
ನಟಿ ತಮನ್ನಾ (Tamannaah Bhatia) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಇದರ ಜೊತೆಗೆ ವೈಯಕ್ತಿಕ ಜೀವನದ ವಿಚಾರದಲ್ಲೂ ಅವರು ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ತಮನ್ನಾ ಅವರು ಡೈಮಂಡ್ ಉಂಗುರ ಧರಿಸಿರುವ ಫೋಟೋ ವೈರಲ್ ಆಗಿತ್ತು. ಇಷ್ಟೇ ಅಲ್ಲ, ಈ ಉಂಗುರವನ್ನು ಅವರಿಗೆ ರಾಮ್ ಚರಣ್ (Ram Charan) ಪತ್ನಿ ಉಪಾಸನಾ ಗಿಫ್ಟ್ ನೀಡಿದ್ದರು ಎಂದು ಕೂಡ ಹೇಳಲಾಗಿತ್ತು. ಆದರೆ, ಅಸಲಿ ವಿಚಾರ ತಿಳಿದ ಬಳಿಕ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಏಕೆಂದರೆ ಅದು ಡೈಮಂಡ್ ಆಗಿರಲೇ ಇಲ್ಲ! ಈ ವಿಚಾರವನ್ನು ತಮನ್ನಾ ಹೇಳಿಕೊಂಡಿದ್ದಾರೆ.
ತಮನ್ನಾ ಅವರು ಡೈಮಂಡ್ ಉಂಗುರು ಧರಿಸಿ ಕುಳಿತ ಫೋಟೋ ವೈರಲ್ ಆಗಿತ್ತು. ಇದರ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ರಾಮ್ ಚರಣ್. ಚಿತ್ರದಲ್ಲಿನ ಅದ್ಭುತ ನಟನೆಗೆ ಈ ಉಂಗುರವನ್ನು ಉಪಾಸನಾ ಅವರು ತಮನ್ನಾಗೆ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ಈ ಉಂಗುರ ಉಪಾಸನಾ ಕೊಟ್ಟಿದ್ದು ಅಲ್ಲವೇ ಅಲ್ಲ. ಇದೊಂದು ಬಾಟಲ್ ಓಪನರ್.
‘ಇದನ್ನು ಹೇಳಲು ನನಗೆ ಬೇಸರ ಇದೆ. ಬಾಟಲ್ ಓಪನರ್ ಜೊತೆ ನಾವು ಫೋಟೋಶೂಟ್ ಮಾಡುತ್ತಿದ್ದೆವು. ನಿಜವಾದ ಡೈಮಂಡ್ ಅಲ್ಲ’ ಎಂದು ಬರೆದುಕೊಂಡಿರುವ ತಮನ್ನಾ, ಹೆಣ್ಣುಮಕ್ಕಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಇಷ್ಟಪಡುತ್ತಾರೆ ಎಂಬರ್ಥ ಬರುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಸುಳ್ಳು ಸುದ್ದಿ ಎಷ್ಟು ಬೇಗ ಹಬ್ಬುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Tamannaah Bhatia: ತಮನ್ನಾ ಬಳಿ ಇದೆ 2 ಕೋಟಿ ರೂ. ಬೆಲೆಯ ವಜ್ರದ ಉಂಗುರ; ರಾಮ್ ಚರಣ್ ಪತ್ನಿ ಉಪಾಸನಾ ನೀಡಿದ ಉಡುಗೊರೆ
ತಮನ್ನಾ ನಟನೆಯ ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ವೆಬ್ ಸೀರಿಸ್ನಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಒಟ್ಟಾಗಿ ನಟಿಸಿದ್ದಾರೆ. ಇಂಟಿಮೇಟ್ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ. ಇದನ್ನು ತಮನ್ನಾ ಕೂಡ ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ