AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

​Tamannaah Bhatia: ತಮನ್ನಾ ಬಳಿ ಇದೆ 2 ಕೋಟಿ ರೂ. ಬೆಲೆಯ ವಜ್ರದ ಉಂಗುರ; ರಾಮ್​ ಚರಣ್ ಪತ್ನಿ ಉಪಾಸನಾ ನೀಡಿದ ಉಡುಗೊರೆ

Diamond Ring: ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ ಖುಷಿಯಾಗಿದ್ದ ಉಪಾಸನಾ ಅವರು ಈ ವಜ್ರದ ಉಂಗುರ ನೀಡಿದ್ದರು.

​Tamannaah Bhatia: ತಮನ್ನಾ ಬಳಿ ಇದೆ 2 ಕೋಟಿ ರೂ. ಬೆಲೆಯ ವಜ್ರದ ಉಂಗುರ; ರಾಮ್​ ಚರಣ್ ಪತ್ನಿ ಉಪಾಸನಾ ನೀಡಿದ ಉಡುಗೊರೆ
ತಮನ್ನಾ ಭಾಟಿಯಾ, ಉಪಾಸನಾ ಕೊನಿಡೆಲಾ
ಮದನ್​ ಕುಮಾರ್​
|

Updated on: Jul 24, 2023 | 3:01 PM

Share

ಖ್ಯಾತ ನಟಿ ತಮನ್ನಾ ಭಾಟಿಯಾ (​Tamannaah Bhatia) ಅವರು ದಕ್ಷಿಣ ಭಾರತದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗೆಯೇ ಬಾಲಿವುಡ್​ನಲ್ಲೂ ಅವರಿಗೆ ಸಖತ್​ ಬೇಡಿಕೆ ಇದೆ. ಈಗ ಅವರ ಬಗೆಗಿನ ಅಚ್ಚರಿ ವಿಚಾರವೊಂದು ಬಹಿರಂಗ ಆಗಿದೆ. ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ (​Diamond Ring) ಇದೆ. ಸೋಶಿಯಲ್​ ಮೀಡಿಯಾದಲ್ಲಿ ಇದರ ಫೋಟೋ ವೈರಲ್​ ಆಗಿದೆ. ವಿಶೇಷ ಏನೆಂದರೆ, ಇದು ಜಗತ್ತಿನಲ್ಲೇ 5ನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗುತ್ತಿದೆ. ಈ ಅತ್ಯಮೂಲ್ಯವಾದ ವಸ್ತು ತಮನ್ನಾಗೆ ಸಿಕ್ಕಿದ್ದು ಉಡುಗೊರೆಯ ರೂಪದಲ್ಲಿ. ರಾಮ್​ ಚರಣ್​ ಪತ್ನಿ ಉಪಾಸನಾ ಕೊನಿಡೆಲಾ (​Upasana Konidela) ಅವರು ಈ ಉಂಗುರವನ್ನು ತಮನ್ನಾಗೆ ಗಿಫ್ಟ್​ ನೀಡಿದ್ದರು.

ತಮನ್ನಾ ಅವರು ಟಾಲಿವುಡ್​ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ತಮನ್ನಾ ಎಂದರೆ ಇಷ್ಟ. ಉಪಾಸನಾ ಕೊನಿಡೆಲಾ ಅವರ ಜೊತೆ ತಮನ್ನಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ರಾಮ್​ ಚರಣ್​ ನಿರ್ಮಿಸಿದ್ದ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ ಖುಷಿಯಾಗಿದ್ದ ಉಪಾಸನಾ ಅವರು ಈ ವಜ್ರದ ಉಂಗುರ ನೀಡಿದ್ದರು. ಈಗ ಆ ವಿಚಾರದ ಬಗ್ಗೆ ಫ್ಯಾನ್ಸ್​ ವಲಯದಲ್ಲಿ ಚರ್ಚೆ ಆಗುತ್ತಿದೆ.

ತಮನ್ನಾ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬಹಳ ವರ್ಷ ಕಳೆದಿದೆ. ಈಗಲೂ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ರಜನಿಕಾಂತ್​ ಜೊತೆ ಅವರು ನಟಿಸಿರುವ ‘ಜೈಲರ್​’ ಸಿನಿಮಾ ಆಗಸ್ಟ್​ 10ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ‘ಕಾವಾಲಾ..’ ಹಾಡು ಧೂಳೆಬ್ಬಿಸುತ್ತಿದೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಲಕ್ಷಾಂತರ ಮಂದಿ ಈ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಯೂಟ್ಯೂಬ್​ನಲ್ಲಿ ‘ಕಾವಾಲಾ..’ ಸಾಂಗ್​ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ‘ತಮನ್ನಾ ಮೇಲೆ ನನಗೆ ಹುಚ್ಚು ಪ್ರೀತಿ ಆಗಿದೆ’; ಪಬ್ಲಿಸಿಟಿ ಸ್ಟಂಟ್ಸ್​ ಎಂದವರಿಗೆ ವಿಜಯ್ ವರ್ಮಾ ಉತ್ತರ

ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ತಮನ್ನಾ ಭಾಟಿಯಾ ಅವರು ಆಗಾಗ ಸುದ್ದಿ ಆಗುತ್ತಾರೆ. ಬಾಲಿವುಡ್​ ನಟ ವಿಜಯ್​ ವರ್ಮಾ ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಆ ವಿಚಾರ ಈಗ ಗುಟ್ಟಾಗಿ ಉಳಿದುಕೊಂಡಿಲ್ಲ. ಶೀಘ್ರದಲ್ಲೇ ಅವರಿಬ್ಬರು ಹಸೆಮಣೆ ಏರುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇಬ್ಬರೂ ಜೊತೆಯಾಗಿ ನಟಿಸಿದ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾಗೆ ಫ್ಯಾನ್ಸ್​ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!