Bigg Boss 8: ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಮಾಧ್ಯಮದವರಿಗೆ ಸಂದರ್ಶನ ಕೊಡಲ್ಲ; ಶುಭಾ ಹೀಗೆ ಹೇಳಿದ್ದೇಕೆ?
Shubha Poonja: ಧನುಶ್ರೀ, ನಿರ್ಮಲಾ ಚೆನ್ನಪ್ಪ ಮುಂತಾದವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ನಂತರದಲ್ಲಿ ಮಾಧ್ಯಮಗಳು ಅವರ ಸಂದರ್ಶನ ಪಡೆದಿದ್ದವು.
ಬಿಗ್ ಬಾಸ್ ಮನೆಯಲ್ಲಿ ಶುಭಾ ಮಾಡುವ ಚೇಷ್ಟೆಗಳು ಬಹುತೇಕರಿಗೆ ಇಷ್ಟವಾಗುತ್ತಿದೆ. ಸಣ್ಣ ಮಕ್ಕಳಂತೆ ಆಡುವುದು, ಬೇರೆಯವರ ಕಾಲೆಳೆಯುವುದನ್ನು ಅವರು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಮೊನ್ನೆ ಅರ್ಥವಾಗದ ಭಾಷೆಯಲ್ಲಿ ಶುಭಾ ಮಾತನಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಶಪಥವೊಂದನ್ನು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ಕೊಡೋದು ವಾಡಿಕೆ. ಧನುಶ್ರೀ, ನಿರ್ಮಲಾ ಚೆನ್ನಪ್ಪ ಮುಂತಾದವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ನಂತರದಲ್ಲಿ ಮಾಧ್ಯಮಗಳು ಅವರ ಸಂದರ್ಶನ ಪಡೆದಿದ್ದವು. ಆದರೆ, ಶುಭಾ ಮನೆಯಿಂದ ಹೊರ ಬಂದ ನಂತರ ಒಂದು ವಾರ ಯಾರಿಗೂ ಸಂದರ್ಶನ ನೀಡುವುದಿಲ್ಲವಂತೆ. ಅವರು ಹೀಗೆ ಹೇಳುವುದಕ್ಕೂ ಬಲವಾದ ಕಾರಣವಿದೆ.
ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಹಾಯಾಗಿದ್ದಾರೆ. ಅವರ ಫಿಯಾನ್ಸಿ ಸುಮಂತ್ ಅವರನ್ನು ನೆನಪು ಮಾಡಿಕೊಂಡು ಆಗಾಗ ಬೇಸರಗೊಂಡಿದ್ದಿದೆ. ಆದರೆ, ಉಳಿದಂತೆ ಅವರು ಸ್ಟ್ರಾಂಗ್ ಆಗಿದ್ದಾರೆ. ಪ್ರತಿ ವಾರ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಮಿನೇಷನ್ನಿಂದ ಬಚಾವ್ ಆಗುತ್ತಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಇರೋದು ಅವರಿಗೆ ಕಷ್ಟವಾಗುತ್ತಿದೆಯಂತೆ.
ಈ ಬಗ್ಗೆ ಮೇ 6ರ ಎಪಿಸೋಡ್ನಲ್ಲಿ ಶುಭಾ ಮಾತನಾಡಿದ್ದಾರೆ. ನಾನು ಇಲ್ಲಿಂದ ಹೊರ ಹೋದಮೇಲೆ ಒಂದು ವಾರ ಹಾಯಾಗಿರಬೇಕು. ನಾನು ಮಾಧ್ಯಮದವರಿಗೆ ಒಂದು ವಾರ ನನ್ನ ಸುದ್ದಿಗೆ ಬರಬೇಡ್ರಪ್ಪ, ನಾನು ಯಾವ ಸಂದರ್ಶನವನ್ನೂ ಕೊಡಲ್ಲ ಎಂದು ಹೇಳಿಬಿಡ್ತೀನಿ ಎಂದಿದ್ದಾರೆ. ಈ ಮೂಲಕ ಮನೆಯಲ್ಲೇ ಅವರು ಹಾಯಾಗಿ ಕಾಲ ಕಳೆಯುವ ಆಲೋಚನೆಯಲ್ಲಿದ್ದಾರೆ.
ಕಳೆದ ಒಂದು ವಾರಗಳಿಂದ ಶುಭಾ ಸಣ್ಣಸಣ್ಣ ವಿಚಾರಕ್ಕೂ ಎಮೋಷನಲ್ ಆಗುತ್ತಿದ್ದಾರೆ. ಒಂದು ವಾರದಿಂದ ನಿಜವಾಗಲೂ ಎಮೋಷನಲಿ ಟಫ್ ಆಗ್ತಿದೆ ಎಂದು ಅವರೇ ಹೇಳಿಕೊಂಡಿದ್ದರು. ದಿವ್ಯಾ ಉರುಡುಗ ಅನಾರೋಗ್ಯಕ್ಕೆ ತುತ್ತಾಗಿ ಮನೆಯಿಂದ ಹೊರ ಹೋಗಿರುವುದಕ್ಕೆ ಶುಭಾ ಅತ್ತಿದ್ದರು.
Shubha Poonja: ಕೆಲವೊಮ್ಮೆ ಸೈಕ್ ಮಾಡಿ ಬಿಡುತ್ತದೆ; ಬಿಗ್ ಬಾಸ್ ಮನೆ ಅನುಭವ ಹಂಚಿಕೊಂಡ ಶುಭಾ ಪೂಂಜಾ
Published On - 4:45 pm, Fri, 7 May 21