AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನಸ್ಸಿಗೆ ಅನಿಸಿದ್ದನ್ನು ಹೇಳಲು ನಾನು ಎರಡು ಬಾರಿ ಆಲೋಚಿಸುವುದಿಲ್ಲ’; ದೀಪಿಕಾ ಪಡುಕೋಣೆ

2020ರ ವೇಳೆ ಜವಾಹರ್​ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದಕ್ಕೆ ದೀಪಿಕಾ ಪಡುಕೋಣೆ ಅವರು ಬೆಂಬಲ ನೀಡಿದ್ದರು. ಕ್ಯಾಂಪಸ್​ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಖತ್ ಟ್ರೋಲ್ ಆದರು.

‘ಮನಸ್ಸಿಗೆ ಅನಿಸಿದ್ದನ್ನು ಹೇಳಲು ನಾನು ಎರಡು ಬಾರಿ ಆಲೋಚಿಸುವುದಿಲ್ಲ’; ದೀಪಿಕಾ ಪಡುಕೋಣೆ
ರಣವೀರ್​-ದೀಪಿಕಾ
ರಾಜೇಶ್ ದುಗ್ಗುಮನೆ
|

Updated on: Nov 15, 2023 | 1:05 PM

Share

ದೀಪಿಕಾ ಪಡುಕೋಣೆ (Deepika Padukone) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ‘ಕಾಫಿ ವಿತ್ ಕರಣ್’ ಶೋನಲ್ಲಿ ಅವರು ಆಡಿದ ಮಾತು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ರಣವೀರ್ ಸಿಂಗ್ (Ranveer Singh) ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾಗಲೇ ಕೆಲವರ ಜೊತೆ ದೀಪಿಕಾ ಸುತ್ತಾಟ ನಡೆಸಿದ್ದರು. ಇದನ್ನು ದೀಪಿಕಾ ಓಪನ್ ಆಗಿ ಹೇಳಿದ್ದರು. ಆದರೆ, ದೀಪಿಕಾ ಪಡುಕೋಣೆ ಮನಸ್ಸಿಗೆ ಅನಿಸಿದ್ದನ್ನು ಹೇಳಲು ಎರಡು ಬಾರಿ ಆಲೋಚಿಸುವುದಿಲ್ಲ ಎಂದು ಈ ಮೊದಲು ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನು ಈಗ ನೆನಪಿಸಿಕೊಳ್ಳಲಾಗುತ್ತಿದೆ.

2020ರ ವೇಳೆ ಜವಾಹರ್​ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದಕ್ಕೆ ದೀಪಿಕಾ ಪಡುಕೋಣೆ ಅವರು ಬೆಂಬಲ ನೀಡಿದ್ದರು. ಕ್ಯಾಂಪಸ್​ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಖತ್ ಟ್ರೋಲ್ ಆದರು. ನಟಿಯನ್ನು ಎಲ್ಲರೂ ಟೀಕಿಸಿದ್ದರು. ಈ ವೇಳೆ ದೀಪಿಕಾ ಪಡುಕೋಣೆ ಅವರು ಸ್ಟ್ರಾಂಗ್ ಸ್ಟೇಟ್​ಮೆಂಟ್ ನೀಡಿದ್ದರು. ‘ನಾನು ಯಾವುದಾದರೂ ವಿಚಾರದ ಬಗ್ಗೆ ಏನಾದರೂ ಆಲೋಚಿಸಿದರೆ ಅದನ್ನು ಹೇಳಲು ಎರಡು ಬಾರಿ ಆಲೋಚಿಸುವುದಿಲ್ಲ. ಸತ್ಯವನ್ನು ಮಾತನಾಡಲು ನಾನು ಎಂದಿಗೂ ಹಿಂಜರಿಯುವುದಿಲ್ಲ. ಕ್ಷಮೆ ಕೇಳಲೂ ನನಗೆ ಭಯವಿಲ್ಲ’ ಎಂದಿದ್ದಾರೆ ಅವರು.

‘ಪದ್ಮಾವತ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ದೀಪಿಕಾಗೆ ಬೆದರಿಕೆ ಬಂತು. ರಾಜಕೀಯ ವಲಯದಿಂದಲೂ ಸಿನಿಮಾಗೆ ವಿರೋಧ ವ್ಯಕ್ತವಾಯಿತು. ‘ಪದ್ಮಾವತಿ’ ಎಂದಿದ್ದ ಸಿನಿಮಾ ಹೆಸರನ್ನು ‘ಪದ್ಮಾವತ್’ ಎಂದು ಮಾಡಲಾಯಿತು. ಈ ಪರಿಸ್ಥಿತಿಯನ್ನು ದೀಪಿಕಾ ಸಮರ್ಥವಾಗಿ ಎದುರಿಸಿದ್ದರು.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್​ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು

ದೀಪಿಕಾ ಪಡುಕೋಣೆ ನೀಡಿದ ಹೇಳಿಕೆಯನ್ನು ಸಾಕಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ, ದೀಪಿಕಾ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಪತಿಯ ಜೊತೆಗಿನ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ದೀಪಿಕಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ‘ಫೈಟರ್’ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಇದ್ದಾರೆ. ಈ ಚಿತ್ರ ಜನವರಿ 25ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ