂಬುದು ಸೂಕ್ತ. ಅವರ ಸಿನಿಮಾದ ಹಾಡುಗಳು ಕೂಡ ಗಮನ ಸೆಳೆದ ಉದಾಹರಣೆ ಇದೆ. ವಿಶೇಷ ಎಂದರೆ ಅವರು ಎರಡು ಹಾಡುಗಳನ್ನು ಸಾಕಷ್ಟು ಇಷ್ಟಪಡುತ್ತಾರಂತೆ. ಆದರೆ, ಅದ್ಯಾವುದೂ ಅವರ ಸಿನಿಮಾದ ಹಾಡುಗಳಲ್ಲ ಅನ್ನೋದು ವಿಶೇಷ.

ರಾಜಮೌಳಿ ಅವರು ಹಲವು ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಾ ಇರುತ್ತಾರೆ. ಈ ಪೈಕಿ ಕೆಲ ಸಿನಿಮಾಗಳನ್ನು ಅವರು ಬಾಯ್ತುಂಬ ಹೊಗಳಿದ ಉದಾಹರಣೆ ಇದೆ. ಅವರು ಇಷ್ಟಪಟ್ಟ ಎರಡೇ ಎರಡು ಹಾಡುಗಳು ಇವೆಯಂತೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ರಾಜಮೌಳಿ ಅವರು ಹೇಳಿಕೊಂಡಿದ್ದರು.

ಶ್ರುತಿ ಹಾಸನ್ ಚಿತ್ರರಂಗದ ಬೇಡಿಕೆಯ ನಟಿ. ಅವರು ಡ್ಯಾನ್ಸ್ ಕೂಡ ಉತ್ತಮವಾಗಿ ಮಾಡುತ್ತಾರೆ. ಅವರ ಡ್ಯಾನ್ಸ್ನ ರಾಜಮೌಳಿ ಇಷ್ಟಪಟ್ಟಿದ್ದಾರೆ. ‘ರೇಸ್ ಗುರಮ್’ ಚಿತ್ರದ ಹಾಡನ್ನು ಪದೇ ಪದೇ ವೀಕ್ಷಿಸುತ್ತಾರೆ. ಈ ಬಗ್ಗೆ ರಾಜಮೌಳಿ ಅವರು ಹೇಳಿಕೊಂಡಿದ್ದಾರೆ.

ರಾಜಮೌಳಿ ಅವರು ಸದ್ಯ ಮಹೇಶ್ ಬಾಬು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಮುಂದಿನ ಅಪ್ಡೇಟ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಆಫ್ರಿಕಾದಲ್ಲೂ ಸಿನಿಮಾದ ಶೂಟ್ ನಡೆಯಲಿದೆಯಂತೆ.

ಇದನ್ನೂ ಓದಿ:‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ

ರಾಜಮೌಳಿ ಅವರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಇದಕ್ಕೆ ಕಾರಣ ಅವರ ಹುಟ್ಟಿ ಬೆಳೆದಿದ್ದು ರಾಯಚೂರಿನಲ್ಲಿ. ಅವರು ತೆಲುಗು ಚಿತ್ರರಂಗಕ್ಕೆ ಹೋಗುವುದಕ್ಕೂ ಮೊದಲು ರಾಯಚೂರಿನಲ್ಲಿ ನೆಲಿಸಿದ್ದರು. ಆ ಬಳಿಕ ಅವರು ಹೈದರಾಬಾದ್ಗೆ ಶಿಫ್ಟ್ ಆದರು. ಈಗ ಅಲ್ಲಿಗೆ ತೆರಳಿ ಸಿನಿಮಾ ಕೃಷಿ ಮಾಡುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಿದರೂ ಎಲ್ಲರೂ ಕಾಯುತ್ತಾ ಇರುತ್ತಾರೆ. ಅವರ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಸಿಕ್ಕಿದೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ