Suvo Chakraborty: ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಕಿರುತೆರೆ ನಟ

| Updated By: Digi Tech Desk

Updated on: Jun 11, 2021 | 9:47 AM

Suvo Chakraborty Video: ಫೇಸ್​ಬುಕ್​ನಲ್ಲಿ ಇದನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಟೆನ್ಶನ್​ ಆಗಿದೆ. ಈ ವಿಚಾರವನ್ನು ಅಭಿಮಾನಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಅವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Suvo Chakraborty: ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಕಿರುತೆರೆ ನಟ
ಸುವೋ ಚಕ್ರವರ್ತಿ
Follow us on

ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಚಿತ್ರರಂಗದ ಕೆಲಸಗಳು ಅರ್ಧಕ್ಕೆ ನಿಂತಿದ್ದು, ಸಾಕಷ್ಟು ಕಲಾವಿದರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಕೆಲ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅದೇ ರೀತಿ ಕೆಲಸ ಇಲ್ಲದೆ, ಕಿರುತೆರೆ ನಟನೋರ್ವ ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಸುವೋ ಚಕ್ರವರ್ತಿ ಬೆಂಗಾಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸರ್ಕಾರ ಹೇರಿರುವ ಲಾಕ್​ಡೌನ್​ನಿಂದ ಅವರಿಗೆ ಕೆಲಸ ಇಲ್ಲದಾಗಿದೆ. ಹೀಗಾಗಿ, ಆರ್ಥಿಕ ಮುಗ್ಗಟ್ಟು ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಫೇಸ್​ಬುಕ್​ ಲೈವ್​ ಬಂದಿರುವ ಅವರು ನಿದ್ರೆ ಮಾತ್ರೆ ಸೇವನೆ ಮಾಡಿದ್ದಾರೆ.

‘ನನಗೆ ಕಟ್ಟಡದ ಮೇಲಿನಿಂದ ಜಿಗಿಯೋಕೆ ಬರುವುದಿಲ್ಲ. ಕೈ ಕತ್ತರಿಸಿಕೊಳ್ಳುವುದು, ನೇಣು ಹಾಕಿಕೊಳ್ಳುವುದೆಲ್ಲ ಇಷ್ಟವಾಗುವುದಿಲ್ಲ. ಕೊನೆಯದಾಗಿ ನನಗೆ ಸಿಕ್ಕಿದ್ದು ಈ ನಿದ್ರೆ ಮಾತ್ರೆಗಳು’ ಎಂದು ಅವರು ಲೈವ್​ನಲ್ಲಿ ಹೇಳಿದ್ದಾರೆ.

ಫೇಸ್​ಬುಕ್​ನಲ್ಲಿ ಇದನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಟೆನ್ಶನ್​ ಆಗಿದೆ. ಈ ವಿಚಾರವನ್ನು ಅಭಿಮಾನಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸುವೋ ಅವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಅವಕಾಶಗಳು ಇಲ್ಲದೆ, ಸುವೋ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.

ಕೊವಿಡ್​ನಿಂದ ಚಿತ್ರರಂಗದ ಸಾಕಷ್ಟು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸೀರಿಸ್​ನಲ್ಲಿ ಕೌನ್ಸಿಲರ್​ ಆಗಿ ಕಾಣಿಸಿಕೊಂಡಿದ್ದು ಆಸಿಫ್​ ಬಸ್ರಾ ಕಳೆದ ನವೆಂಬರ್​ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಟ ಆಸಿಫ್​ ಬಸ್ರಾರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಹಿಮಾಚಲ ಪ್ರದೇಶದ ಧರಮ್​ಶಾಲಾದ ಖಾಸಗಿ ಕಟ್ಟದವೊಂದರಲ್ಲಿ ನವೆಂಬರ್​ನಲ್ಲಿ ಪತ್ತೆಯಾಗಿತ್ತು. ಆಸಿಫ್​ ಬಸ್ರಾ ಹಲವು ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದರು. ಲಾಕ್​ಡೌನ್ ತಂದೊಡ್ಡಿದ​ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಆ ಒಂದು ವಿಷಯ.. ನಿರ್ಜನ ಪ್ರದೇಶದಲ್ಲಿ ಗಂಡನ ಆತ್ಮಹತ್ಯೆ, ಪತ್ನಿ ಆಸ್ಪತ್ರೆಗೆ ದಾಖಲು

Published On - 6:46 pm, Thu, 10 June 21