ತಮಿಳುನಾಡು ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಯಾವ ಪಕ್ಷ ಅಧಿಕಾರಕ್ಕೆ ಏರಲಿದೆ ಎನ್ನುವ ಬಗ್ಗೆ ಚರ್ಚೆ ಕೂಡ ಜೋರಾಗಿದೆ. ಹಿರಿಯ ನಟ ಕಮಲ್ ಹಾಸನ್ ಈ ಬಾರಿ ಎಂಎನ್‌ಎಂ (ಮಕ್ಕಳ್ ನೀದಿ ಮಯಮ್) ಪಕ್ಷದ ಮೂಲಕ ಸ್ಪರ್ಧೆ ಮಾಡಿದ್ದಾರೆ. ಕಮಲ್ ಹಾಸನ್ ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ. ಈಗ ಕಮಲ್ ಹಾಸನ್ ಪರವಾಗಿ ಮಗಳು ಅಕ್ಷರಾ ಹಾಸನ್, ಅಣ್ಣನ ಮಗಳು ಹಾಗೂ ನಟಿ ಸುಹಾಸಿನಿ ಭರ್ಜರಿಯಾಗಿ ಡಾನ್ಸ್ ಮಾಡುವ ಮೂಲಕ ಪ್ರಚಾರದ ರಂಗು ಹೆಚ್ಚಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು (ಏ.4) ಮುಂಜಾನೆಯಿಂದಲೇ ಸುಹಾಸಿನಿ ಹಾಗೂ ಅಕ್ಷರಾ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರದ ವೇಳೆ ಮಾರ್ಗಮಧ್ಯೆ ವಾದ್ಯದ ಶಬ್ದಕ್ಕೆ ಸ್ಟೆಪ್ ಹಾಕಿ ಕುಣಿದಿದ್ದಾರೆ. ಅಲ್ಲಿ ನೆರೆದಿದ್ದವರು ಕೂಡ ಸುಹಾಸಿನಿ ಜತೆ ಹೆಜ್ಜೆ ಹಾಕಿದ್ದಾರೆ.
ಎಂಎನ್‌ಎಂ ಪಕ್ಷಕ್ಕೆ ಟಾರ್ಚ್ ಚಿನ್ಹೆ ನೀಡಲಾಗಿದೆ. ಈ ಮೊದಲು ಬಿಡುಗಡೆ ಮಾಡಿದ್ದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುಹಾಸಿನಿ ಕೂಡ ಇದ್ದರು. ಹೀಗಾಗಿ ಅವರು ಕಮಲ್ ಹಾಸನ್ ಪರವಾಗಿ ಮತಯಾಚನೆ ಮಾಡಿದ್ದಾರೆ.
Final day campaign of MNM torch symbol In Coimbatore. #support #election ?#electionvibes campaign by
Legendary @hasinimani mam @Iaksharahaasan mam??#kamalhaasan#legends #suhasini #ElectionCampaign #suhsinihasan #kamalhasan #MNM #Elections2021 #celebrity pic.twitter.com/69aEm44IM0
— Suhasinihasan fan girl Indu? (@hasini_Inspired) April 4, 2021
Actresss #AksharaHaasan Dancing in Coimbatore south campaign. #KamalHaasan @Iaksharahaasan pic.twitter.com/rrqxC3rVM0
— Ponmanaselvan S (@IamSellvah) April 4, 2021
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 234 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಮಕ್ಕಳ್ ನೀದಿ ಮಯಮ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇಂದು ಬಹಿರಂಗ ಮತಯಾಚನೆಗೆ ಕೊನೆಯ ದಿನವಾಗಿದೆ. ಕಳೆದ ಕೆಲ ದಿನಗಳಿಂದ ಅಕ್ಷರಾ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
2019ರಲ್ಲಿ ತೆರೆಕಂಡಿದ್ದ ಶಿವರಾಜ್ಕುಮಾರ್ ನಟನೆಯ ಆಯುಷ್ಮಾನ್ ಭವ ಚಿತ್ರವೇ ಕೊನೆ. ಅದಾದ ನಂತರ ಸುಹಾಸಿನಿ ಯಾವುದೇ ಕನ್ನಡ ಚಿತ್ರಗಳಲ್ಲಿ ಬಣ್ಣ ಹಚ್ಚಿಲ್ಲ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸುಹಾಸಿನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ನಯನತಾರಾ-ಉದಯನಿಧಿ ಲಿವ್ಇನ್ನಲ್ಲಿದ್ದರೆ ನಾನೇನು ಮಾಡಲಿ?: ವಿವಾದ ಎಬ್ಬಿಸಿದ ಹೇಳಿಕೆ