ತಮಿಳು ನಿರ್ಮಾಪಕ ದಿಲ್ಲಿ ಬಾಬು ಅವರು ಇಂದು (ಸೆಪ್ಟೆಂಬರ್ 9) ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 50 ವರ್ಷ ವಯಸ್ಸಾಗಿತ್ತು. ಸಿನಿಮಾ ನಿರ್ಮಾಣ ಮಾಡಿ ಚಿತ್ರರಂಗದಲ್ಲಿ ಇನ್ನಷ್ಟು ವರ್ಷ ಇರಬೇಕಿದ್ದ ಅವರು ಈಗ ಇಲ್ಲವಾಗಿದ್ದಾರೆ. ಮಧ್ಯರಾತ್ರಿ 12:30ರ ಸಮಯಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇಂದೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅವರು ತಮಿಳು ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ದಿಲ್ಲಿ ಬಾಬು ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಮಟ್ಟದ ಶಾಕ್ ತಂದಿದೆ. ತಮಿಳು ಫಿಲ್ಮ್ ಇಂಡಸ್ಟ್ರಿಯ ಅನೇಕರು ದಿಲ್ಲಿ ಬಾಬು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ.
ಚೆನ್ನೈನ ಪೆರಂಗಳದೂರ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30ರ ವೇಳೆಗೆ ಅವರ ಶವವನ್ನು ಮನೆಗೆ ತರಲಾಗಿದೆ. ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ನಿರ್ಮಾಪಕ ಎಸ್ಆರ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ. ‘ದಿಲ್ಲಿ ಬಾಬು ನಿಧನ ವಾರ್ತೆ ಶಾಕಿಂಗ್ ತಂದಿದೆ. ಅನೇಕ ಯುವ ಟ್ಯಾಲೆಂಟ್ಗಳಿಗೆ ಇವರು ಬೆಂಬಲ ನೀಡಿದ್ದರು. ಅವರ ಆಪ್ತರು ಹಾಗೂ ಕುಟುಂಬದವರಿಗೆ ನನ್ನ ಸಂತಾಪ’ ಎಂದು ಟ್ವೀಟ್ ಮಾಡಿದ್ದಾರೆ.
Woke up to this shocking news.
Deeply saddened by the passing away of dear @Dili_AFF sir, who is a very friendly & highly passionate Producer. He had a lot of dreams but fate took him away.
Rest In Peace #DilliBabu sir. My heartfelt condolences to Team @AxessFilm & family. pic.twitter.com/J3S967WBk0
— G Dhananjeyan (@Dhananjayang) September 8, 2024
ಇದನ್ನೂ ಓದಿ: ‘ಪುಷ್ಪ 2’ ಬಗ್ಗೆ ಅಪ್ಡೇಟ್ ಕೊಟ್ಟ ನಿರ್ಮಾಪಕ: ರಿಲೀಸ್ ಯಾವಾಗ?
ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ದಿಲ್ಲಿ ಬಾಬು ಅವರು ‘Axess Film Factory’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು. ‘ರಾಕ್ಷಸನ್’, ‘ಓ ಮೈ ಕಡವಲೆ’, ‘ಬ್ಯಾಚುಲರ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.