ಕೊರೊನಾ ವೈರಸ್ ಎರಡನೇ ಅಲೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೊವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ. ಕೆಲವು ರಾಜ್ಯಗಳಲ್ಲಿ ಕಠಿಣ ಲಾಕ್ಡೌನ್ ಜಾರಿಯಲ್ಲಿದೆ. ಅನೇಕ ರಾಜ್ಯಗಳಲ್ಲಿ ಮದುವೆಗೆ ಅತಿಥಿಗಳ ಮಿತಿ ಹೇರಲಾಗಿದೆ. ಈ ರೀತಿಯ ಕಠಿಣ ನಿಯಮದ ಮಧ್ಯೆಯೂ ಸೆಲೆಬ್ರಿಟಿ ಜೋಡಿಯೊಂದು ಅದ್ದೂರಿಯಾಗಿ ಮದುವೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಜೋಡಿ ಮೇಲೆ ಕೇಸ್ ದಾಖಲಾಗಿದೆ.
ಕಪಿಲ್ ಶರ್ಮಾ ಶೋನಲ್ಲಿ ಸುಗಂಧ ಮಿಶ್ರಾ ಹಾಗೂ ಸಂಕೇತ್ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರ ಖ್ಯಾತಿ ಹೆಚ್ಚಿತ್ತು. ಈ ಜೋಡಿ ಏಪ್ರಿಲ್ 26ರಂದು ಮದುವೆ ಆಗಿದೆ. ಆದರೆ, ವಿವಾಹ ಆಗುವ ಸಂದರ್ಭದಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಜೋಡಿ ಪಂಜಾಬ್ನಲ್ಲಿ ಮದುವೆ ಆಗಿದೆ. ಅಲ್ಲಿನ ರಾಜ್ಯ ಸರ್ಕಾರದ ನಿಯಮದ ಪ್ರಕಾರ ಮದುವೆಗೆ 10 ಜನರು ಮಾತ್ರ ಪಾಲ್ಗೊಳ್ಳಬಹುದು. ಆದರೆ, ಈ ಜೋಡಿಯ ಮದುವೆ ಸಂದರ್ಭದಲ್ಲಿ ಸಾಕಷ್ಟು ಜನರು ಸೇರಿದ್ದರು. ಅಲ್ಲದೆ, ವಿವಾಹ ಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಈ ಬಗ್ಗೆ ಸಾಕಷ್ಟು ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಸುಗಂಧ ಮಿಶ್ರಾ ಜಲಂಧರ್ನವರು. ಸಂಕೇತ್ ಭೋಸಲೆ ಮುಂಬೈನವರು. ಮದುವೆಗಾಗಿ ಸಂಕೇತ್ ಕುಟುಂಬದವರು ಮುಂಬೈನಿಂದ ಪಂಜಾಬ್ಗೆ ಬಂದಿದ್ದರು. ಈಗ ಕೊವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಜೋಡಿಗೆ ಸಂಕಷ್ಟಕ್ಕೆ ತುತ್ತಾಗಿದೆ.
ಇದನ್ನೂ ಓದಿ: Vaishnavi Gowda: ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ