AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ

ರಜನಿಕಾಂತ್​ ಮತ್ತು ಲೋಕೇಶ್​ ಕನಗರಾಜ್​ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್​ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಸ್ವತಃ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಈ ಬಗ್ಗೆ ಘೋಷಣೆ ಆಗಿದೆ. ‘ಜೈಲರ್​’ಗೆ ಸಂಗೀತ ನೀಡಿದ ಅನಿರುದ್ಧ್​ ರವಿಚಂದರ್​ ಅವರೇ ‘ತಲೈವರ್ 171’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.

‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ
ರಜನಿಕಾಂತ್​, ಲೋಕೇಶ್​ ಕನಗರಾಜ್​
ಮದನ್​ ಕುಮಾರ್​
|

Updated on: Sep 11, 2023 | 4:14 PM

Share

ನಟ ರಜನಿಕಾಂತ್​ (Rajinikanth) ಅವರಿಗೆ 2023ರ ವರ್ಷ ಸಖತ್​ ಸ್ಪೆಷಲ್​. ಅವರು ನಟಿಸಿದ ‘ಜೈಲರ್​’ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. 72ನೇ ವಯಸ್ಸಿನಲ್ಲೂ ಅವರು ಆ್ಯಕ್ಷನ್​ ಸಿನಿಮಾ ಮಾಡಿ ಇಷ್ಟು ದೊಡ್ಡ ಗೆಲುವು ಕಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈಗ ರಜನಿಕಾಂತ್​ ಅವರ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ (Lokesh Kanagaraj) ಜೊತೆ ರಜನಿಕಾಂತ್​ ಕೈ ಜೋಡಿಸುತ್ತಿದ್ದಾರೆ. ಇದು ರಜನಿ ನಟನೆಯ 171ನೇ ಸಿನಿಮಾ ಆಗಲಿದೆ. ಇದನ್ನು ತಾತ್ಕಾಲಿಕವಾಗಿ ‘ತಲೈವರ್ 171’ (Thalaivar 171) ಎಂದು ಕರೆಯಲಾಗುತ್ತಿದೆ. ‘ಜೈಲರ್​’ ಚಿತ್ರವನ್ನು ನಿರ್ಮಾಣ ಮಾಡಿದ ‘ಸನ್​ ಪಿಕ್ಚರ್ಸ್​’ ಸಂಸ್ಥೆಯೇ ‘ತಲೈವರ್ 171’ ಸಿನಿಮಾಗೆ ಬಂಡವಾಳ ಹೂಡಲಿದೆ.

ರಜನಿಕಾಂತ್​ ಮತ್ತು ಲೋಕೇಶ್​ ಕನಗರಾಜ್​ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್​ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಸ್ವತಃ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಈ ಬಗ್ಗೆ ಘೋಷಣೆ ಆಗಿದೆ. ‘ಜೈಲರ್​’ಗೆ ಸಂಗೀತ ನೀಡಿದ ಅನಿರುದ್ಧ್​ ರವಿಚಂದರ್​ ಅವರೇ ‘ತಲೈವರ್ 171’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅನ್ಬರಿವ್​ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

ಕಾಲಿವುಡ್​ನಲ್ಲಿ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೈದಿ’, ‘ವಿಕ್ರಮ್​’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅವರು ಈಗ ದಳಪತಿ ವಿಜಯ್​ ನಟನೆಯ ‘ಲಿಯೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಕಥೆ ಒಂದಕ್ಕೊಂದು ಕನೆಕ್ಟ್​ ಆಗಿವೆ. ಆದ್ದರಿಂದ ‘ತಲೈವರ್ 171’ ಸಿನಿಮಾದ ಕಥೆ ಕೂಡ ಈ ಚಿತ್ರಗಳಿಗೆ ಲಿಂಕ್​ ಹೊಂದಿರಲಿದೆ ಎಂದು ಬಹುತೇಕರು ಊಹಿಸುತ್ತಿದ್ದಾರೆ. ಕಾಲಿವುಡ್​ನ ಎಲ್ಲ ದಾಖಲೆಗಳನ್ನು ಈ ಸಿನಿಮಾ ಮುರಿದುಹಾಕಲಿದೆ ಎಂದು ಕೂಡ ಫ್ಯಾನ್ಸ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಜನಿಕಾಂತ್

ಇದು ರಜನಿಕಾಂತ್​ ಅವರ ಕೊನೇ ಸಿನಿಮಾ ಆಗಲಿದೆ ಎಂಬ ಗುಮಾನಿ ಕೂಡ ಇದೆ. ‘ತಲೈವರ್ 171’ ಬಳಿಕ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಗಾಸಿಪ್​ ಸಹ ಹರಿದಾಡಿದೆ. ಒಂದು ವೇಳೆ ಅದು ನಿಜವೇ ಹೌದಾದರೆ ಈ ಸಿನಿಮಾದಲ್ಲಿ ರಜನಿಕಾಂತ್​ ಜೊತೆ ಸೂರ್ಯ, ಕಮಲ್​ ಹಾಸನ್​, ದಳಪತಿ ವಿಜಯ್​ ಮುಂತಾದವರು ನಟಿಸಲಿ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ