ತಮನ್ನಾ ಭಾಟಿಯಾರಿಂದ ಹಿಟ್ ಆಯ್ತು ‘ಸ್ತ್ರೀ 2’ ಸಿನಿಮಾ? ಪ್ರತಿಕ್ರಿಯಿಸಿದ ನಟಿ

|

Updated on: Dec 04, 2024 | 7:50 AM

‘ಆಜ್ ಕಿ ರಾತ್..’ ಸಿನಿಮಾಗೆ ಪ್ರಮುಖ ತಿರುವು ನೀಡುತ್ತದೆ. ಈ ಸಿನಿಮಾದಲ್ಲಿ ತಮನ್ನಾ ಅವರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ತಮನ್ನಾ ಭಾಟಿಯಾ ಅವರ ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಸಿನಿಮಾ ಗೆಲುವಿಗೆ ಈ ಹಾಡು ಕೂಡ ಪ್ರಾಮುಖ್ಯತೆ ವಹಿಸಿತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ.

ತಮನ್ನಾ ಭಾಟಿಯಾರಿಂದ ಹಿಟ್ ಆಯ್ತು ‘ಸ್ತ್ರೀ 2’ ಸಿನಿಮಾ? ಪ್ರತಿಕ್ರಿಯಿಸಿದ ನಟಿ
ತಮನ್ನಾ
Follow us on

ರಾಜ್​ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಹಲವು ವಿಚಾರಗಳು ಕಾರಣವಾಗಿವೆ. ಈ ಬಗ್ಗೆ ಓಪನ್ ಆಗಿ ಚರ್ಚೆಗಳು ನಡೆದಿವೆ. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ‘ಆಜ್​ ಕಿ ರಾತ್’ ಹಾಡಿಗೆ ಹೆಜ್ಜೆ ಹಾಕಿದ್ದರು. ಇದು ಕೂಡ ಸಿನಿಮಾ ಗೆಲುವಿಗೆ ಕಾರಣವಾಗಿತ್ತು. ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ.

‘ಆಜ್ ಕಿ ರಾತ್..’ ಸಿನಿಮಾಗೆ ಪ್ರಮುಖ ತಿರುವು ನೀಡುತ್ತದೆ. ಈ ಸಿನಿಮಾದಲ್ಲಿ ತಮನ್ನಾ ಅವರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ತಮನ್ನಾ ಭಾಟಿಯಾ ಅವರ ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಸಿನಿಮಾ ಗೆಲುವಿಗೆ ಈ ಹಾಡು ಕೂಡ ಪ್ರಾಮುಖ್ಯತೆ ವಹಿಸಿತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಈ ಸಿನಿಮಾ ಗೆಲುವಿಗೆ ನನ್ನ ಹಾಡಿನ ಕೊಡುಗೆಯೂ ಇದೆ. ಆದರೆ, ಅದನ್ನು ಒಪ್ಪಿಕೊಳ್ಳಲು ವಿಚಿತ್ರ ಅನಿಸುತ್ತದೆ’ ಎಂದಿದ್ದಾರೆ ಅವರು.

‘ಈ ಹಾಡಿನ ಮೂಲಕ ಸಾಕಷ್ಟು ಪ್ರೀತಿ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಕ್ರೆಡಿಟ್ ಇನ್ನೇನು ಬೇಕು? ನಿರ್ಮಾಪಕ ದಿನೇಶ್ ವಿಜಯನ್ ಅವರು ಹಾಡಿನಿಂದ ಬಂದ ಹಣದಿಂದ ಪೇಯ್ ಚೆಕ್ ಕಳಿಸುತ್ತೇನೆ ಎಂದಿದ್ದಾರೆ’ ಎಂಬುದಾಗಿ ತಮನ್ನಾ ವಿವರಿಸಿದ್ದಾರೆ.

‘ಆಜ್ ಕಿ ರಾತ್’ ಸಿನಿಮಾದ ಹಾಡು ಸೂಪ್ ಹಿಟ್ ಆದ ಬಳಿಕ ಅನೇಕರು ನೋರಾ ಫತೇಹಿ ಅವರನ್ನು ಟೀಕೆ ಮಾಡಿದ್ದರು. ಅವರ ವೃತ್ತಿ ಜೀವನ ಕಷ್ಟದಲ್ಲಿ ಇದೆ ಎಂದು ಅನೇಕರು ಹೇಳಿದ್ದರು. ಆ ರೀತಿಯಲ್ಲಿ ತಮನ್ನಾ ಅವರು ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: ಇದು ಬೊಂಬೆಯಲ್ಲ ನಟಿ ತಮನ್ನಾ ಭಾಟಿಯಾ, ವರ್ಷಗಳು ಕಳೆದಂತೆ ಹೆಚ್ಚುತ್ತಲೇ ಇದೆ ಅಂದ

ಇತ್ತೀಚೆಗೆ ತಮನ್ನಾ ಭಾಟಿಯಾ ಅವರಿಗೆ ಬ್ಯಾಕ್ ಟು ಬ್ಯಾಕ್ ಆಫರ್​ಗಳು ಬರುತ್ತಿವೆ. ಇವುಗಳ ಪೈಕಿ ವಿಶೇಷ ಡ್ಯಾನ್ಸ್​ಗಳ ಸಂಖ್ಯೆಯೂ ಅಧಿಕವಾಗಿಯೇ ಇದೆ. ತಂಡಗಳನ್ನು ನೋಡಿಕೊಂಡು ಅವರು ಸಿನಿಮಾ ಒಪ್ಪಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರ ಮಾಡುತ್ತಾರೆ. ಸದ್ಯ ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಜೊತೆ ಡೇಟ್ ಮಾಡುತ್ತಿದ್ದಾರೆ. ಇವರು ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.