ಕುಡಿತದ ಚಟಕ್ಕೆ ಬಲಿಯಾದ ನಟ; ಸಹಾಯಕ್ಕೆ ಬರಲಿಲ್ಲ ಹಣ  

ತಮಿಳು ಕಲಾವಿದ ಬಿಜಿಲಿ ರಮೇಶ್ ಅವರು ನಿಧನ ಹೊಂದಿದ್ದಾರೆ. ಬಿಜಿಲಿ ರಮೇಶ್ ಅವರು ಯೂಟ್ಯೂಬ್​ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಫೇಮಸ್ ಆದರು. ಈ ವಿಡಿಯೋಗಳು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ್ದವು. ಆ ಬಳಿಕ ಅವರು ನಟನೆಗೆ ಕಾಲಿಟ್ಟರು.

ಕುಡಿತದ ಚಟಕ್ಕೆ ಬಲಿಯಾದ ನಟ; ಸಹಾಯಕ್ಕೆ ಬರಲಿಲ್ಲ ಹಣ  
ರಮೇಶ್

Updated on: Aug 27, 2024 | 9:02 AM

ತಮಿಳು ನಟ ಬಿಜಿಲಿ ರಮೇಶ್ ಅವರು ಇಂದು (ಆಗಸ್ಟ್ 27) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ರಮೇಶ್ ಕುಡಿತದ ಚಟಕ್ಕೆ ಒಳಗಾಗಿದ್ದರು. ಹೀಗಾಗಿ ಯಕೃತ್ತಿಗೆ (ಲಿವರ್) ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಆರ್ಥಿಕವಾಗಿಯೂ ಸಾಕಷ್ಟು ತೊಂದರೆ ಅನುಭವಿಸಿದ್ದರು. ಹೀಗಾಗಿ, ಚಿತ್ರರಂಗದವರು ಅವರ ಸಹಾಯಕ್ಕೆ ಮುಂದಾಗಿದ್ದರು. ಆದರೆ, ಈ ಹಣ ಅವರನ್ನು ಉಳಿಸಿಲ್ಲ.

ಬಿಜಿಲಿ ರಮೇಶ್ ಅವರು ಯೂಟ್ಯೂಬ್​ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಫೇಮಸ್ ಆದರು. ಈ ವಿಡಿಯೋಗಳು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ್ದವು. 2018ರಲ್ಲಿ ಅವರನ್ನು ‘ಕೊಲಮಾವು ಕೋಕಿಲ’ ಸಿನಿಮಾದ ಪ್ರಮೋಷನಲ್ ಸಾಂಗ್​ಗೆ ಬಳಕೆ ಮಾಡಿಕೊಳ್ಳಲಾಯಿತು. ಆ ಬಳಿಕ ಅವರು ನಟನೆಗೆ ಕಾಲಿಟ್ಟರು. ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

‘ನಪ್ಟೆ ತುನೈ’, ‘ಆಡೈ’, ‘ಪೊನ್ಮಗಲ್ ವಂದಲ್’, ‘ಕೋಮಲಿ’ ಸಿನಿಮಾಗಳಲ್ಲಿ ಬಿಜಿಲಿ ರಮೇಶ್ ಅವರು ನಟಿಸಿದ್ದಾರೆ. ಅವರು ರಿಯಾಲಿಟಿ ಶೋ ಮೂಲಕವೂ ಗಮನ ಸೆಳೆದಿದ್ದರು. ‘ಕುಕ್ಕೂ ವಿತ್ ಕೋಮಲಿ’ ಹೆಸರಿನ ರಿಯಾಲಿಟಿ ಶೋನಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಶ್ರೀದೇವಿ ನಿಧನದ ಬಗ್ಗೆ ಇರೋ ಅನುಮಾನ ದೂರವಾಗುವಂಥದ್ದಲ್ಲ; ಕಾರಣ?

ಬಿಜಿಲಿ ರಮೇಶ್ ಅವರು ರಜನಿಕಾಂತ್ ಅವರ ಅಭಿಮಾನಿ. ರಮೇಶ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಅವರು ಚಿತ್ರರಂಗದಿಂದ ದೂರವೇ ಇದ್ದರು. ಅವರು ಮದ್ಯದ ದಾಸನಾಗಿದ್ದರು. ಅಲ್ಲದೆ, ಅವರು ಮದ್ಯದ ಚಟ ಹತ್ತಿಸಿಕೊಳ್ಳದಂತೆ ಅನೇಕ ಸಂದರ್ಶನಗಳಲ್ಲಿ ಕೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.