‘ಪುಷ್ಪ 2’ ಬಗ್ಗೆ ಅಪ್ಡೇಟ್ ಕೊಟ್ಟ ನಿರ್ಮಾಪಕ: ರಿಲೀಸ್ ಯಾವಾಗ?
Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ಇದೀಗ ‘ಪುಷ್ಪ 2’ ಸಿನಿಮಾದ ನಿರ್ಮಾಪಕರು ಸಿನಿಮಾ ಬಿಡುಗಡೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಿರಬೇಕಿತ್ತು. ಈಗ ಫೈನಲ್ ಆಗಿ ಡಿಸೆಂಬರ್ 6ರಂದು ಚಿತ್ರ ಬಿಡುಗಡೆ ಕಾಣಲಿದೆ ಎಂದು ತಂಡ ಖಚಿತಪಡಿಸಿತ್ತು. ಆದರೆ, ಹಬ್ಬಿದ ಹಲವು ವದಂತಿಗಳಿಂದ ಸಿನಿಮಾ ರಿಲೀಸ್ ಬಗ್ಗೆ ಗೊಂದಲ ಮೂಡಿತ್ತು. ಈಗ ‘ಪುಷ್ಪ 2’ ಚಿತ್ರದ ಬಗ್ಗೆ ಮೈತ್ರಿ ಮೂವೀ ಮೇಕರ್ಸ್ನ ರವಿ ಶಂಕರ್ ಅವರು ಅಪ್ಡೇಟ್ ಕೊಟ್ಟಿದ್ದಾರೆ. ಎಲ್ಲ ವಿಚಾರಗಳನ್ನು ಅವರು ಸ್ಪಷ್ಟಪಡಿಸಿದ್ದಾರೆ.
‘ಮತ್ತು ವದಲರಾ 2’ ಚಿತ್ರವನ್ನು ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಸುದ್ದಿಗೋಷ್ಠಿ ವೇಳೆ ಅವರಿಗೆ ‘ಪುಷ್ಪ 2’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಸಿನಿಮಾ ಯಾವ ಹಂತದಲ್ಲಿ ಇದೆ? ಯಾವಾಗ ಯಾವ ಕೆಲಸಗಳು ನಡೆಯಲಿವೆ ಎನ್ನುವ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ನ ಅವರು ಕೊಟ್ಟಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
‘ಪುಷ್ಪ 2’ ಚಿತ್ರದ ಮೊದಲಾರ್ಧದ ಎಡಿಟ್ ಸೆಪ್ಟೆಂಬರ್ 2ರಂದು ಪೂರ್ಣಗೊಳ್ಳಲಿದೆಯಂತೆ. ಒಂದು ತಿಂಗಳ ಬಳಿಕ ಎರಡು ತಿಂಗಳ ಎಡಿಟ್ ಪೂರ್ಣಗೊಳ್ಳಲಿದೆ. ನವೆಂಬರ್ 20ರ ವೇಳೆಗೆ ಕೊನೆಯ ಹಂತದ ಕಾಪಿ ರೆಡಿ ಇರಲಿದೆ. ನವೆಂಬರ್ 25ರ ಒಳಗೆ ಸೆನ್ಸಾರ್ ಮಂಡಳಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡಿಸೆಂಬರ್ 6ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ ಎಂದು’ ನಿರ್ಮಾಪಕರು ಹೇಳಿದ್ದಾರೆ.
ಇದನ್ನೂ ಓದಿ:ಇಷ್ಟವಾದ್ರೆ ಬರ್ತೀನಿ, ಇಲ್ಲವಾದರೆ ಇಲ್ಲ: ಪವನ್ ಕಲ್ಯಾಣ್ಗೆ ಟಾಂಗ್ ಕೊಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ಕೂದಲು ಕಟ್ ಮಾಡಿಸಿ, ವಿದೇಶ ಪ್ರವಾಸಕ್ಕೆ ತೆರಳಿದ್ದರು. ಇದರಿಂದ ಸಿನಿಮಾದ ಶೂಟ್ ಅರ್ಧಕ್ಕೆ ನಿಂತಿದೆ ಎನ್ನುವ ಅನುಮಾನ ಮೂಡಿತ್ತು. ಇದೇ ಸಮಯಕ್ಕೆ ಸುಕುಮಾರ್ ಕೂಡ ಅಮೆರಿಕ ತೆರಳಿದರು. ಈ ಎಲ್ಲಾ ಕಾರಣದಿಂದ ಅನುಮಾನ ಮೂಡಿತ್ತು. ಈಗ ಎಲ್ಲಾ ವದಂತಿಗೆ ನಿರ್ಮಾಪಕರು ಬ್ರೇಕ್ ಹಾಕಿದ್ದಾರೆ.
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಇದ್ದು, ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ. ಈ ಚಿತ್ರ ಡಿಸೆಂಬರ್ 6ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಮೊದಲ ಭಾಗ 300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡೋ ನಿರೀಕ್ಷೆ ಇದೆ. ಈ ಚಿತ್ರ ‘ಕೆಜಿಎಫ್ 2’ ದಾಖಲೆ ಮುರಿಯುತ್ತದೆಯೇ ಎನ್ನುವ ಕುತೂಹಲ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ