ಚೆನ್ನೈ ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದ ಎಆರ್ ರೆಹಮಾನ್
ಸಂಗೀತ ಕಚೇರಿಗೆ ಟ್ರಾಫಿಕ್ ಮತ್ತು ಇತರ ವ್ಯವಸ್ಥೆಗಳನ್ನು ನೋಡಿಕೊಳ್ಳುವಂತೆ ತಾಂಬರಂ ಪೊಲೀಸರಿಗೆ ತಿಳಿಸಿದ ನಂತರ ತಮಿಳುನಾಡು ಪೊಲೀಸರು ತನಿಖೆಯನ್ನು ಪ್ರಾರಂಭಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಹೇಳಿದ್ದಾರೆ. ಹೆಚ್ಚುವರಿ ಟಿಕೆಟ್‌ಗಳು ಮಾರಾಟವಾಗಿವೆಯೇ ಎಂದು ನೋಡಲು ಜಿವಾಲ್ ಪೊಲೀಸರಿಗೆ ಹೇಳಿದ್ದಾರೆ.
ಚೆನ್ನೈ: ಸಂಗೀತಗಾರ ಎಆರ್ ರೆಹಮಾನ್ (AR Rahman) ಅವರು ಸೆಪ್ಟೆಂಬರ್ 10 ರಂದು ಚೆನ್ನೈನಲ್ಲಿ (Chennai) ತಮ್ಮ ಸಂಗೀತ ಕಾರ್ಯಕ್ರಮದ ವೇಳೆ ಆದ ಅವ್ಯವಸ್ಥೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿನ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಟಿಕೆಟ್ ಪಡೆದುಕೊಂಡಿದ್ದರೂ ಕಾರ್ಯಕ್ರಮ ವೀಕ್ಷಿಸಲು ಆಗಲಿಲ್ಲ. ಅಲ್ಲಿ ಸಂಪೂರ್ಣ ಅವ್ಯವಸ್ಥೆ ಇದ್ದು, ನೂಕುನುಗ್ಗಲಿನ ಪರಿಸ್ಥಿತಿ ಏರ್ಪಟ್ಟಿತ್ತು ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರೆಹಮಾನ್, ಆತ್ಮೀಯ ಚೆನ್ನೈ ಜನಗಳೇ, ನಿಮ್ಮಲ್ಲಿ ಟಿಕೆಟ್ ಖರೀದಿಸಿದವರು ಮತ್ತು ದುರದೃಷ್ಟಕರ ಸನ್ನಿವೇಶಗಳಿಂದ ಪ್ರವೇಶಿಸಲು ಸಾಧ್ಯವಾಗಲಿಲ್ಲ, ದಯವಿಟ್ಟು ನಿಮ್ಮ ಟಿಕೆಟ್ ಖರೀದಿಯ ಪ್ರತಿಯನ್ನು ನಿಮ್ಮ ಕುಂದುಕೊರತೆಗಳ ಜೊತೆಗೆ arr4chennai@btos.in ಗೆ ಹಂಚಿಕೊಳ್ಳಿ. ನಮ್ಮ ತಂಡವು ಆದಷ್ಟು ಬೇಗ (ಸಾಧ್ಯವಾದಷ್ಟು ಬೇಗ) ಪ್ರತಿಕ್ರಿಯಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
Dearest Chennai Makkale, those of you who purchased tickets and weren’t able to enter owing to unfortunate circumstances, please do share a copy of your ticket purchase to arr4chennai@btos.in along with your grievances. Our team will respond asap🙏@BToSproductions @actcevents
— A.R.Rahman (@arrahman) September 11, 2023
ರೆಹಮಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.ಕೆಲವರು ನನ್ನನ್ನು G.O.A.T (Greatest of all times) ಎಂದು ಕರೆಯುತ್ತಾರೆ ನಾವೆಲ್ಲರೂ ಎಚ್ಚೆತ್ತುಕೊಳ್ಳಲು ಈ ಬಾರಿ ನಾನು ಬಲಿ ಕೊಡುವ ಮೇಕೆಯಾಗಲಿ .ಚೆನ್ನೈನ ಲೈವ್ ಕಲೆಯು ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ವಿಜೃಂಭಿಸಲಿ, ಪ್ರವಾಸೋದ್ಯಮದಲ್ಲಿ ಹೆಚ್ಚಳ, ದಕ್ಷ ಜನಸಮೂಹ ನಿರ್ವಹಣೆ, ಸಂಚಾರ ನಿರ್ವಹಣೆ, ನಿಯಮಗಳ ಅನುಸರಣೆ, ಮಕ್ಕಳು ಮತ್ತು ಮಹಿಳೆಯರಿಗೆ ಸುರಕ್ಷಿತ ಮತ್ತು ಅತಿವಾಸ್ತವಿಕವಾದ ಅನುಭವವನ್ನು ಸೃಷ್ಟಿಸುವುದು, ನಮ್ಮ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಕೊಂಡಾಡುವ ಮೂಲಕ ಚೆನ್ನೈನಲ್ಲಿ ಸಾಂಸ್ಕೃತಿಕ ಪುನರುಜ್ಜೀವನವನ್ನು ಪ್ರಚೋದಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಂಗೀತ ಕಚೇರಿಗೆ ಟ್ರಾಫಿಕ್ ಮತ್ತು ಇತರ ವ್ಯವಸ್ಥೆಗಳನ್ನು ನೋಡಿಕೊಳ್ಳುವಂತೆ ತಾಂಬರಂ ಪೊಲೀಸರಿಗೆ ತಿಳಿಸಿದ ನಂತರ ತಮಿಳುನಾಡು ಪೊಲೀಸರು ತನಿಖೆಯನ್ನು ಪ್ರಾರಂಭಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಹೇಳಿದ್ದಾರೆ. ಹೆಚ್ಚುವರಿ ಟಿಕೆಟ್‌ಗಳು ಮಾರಾಟವಾಗಿವೆಯೇ ಎಂದು ನೋಡಲು ಜಿವಾಲ್ ಪೊಲೀಸರಿಗೆ ಹೇಳಿದ್ದಾರ
ತಾಂಬರಂ ಕಮಿಷನರ್ ಅಮಲ್ ರಾಜ್ ಮಾತನಾಡಿ 20,000ರನ್ನು ನಿರೀಕ್ಷಿಸಲಾಗಿತ್ತು.ಆದರೆ ಅಲ್ಲಿ ಸುಮಾರು 50,000 ಜನರು ಬಂದಿದ್ದರು ಎಂದು ಹೇಳಿದ್ದಾರೆ.
ಮರಕ್ಕುಮಾ ನೆಂಜಮ್ ಎಂಬ ಶೀರ್ಷಿಕೆಯ ರೆಹಮಾನ್ ಸಂಗೀತ ಕಚೇರಿಯನ್ನು ಆಯೋಜಿಸಿದ ರೀತಿ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದ ಹಿನ್ನಲೆಯಲ್ಲಿ ಸಂಗೀತ ಮಾಂತ್ರಿಕ ರೆಹಮಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಮಾನ್ಯವಾದ ಪಾಸ್‌ಗಳನ್ನು ಹೊಂದಿದ್ದರೂ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಕೆಲವರು ದೂರಿದರೆ ಸ್ಥಳಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಎಆರ್ ರೆಹಮಾನ್ ಮೇಲಿರುವ ಅಭಿಮಾನ ಸತ್ತು ಹೋಯಿತು’; ಫ್ಯಾನ್ಸ್ ಬೇಸರಕ್ಕೆ ಕಾರಣ ಏನು?
ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸ್ಥಳದಲ್ಲಿ ಎಸಿಟಿಸಿ ಇವೆಂಟ್ಸ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಆರಂಭದಲ್ಲಿ ಆಗಸ್ಟ್‌ನಲ್ಲಿ ನಿಗದಿಪಡಿಸಲಾಗಿತ್ತು ಆದರೆ ಭಾರೀ ಮಳೆಯಿಂದಾಗಿ ಮುಂದೂಡಲಾಗಿತ್ತು.
ಎಆರ್ ರೆಹಮಾನ್ ಹಾಗೂ ಅವರ ತಂಡದವರಿಂದ ಭಾನುವಾರ ವಿಶೇಷ ಕಾರ್ಯಕ್ರಮ ಇತ್ತು. ಆದರೆ, ಇದನ್ನು ಸರಿಯಾಗಿ ಮ್ಯಾನೇಜ್ ಮಾಡಲಿಲ್ಲ. ದುಡ್ಡಿನ ಆಸೆಗಾಗಿ ಹೆಚ್ಚಿನ ಟಿಕೆಟ್ ಮಾರಾಟ ಮಾಡಲಾಗಿತ್ತು. ಟಿಕೆಟ್ ಪಡೆದ ಬಹುತೇಕರು ಆಗಮಿಸಿದ್ದರು. ಹೀಗಾಗಿ, ಒಳಗೆ ಜಾಗವೇ ಇಲ್ಲದಂತೆ ಆಗಿತ್ತು. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
#MarakkumaNenjam yemana Kannula paathadhuku Apram marakumma nenjam… @actcevents Beyond your greed for money, at least you should have warned that elderly and little kids are not allowed. So sad to have witnessed what they went through.. @arrahman #ARRConcert @Udhaystalin pic.twitter.com/22nri6ZBDo
— Ashok Ramadass (@ashokrbp) September 10, 2023
#ARRahman #ARRahmanConcert arrangements couldn’t be more pathetic. This is the view you get paying for Gold tickets @actcevents refund our money back @arrahman #MarakkumaNenjam pic.twitter.com/hbGQwf4So5
— Guru (@gururag96) September 10, 2023
Very very bad audio systems. Couldn’t hear any song or music. Too crowded, worst organisation, stampede, parking jammed, could not even return, need refund.#MarakkaveMarakathaNenjam#arrahman | #isaipuyal | #marakkumanenjam pic.twitter.com/ROHBCS5sTu
— Jay (@jp15may) September 10, 2023
‘2000 ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. ಆದರೆ, ಒಳಗೆ ಬಿಡಲೇ ಇಲ್ಲ’ . ‘ಅತ್ಯಂತ ಕೆಟ್ಟದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹಣ, ಶಕ್ತಿ ಎಲ್ಲವೂ ವ್ಯರ್ಥವಾಗಿದೆ’ ಎಂದು ಬಳಕೆದಾರರು ದೂರಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Mon, 11 September 23