‘ಶಿವಾಜಿ’ ಸ್ಟೈಲ್​ನಲ್ಲಿ ರಜನಿಕಾಂತ್​ನ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ

|

Updated on: Sep 12, 2023 | 11:46 AM

ರಜನಿಕಾಂತ್ ಅವರು ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್ ಹಾಕಿ ಆಗಮಿಸಿದ್ದಾರೆ. ಅವರನ್ನು ಮಲೇಷ್ಯಾ ಪ್ರಧಾನಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಪ್ರೀತಿಯಿಂದ ಅಪ್ಪುಗೆ ಕೊಟ್ಟಿದ್ದಾರೆ. ಬಳಿಕ ಇಬ್ಬರೂ ಕುಳಿತು ಹಲವು ಹೊತ್ತು ಮಾತನಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

‘ಶಿವಾಜಿ’ ಸ್ಟೈಲ್​ನಲ್ಲಿ ರಜನಿಕಾಂತ್​ನ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ
Follow us on

ರಜನಿಕಾಂತ್ (Rajinikanth) ಅವರನ್ನು ಆರಾಧಿಸುವವರು ವಿಶ್ವಾದ್ಯಂತ ಇದ್ದಾರೆ. ಎಲ್ಲೇ ಹೋದರು ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ವಿದೇಶಕ್ಕೆ ತೆರಳಿದರೆ ಅವರನ್ನು ಅನೇಕರು ತಮ್ಮದೇ ಶೈಲಿಯಲ್ಲಿ ಸ್ವಾಗತಿಸುತ್ತಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಲೇಷ್ಯಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ‘ಶಿವಾಜಿ’ ಸಿನಿಮಾ ಸ್ಟೈಲ್​ನಲ್ಲಿ ರಜನಿಕಾಂತ್ ಅವರನ್ನು ಸ್ವಾಗತಿಸಿದ್ದಾರೆ. ಸದ್ಯ ಈ ವಿಡಿಯೋ ಅಭಿಮಾನಿಗಳ ಪೇಜ್​ನಲ್ಲಿ ವೈರಲ್ ಆಗಿದೆ.

ರಜನಿಕಾಂತ್ ನಟನೆಯ ‘ಶಿವಾಜಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಜನಿ ಬಾಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಮಾಡಿದ್ದ ಒಂದು ಸ್ಟೈಲ್ ಗಮನ ಸೆಳೆದಿತ್ತು. ಬೋಳು ತಲೆಯ ಮೇಲೆ ರಜನಿ ತಮ್ಮ ಬೆರಳನ್ನು ಆಡಿಸುವ ರೀತಿಯಲ್ಲಿ ಅವರ ಸ್ಟೈಲ್ ಇತ್ತು. ಮಲೇಷ್ಯಾ ಪ್ರಧಾನಿ ಕೂಡ ಇದೇ ರೀತಿಯಲ್ಲಿ ಸ್ಟೈಲ್ ಮಾಡಿದ್ದಾರೆ.

ರಜನಿಕಾಂತ್ ಅವರು ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್ ಹಾಕಿ ಆಗಮಿಸಿದ್ದಾರೆ. ಅವರನ್ನು ಮಲೇಷ್ಯಾ ಪ್ರಧಾನಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಪ್ರೀತಿಯಿಂದ ಅಪ್ಪುಗೆ ಕೊಟ್ಟಿದ್ದಾರೆ. ಬಳಿಕ ಇಬ್ಬರೂ ಕುಳಿತು ಹಲವು ಹೊತ್ತು ಮಾತನಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ

ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬರೋಬ್ಬರಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಸನ್ ಪಿಕ್ಚರ್ಸ್​ ರಜನಿಕಾಂತ್ ಜೊತೆ ಹೊಸ ಸಿನಿಮಾ ಘೋಷಿಸಿದೆ. ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ. ಇದು ರಜನಿಕಾಂತ್ ಅವರು 171ನೇ ಸಿನಿಮಾ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ತಲೈವರ್ 171’ ಎಂದು ಶೀರ್ಷಿಕೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:46 am, Tue, 12 September 23