AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubha Poonja: ಕೆಲವೊಮ್ಮೆ ಸೈಕ್​ ಮಾಡಿ ಬಿಡುತ್ತದೆ; ಬಿಗ್​ ಬಾಸ್​ ಮನೆ ಅನುಭವ ಹಂಚಿಕೊಂಡ ಶುಭಾ ಪೂಂಜಾ

ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಹಾಯಾಗಿದ್ದಾರೆ. ಅವರ ಫಿಯಾನ್ಸಿ ಸುಮಂತ್​ ಅವರನ್ನು ನೆನಪು ಮಾಡಿಕೊಂಡು ಆಗಾಗ ಬೇಸರಗೊಂಡಿದ್ದಿದೆ. ಆದರೆ, ಉಳಿದಂತೆ ಅವರು ಸ್ಟ್ರಾಂಗ್​ ಆಗಿದ್ದಾರೆ.

Shubha Poonja: ಕೆಲವೊಮ್ಮೆ ಸೈಕ್​ ಮಾಡಿ ಬಿಡುತ್ತದೆ; ಬಿಗ್​ ಬಾಸ್​ ಮನೆ ಅನುಭವ ಹಂಚಿಕೊಂಡ ಶುಭಾ ಪೂಂಜಾ
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
| Edited By: |

Updated on: May 06, 2021 | 7:15 AM

Share

ಹೊರ ಜಗತ್ತಿನ ಸಂಪರ್ಕವನ್ನು ಬಿಟ್ಟು ಬೇರೆಯದೇ ಲೋಕದಲ್ಲಿ ಬದುಕುವುದು ಇದೆಯಲ್ಲ ಅದು ಕಷ್ಟದ ಕೆಲಸ. ಮೊಬೈಲ್​ ಇಲ್ಲದೆ, ಆಪ್ತರನ್ನು ಬಿಟ್ಟಿರುವುದಕ್ಕೆ ಎಮೋಷನಲಿ ಸ್ಟ್ರಾಂಗ್ ಆಗಿರಬೇಕು. ಬಿಗ್​ ಬಾಸ್​ ಮನೆ ಪ್ರವೇಶ ಮಾಡುವವರಿಗೆ ಹೀಗೊಂದು ಸಮಸ್ಯೆ ಎದುರಾಗದೇ ಇರದು. ಈಗ ಶುಭಾ ಪೂಂಜಾ ಕೂಡ ಹೀಗೊಂದು ಅನುಭವ ಹಂಚಿಕೊಂಡಿದ್ದಾರೆ.

ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಹಾಯಾಗಿದ್ದಾರೆ. ಅವರ ಫಿಯಾನ್ಸಿ ಸುಮಂತ್​ ಅವರನ್ನು ನೆನಪು ಮಾಡಿಕೊಂಡು ಆಗಾಗ ಬೇಸರಗೊಂಡಿದ್ದಿದೆ. ಆದರೆ, ಉಳಿದಂತೆ ಅವರು ಸ್ಟ್ರಾಂಗ್​ ಆಗಿದ್ದಾರೆ. ಪ್ರತಿ ವಾರ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಮಿನೇಷನ್​ನಿಂದ ಬಚಾವ್​ ಆಗುತ್ತಿದ್ದಾರೆ. ಈಗ ಮನೆಯಲ್ಲಿ ತುಂಬಾನೇ ಕಷ್ಟವಾಗುತ್ತಿದೆ ಎಂದು ಶುಭಾ ಹೇಳಿದ್ದಾರೆ.

ಹೊರಜಗತ್ತಲ್ಲಿ ನಾವು ದೂರ ಇದ್ದರೂ ಫೋನ್​ ಇರುತ್ತದೆ. ಈ ಮೂಲಕ ನಾವು ಸಂಪರ್ಕದಲ್ಲಿ ಇದ್ದೇವೆ ಅನಿಸುತ್ತದೆ. ಇಂದು ಬೆಳಗ್ಗೆ ಏನೋ ಕನಸು ಬಿದ್ದಿತ್ತು. ಬಿಗ್​ ಬಾಸ್ ಸಾಂಗ್​ ಬಂದಾಗ ನನಗೆ ರಿಯಾಲಿಟಿಗೆ ಬರೋದಕ್ಕೆ ತುಂಬಾನೇ ಸಮಯ ಹಿಡಿಯಿತು. ಕಳೆದ ಒಂದು ವಾರದಿಂದ ನಿಜವಾಗಲೂ ಎಮೋಷನಲಿ ಟಫ್​ ಆಗ್ತಿದೆ. ಒಂದು ಟೈಮ್​ನಲ್ಲಿ ಸೈಕ್​ ಮಾಡಿ ಬಿಡುತ್ತದೆ ಎಂದರು.

ಈ ವೇಳೆ ಜತೆಗಿದ್ದ ಮಂಜು ಕೂಡ ಇದಕ್ಕೆ ಧ್ವನಿಗೂಡಿಸಿದರು. ಈ ಮನೆಯಲ್ಲಿ ನೋವಾದಾಗ ಮತ್ತೂ ತೊಂದರೆ ಆಗುತ್ತದೆ. ಇನ್ನು 3 ವಾರ ಅಷ್ಟೇ. ಆದರೆ, ಇಲ್ಲಿವರೆಗೆ ಬಂದು ಮನೆಯಿಂದ ಹೊರಹೋಗಿ ಬಿಟ್ಟರೆ ತುಂಬಾನೇ ಬೇಸರ ಆಗುತ್ತದೆ ಎಂದರು.

ಇದನ್ನೂ ಓದಿ: Prashanth Sambargi: ಸುದೀಪ್​ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್​ ಸಂಬರಗಿ; ಮನೆಯವರಿಗೆ ಶಾಕ್

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್