ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು ಪರಸ್ಪರ ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಇದನ್ನು ಇಬ್ಬರೂ ಓಪನ್ ಆಗಿ ಹೇಳಿಕೊಂಡಿದ್ದಾರೆ. ಇವರ ಮದುವೆ ಯಾವಾಗ ಎನ್ನುವ ಪ್ರಶ್ನೆಗಳು ಅಭಿಮಾನಿಗಳಿಗೆ ಆಗಾಗ ಮೂಡುತ್ತಲೇ ಇರುತ್ತದೆ. ಇದಕ್ಕೆ ತಮನ್ನಾ ಕಡೆಯಿಂದಾಗಲೀ, ವಿಜಯ್ ಕಡೆಯಿಂದಾಗಲೀ ಮಾಹಿತಿ ಸಿಕ್ಕಿಲ್ಲ. ತಮನ್ನಾಗೆ ಮದುವೆ ಆಗುವ ಬಗ್ಗೆ ಕುಟುಂಬದ ಕಡೆಯಿಂದಲೇ ಒತ್ತಡ ಇದೆ ಎಂದು ಹೇಳಲಾಗುತ್ತಿದೆ.
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರು ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಮೂಲಕ ಗೆಲುವು ಕಂಡರು. ಇವರು ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಇವರ ಮಧ್ಯೆ ಪ್ರೀತಿ ಮೂಡಿದೆ. ಈಗ ಇವರು ಶೀಘ್ರವೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
‘ತಮನ್ನಾ ಹಾಗೂ ವಿಜಯ್ ಶೀಘ್ರವೇ ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಮದುವೆ ವಿಚಾರದಲ್ಲಿ ತಮನ್ನಾಗೆ ಕುಟುಂಬದಿಂದ ಒತ್ತಡ ಬಂದಿದೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ. ಇನ್ನು, ತಮನ್ನಾ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇವರ ಮದುವೆ ಸುದ್ದಿ ಹುಟ್ಟಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಯಾವುದೇ ನಟಿ ಪ್ರೀತಿಯಲ್ಲಿದ್ದಾಗ ಸಿನಿಮಾ ಒಪ್ಪಿಕೊಳ್ಳದೇ ಇದ್ದರೆ ಮದುವೆ ಗಾಸಿಪ್ ಹುಟ್ಟಿಕೊಳ್ಳುತ್ತದೆ. ತಮನ್ನಾ ವಿಚಾರದಲ್ಲೂ ಹೀಗೆಯೇ ಆಗಿದೆ. ಅವರು ಹೊಸ ಸಿನಿಮಾ ಒಪ್ಪಿಕೊಳ್ಳದೇ ಇರಲು ಬೇರೆ ಕಾರಣ ಇದೆಯೇ ಅಥವಾ ಮದುವೆಯೇ ಕಾರಣವೇ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಹಬ್ಬದ ಸಮಯದಲ್ಲಿ ಸಖತ್ ಬೋಲ್ಡ್ ಆದ ತಮನ್ನಾ ಭಾಟಿಯಾ
ಈ ಮೊದಲು ತಮನ್ನಾ ಕರಿಯರ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದರು. ‘ನಾನು 18ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟೆ. 8-10 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಬಹುದು ಎಂದು ನಾನು ಭಾವಿಸಿದ್ದೆ. 30 ವರ್ಷಕ್ಕೆ ಮದುವೆ ಆಗಿ ಮಕ್ಕಳನ್ನು ಮಾಡಿಕೊಳ್ಳುವ ಆಲೋಚನೆ ಇತ್ತು. ಆದರೆ, ಜೀವನ ಬೇರೆಯದೇ ಪ್ಲಾನ್ ಮಾಡಿತು’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Wed, 15 November 23