ಖ್ಯಾತ ನಟನ ಹೋಟೆಲ್ ಮೇಲೆ ದಾಳಿ; ಡೇಟ್ ಬಾರ್ ಅಕ್ಕಿ, ಬಣ್ಣದ ಹಾಕಿದ ಆಹಾರ ಪತ್ತೆ

ತೆಲುಗಿನ ಖ್ಯಾತ ನಟ ಸಂದೀಪ್ ಕಿಶನ್ ಅವರು 2010ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಊರು ಪೇರು ಭೈರವಕೋಣ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರು ನಡೆಸುತ್ತಿರುವ ವಿವಾಹ ಭೋಜನಂಬು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಸಾಕಷ್ಟು ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ ಎಂದು ವರದಿ ಆಗಿತ್ತು. ಈ ಬಗ್ಗೆ ಸಂದೀಪ್ ಮಾತನಾಡಿದ್ದಾರೆ.

ಖ್ಯಾತ ನಟನ ಹೋಟೆಲ್ ಮೇಲೆ ದಾಳಿ; ಡೇಟ್ ಬಾರ್ ಅಕ್ಕಿ, ಬಣ್ಣದ ಹಾಕಿದ ಆಹಾರ ಪತ್ತೆ
ಸಂದೀಪ್

Updated on: Jul 26, 2024 | 8:13 AM

ತೆಲುಗಿನ ನಟ ಸಂದೀಪ್ ಕಿಶನ್ ಅವರು ‘ವಿವಾಹ ಭೋಜನಂಬು’ ಹೆಸರಿನ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಸಿಕಂದರಾಬಾದ್​ನಲ್ಲಿ ಈ ರೆಸ್ಟೋರೆಂಟ್ ಇದೆ. ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಈ ರೆಸ್ಟೋರೆಂಟ್​ ಮೇಲೆ ದಾಳಿ ನಡೆಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಆಹಾರ ಸುರಕ್ಷತೆ ಮತ್ತು ಶೇಖರಣೆ ವಿಚಾರದಲ್ಲಿ ಸಾಕಷ್ಟು ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ ಎಂದು ವರದಿ ಆಗಿತ್ತು. ಈ ಬಗ್ಗೆ ಸಂದೀಪ್ ಮಾತನಾಡಿದ್ದಾರೆ.

ಸಂದೀಪ್ ನಡೆಸುತ್ತಿರುವ ರೆಸ್ಟೋರೆಂಟ್​ ಏಳು ಔಟ್​ಲೆಟ್​ಗಳನ್ನು ಹೊಂದಿದೆ. ತಮಗೆ ಮೋಸ ಮಾಡೋ ಅಗತ್ಯವಿಲ್ಲ ಎಂದಿದ್ದಾರೆ ಅವರು. ‘ವಿವಾಹ ಭೋಜನಂಬು ರೆಸ್ಟೋರೆಂಟ್​​ನ ಏಳೂ ಶಾಖೆ​ಗಳಿಂದ ನಾವು ನಿತ್ಯ 50 ಫುಡ್ ಪ್ಯಾಕೆಟ್​ಗಳನ್ನು ದಾನ ಮಾಡುತ್ತೇವೆ. ಅಂದರೆ ದಿನಕ್ಕೆ 350 ಫುಡ್ ಪ್ಯಾಕೆಟ್​ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಒಂದು ಪ್ಯಾಕೆಟ್​ನ ಬೆಲೆ 50 ರೂಪಾಯಿ. ಅಂದರೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ. ಹೀಗಿರುವಾಗ ಕೆಲವೇ ಸಾವಿರ ರೂಪಾಯಿ ಬೆಲೆ ಬಾಳುವ ಅಕ್ಕಿಯನ್ನು ಶೇಖರಿಸಿಟ್ಟು ನಮಗೆ ಆಗೋದು ಏನಿದೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಎಷ್ಟೇ ದಾನ ಧರ್ಮ ಮಾಡಿದರೂ ರೆಸ್ಟೋರೆಂಟ್ ಸ್ವಚ್ಛವಾಗಿ ಇರಲೇಬೇಕು. ನಮ್ಮ ರೆಸ್ಟೋರೆಂಟ್ ಸ್ವಚ್ಛವಾಗಿಲ್ಲ ಎಂಬ ವಿಚಾರವನ್ನು ಅವರು ಹೇಳಿಲ್ಲ. ಈ ದಾಳಿ ನಡೆದ ಬಳಿಕ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಬಿಲ್ಲಿಂಗ್ ಬಂದಿದೆ. ನಾವು ನೀಡುವ ಗುಣಮಟ್ಟದ ಆಹಾರದ ಮೇಲೆ ಜನರಿಗೆ ನಂಬಿಕೆ ಇದೆ’ ಎಂದಿದ್ದಾರೆ ಸಂದೀಪ್.

ಷದಾಳಿ ನಡೆದ ಸಂದರ್ಭದಲ್ಲಿ ಡೇಟ್ ಬಾರ್​ ಆದ ಅಕ್ಕಿ ಬ್ಯಾಗ್ ಈ ರೆಸ್ಟೋರೆಂಟ್​ನಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಇನ್ನು, 500 ಗ್ರಾಮ್ ತೆಂಗಿನ ತುರಿಗೆ ಬಣ್ಣ ಹಾಕಲಾಗಿತ್ತು. ಈ ವಿಚಾರವನ್ನು ಅಧಿಕಾರಿಗಳು ಓಪನ್ ಆಗಿಯೇ ಹೇಳಿಕೊಂಡಿದ್ದರು.

ಇದನ್ನೂ ಓದಿ: ತೆಲುಗು ಚಿತ್ರರಂಗದಿಂದ ದೂರಾದ ನಟಿ ಪೂಜಾ ಹೆಗ್ಡೆ, ಕಾರಣವೇನು?

ಸಂದೀಪ್ ಕಿಶನ್ ಅವರು 2010ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಊರು ಪೇರು ಭೈರವಕೋಣ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಸದ್ಯ ‘ರಾಯನ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 am, Fri, 26 July 24