Tamannaah Bhatia: ಅಭಿಮಾನಿಯ ಕೈ ಮೇಲೆ ತಮನ್ನಾ ಭಾವಚಿತ್ರದ ಟ್ಯಾಟೂ; ಪ್ರೀತಿ ಕಂಡು ನಟಿ ಭಾವುಕ

|

Updated on: Jun 27, 2023 | 11:37 AM

ತಮನ್ನಾ ಭಾಟಿಯಾಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಆ ಪೈಕಿ ಈ ವಿಶೇಷ ಅಭಿಮಾನಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

Tamannaah Bhatia: ಅಭಿಮಾನಿಯ ಕೈ ಮೇಲೆ ತಮನ್ನಾ ಭಾವಚಿತ್ರದ ಟ್ಯಾಟೂ; ಪ್ರೀತಿ ಕಂಡು ನಟಿ ಭಾವುಕ
ತಮನ್ನಾ ಭಾಟಿಯಾ
Follow us on

ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರೀತಿ ತೋರಿಸುತ್ತಾರೆ. ಕೆಲವರು ನಟಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ ಇಲ್ಲಿ ಓರ್ವ ಅಭಿಮಾನಿಯು ತಮನ್ನಾ ಭಾಟಿಯಾ ಅವರ ಭಾವಚಿತ್ರವನ್ನು ಕೈ ಮೇಲೆ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾರೆ. ಅದನ್ನು ನೋಡಿ ತಮನ್ನಾ ಭಾಟಿಯಾ ಅವರು ಭಾವುಕರಾಗಿದ್ದಾರೆ. ಮುಂಬೈ ಏರ್​ಪೋರ್ಟ್​ನಲ್ಲಿ ಈ ವಿಶೇಷ ಅಭಿಮಾನಿಯನ್ನು (Tamannaah Bhatia Fan) ತಮನ್ನಾ ಭೇಟಿ ಆಗಿದ್ದಾರೆ. ಈ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ತಮನ್ನಾ ಭಾಟಿಯಾ ಅವರು 2005ರಿಂದಲೂ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ನಟನೆಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಆ ಪೈಕಿ ಈ ವಿಶೇಷ ಅಭಿಮಾನಿಗೆ ತಮನ್ನಾ ಭಾಟಿಯಾ ಧನ್ಯವಾದ ತಿಳಿಸಿದ್ದಾರೆ. ‘ಇಂಥ ಅಭಿಮಾನಿಗಳನ್ನು ಪಡೆದ ನೀವು ಧನ್ಯ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಈಗ ತಮನ್ನಾ ಅವರು ಸಖತ್​ ಬ್ಯುಸಿ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ಗಳಿಂದಲೂ ಅವರಿಗೆ ಆಫರ್​ಗಳು ಹೆಚ್ಚಾಗಿವೆ. ಇತ್ತೀಚೆಗೆ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್​ ಆದ ‘ಜೀ ಕರ್ದಾ’ ವೆಬ್​ ಸಿರೀಸ್​ನಲ್ಲಿ ತಮನ್ನಾ ನಟಿಸಿದ್ದಾರೆ. ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರ ಮಾಡಿದ್ದು ನೆಟ್​ಫ್ಲಿಕ್ಸ್​ ಮೂಲಕ ಜೂನ್​ 29ರಂದು ಅದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ-ವಿಜಯ್​ ವರ್ಮಾ ಮನೆಯಲ್ಲಿ ನಡೆಯುತ್ತಿದೆ ಮದುವೆ ಮಾತುಕತೆ?

ಇನ್ನು, ವೈಯಕ್ತಿಕ ಜೀವನದ ಕಾರಣದಿಂದಲೂ ತಮನ್ನಾ ಭಾಟಿಯಾ ಅವರು ಆಗಾಗ ಸುದ್ದಿ ಆಗುತ್ತಾರೆ. ಬಾಲಿವುಡ್​ ನಟ ವಿಜಯ್​ ವರ್ಮಾ ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಅವರಿಬ್ಬರು ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಆದಷ್ಟು ಬೇಗ ಈ ಜೋಡಿ ಹಸೆಮಣೆ ಏರಬಹುದು ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.