ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಆ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?

|

Updated on: Jun 25, 2021 | 10:37 PM

ನಮ್ಮನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ತಮಿಳರ ಆರೋಪವಾಗಿತ್ತು. ‘ಫ್ಯಾಮಿಲಿ ಮ್ಯಾನ್​ 2’ ಟ್ರೇಲರ್​ ನೋಡಿದ ತಮಿಳಿಯನ್ನರು, ಈ ವೆಬ್​ ಸೀರಿಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದರು.

ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಆ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?
ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಈ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?
Follow us on

ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿಸಾಜಿದ್​ ಹೆಸರಿನ ಉಗ್ರನ ಪಾತ್ರದಲ್ಲಿ ಶಹಾಬ್​ ಅಲಿ ಕಾಣಿಸಿಕೊಂಡಿದ್ದಾರೆ. ನಟಿ ಸಮಂತಾ ಶ್ರೀಲಂಕಾ ತಮಿಳು ಯುವತಿ ರಾಜಿಯಾಗಿ ಮಿಂಚಿದ್ದಾರೆ. ಇಬ್ಬರ ನಡುವೆ ಒಂದು ಪ್ರೇಮ ಕಥೆಯನ್ನು ವೆಬ್​ ಸೀರಿಸ್​ನಲ್ಲಿ ಹೆಣೆಯಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ದೃಶ್ಯಕ್ಕೆ ಕತ್ತರಿ ಬಿದ್ದಿದೆ.

ನಮ್ಮನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ತಮಿಳರ ಆರೋಪವಾಗಿತ್ತು. ‘ಫ್ಯಾಮಿಲಿ ಮ್ಯಾನ್​ 2’ ಟ್ರೇಲರ್​ ನೋಡಿದ ತಮಿಳಿಯನ್ನರು, ಈ ವೆಬ್​ ಸೀರಿಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದರು. ವೆಬ್​ ಸೀರಿಸ್​ ರಿಲೀಸ್​ ಆದ ನಂತರದಲ್ಲಿ ಈ ವಿವಾದ ಸ್ವಲ್ಪ ತಣ್ಣಗಾಗಿತ್ತು. ಈಗ ಶಹಾಬ್​ ಅವರು ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಬರುವ ಪ್ರಧಾನ ಮಂತ್ರಿ ವಿರುದ್ಧದ ಸಂಚಿನಲ್ಲಿ ಸಾಜಿದ್ ಹಾಗೂ ರಾಜಿ ಒಂದಾಗುತ್ತಾರೆ. ರಾಜಿ ಕಂಡರೆ ಸಾಜಿದ್​ಗೆ ಕಾಳಜಿ. ಕೊನೆಯ ಬಾರಿ ರಾಜಿಗೆ ಬಾಯ್​ ಹೇಳುವಾಗ ‘ನಿನ್ನಷ್ಟು ಧೈರ್ಯವಂತ ಸೋಲ್ಜರ್​​ಅನ್ನು ನಾನು ಎಲ್ಲಿಯೂ ನೋಡಿಲ್ಲ’ ಎನ್ನುತ್ತಾನೆ ಸಾಜಿದ್. ಇದೇ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟುವ ದೃಶ್ಯ ಇತ್ತಂತೆ. ಆದರೆ, ನಿರ್ದೇಶಕರು ಇದಕ್ಕೆ ಕತ್ತರಿ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಹಾಬ್​, ‘ಇದೊಂದು ದೊಡ್ಡ ವೆಬ್​ ಸೀರಿಸ್​. ಇಲ್ಲಿ ಎಲ್ಲವನ್ನೂ ತೋರಿಸೋಕೆ ಆಗುವುದಿಲ್ಲ. ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಲೇಬೇಕಾಗುತ್ತದೆ. ಈ ಕಾರಣಕ್ಕೆ, ಎಡಿಟಿಂಗ್​ನಲ್ಲಿ ಆ ದೃಶ್ಯಗಳನ್ನು ಕತ್ತರಿಸಲಾಗಿದೆ. ಇದು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ’ ಎಂದಿದ್ದಾರೆ.

‘ನನ್ನ ಹಾಗೂ ಸಮಂತಾ ನಡುವೆ ಕೆಲ ಆಪ್ತ ದೃಶ್ಯಗಳಿದ್ದವು. ಅದು ನಾವಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದೇವೆ ಎಂಬುದನ್ನು ಸೂಚಿಸುವಂತಿತ್ತು. ಆದರೆ, ಅದನ್ನು ಕೊನೆಯ ಹಂತದಲ್ಲಿ ಕಟ್​ ಮಾಡಲಾಗಿದೆ. ಬಹುಶಃ ನಿರ್ದೇಶಕರಿಗೆ ಅದು ಸರಿ ಅನಿಸಿಲ್ಲದೇ ಇರಬಹುದು. ಈ ಕಾರಣಕ್ಕೆ ಅವರು ಕತ್ತರಿ ಹಾಕಿರಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ:  ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

Samantha Akkineni: ಸಮಂತಾನೇ ಬೇಕೆಂದು ಹಠ ಹಿಡಿದು ಕುಳಿತ ನೆಟ್​ಫ್ಲಿಕ್ಸ್​; ಸಂಭಾವನೆ ಮೊತ್ತ ಅಬ್ಬಬ್ಬಾ ಇಷ್ಟೊಂದಾ?

Published On - 9:53 pm, Fri, 25 June 21