ಭರ್ಜರಿ ಕಲೆಕ್ಷನ್ ಮಾಡುತ್ತಿದ್ದ ಸಣ್ಣ ಬಜೆಟ್​ನ ಸಿನಿಮಾ, ಕತೆ ಏನು?

|

Updated on: Oct 03, 2024 | 7:00 PM

ಪ್ಯಾನ್ ಇಂಡಿಯಾ, ಸ್ಟಾರ್ ನಟರ ಸಿನಿಮಾಗಳ ನಡುವೆ ಸಣ್ಣ ಬಜೆಟ್ ಸಿನಿಮಾಗಳನ್ನು ಯಾರೂ ನೋಡುತ್ತಿಲ್ಲ ಎಂಬ ಕೂಗು ಕರ್ನಾಟಕದಲ್ಲಿದೆ, ಇದು ಒಂದು ಹಂತಕ್ಕೆ ನಿಜವೂ ಹೌದು, ಆದರೆ ತಮಿಳಿನ ಒಂದು ಸಣ್ಣ ಬಜೆಟ್ ಸಿನಿಮಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ವಿಶೇಷತೆ ಏನು?

ಭರ್ಜರಿ ಕಲೆಕ್ಷನ್ ಮಾಡುತ್ತಿದ್ದ ಸಣ್ಣ ಬಜೆಟ್​ನ ಸಿನಿಮಾ, ಕತೆ ಏನು?
Follow us on

ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಸಣ್ಣ ಸಿನಿಮಾಗಳಿಗೆ ಉಸಿರಾಡಲು ಸಹ ಆಗುತ್ತಿಲ್ಲ, ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಿದರೂ ಸಹ ಜನ ನೋಡುತ್ತಿಲ್ಲ ಎಂಬ ಆರೋಪ ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಇದೆ. ಕನ್ನಡದ ಮಟ್ಟಿದೆ ಇದು ತುಸು ನಿಜವೂ ಹೌದು, ಕನ್ನಡದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಂದ ಕೆಲವು ಒಳ್ಳೆಯ ಗುಣಮಟ್ಟದ ಸಣ್ಣ ಬಜೆಟ್​ನ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಂಡಿಲ್ಲ. ಆದರೆ ಪರಭಾಷೆಗಳಲ್ಲಿ ಸಣ್ಣ ಬಜೆಟ್​ನ ಸಿನಿಮಾಗಳು ಕಮಾಲ್ ಮಾಡುತ್ತಿವೆ.

ಇದೇ ವರ್ಷ ಬಿಡುಗಡೆ ಆದ ತಮಿಳಿನ ‘ಮಹಾರಾಜ’ ಸಿನಿಮಾ ಚಿತ್ರಮಂದಿರದಲ್ಲಿ ಮತ್ತು ಒಟಿಟಿ ಎರಡರಲ್ಲೂ ಮೊಡಿಯನ್ನೇ ಮಾಡಿತು. ಸುಮಾರು 10-15 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಸುಮಾರು 100 ಕೋಟಿ ಹಣ ಗಳಿಸಿತು. ತೆಲುಗಿನಲ್ಲೂ ಸಹ ಇತ್ತೀಚೆಗೆ ಬಂದ ಕೆಲವು ಸಣ್ಣ ಬಜೆಟ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದವು. ಮಲಯಾಳಂನಲ್ಲಿ ಬಿಡಿ ಅಲ್ಲಿ ಸಣ್ಣ ಬಜೆಟ್ ಸಿನಿಮಾಗಳೇ ಸೂಪರ್ ಹಿಟ್ ಆಗುವುದು. ಇದೀಗ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿರುವ ತಮಿಳು ಸಿನಿಮಾ ಒಂದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಹೆಸರು ‘ಲಬ್ಬರ್ ಪಂದು’ (ರಬ್ಬರ್ ಚೆಂಡು).

ಇದನ್ನೂ ಓದಿ: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದ ‘ದೇವರ’; ಒಟ್ಟಾರೆ ಕಲೆಕ್ಷನ್ ಎಷ್ಟು?

ಹಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಮೆಂಟ್​ ಬಗೆಗಿನ ಕತೆ ಒಳಗೊಂಡಿರುವ ಈ ಸಿನಿಮಾ ತಮಿಳುನಾಡು ಮಾತ್ರವಲ್ಲದೆ ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಕೇವಲ 5 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ, ಯಾವುದೇ ಸ್ಟಾರ್ ನಟರು ಇಲ್ಲದಿರುವ ಈ ಸಿನಿಮಾ ಕೆಲವೇ ವಾರದಲ್ಲಿ 30 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇದೀಗ ವಿದೇಶದಲ್ಲಿಯೂ ಬಿಡುಗಡೆ ಆಗಲು ಸಜ್ಜಾಗಿದ್ದು, ಸಿನಿಮಾದ ಗಳಿಕೆ ಡಬಲ್ ಆಗುವ ಎಲ್ಲ ಸೂಚನೆಗಳಿವೆ.

ಹಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಯ ಕತೆಯನ್ನೇ ಸ್ವಾರಸ್ಯಕರವಾಗಿ, ರಸಮಯವಾಗಿ, ಹಳ್ಳಿ ಪರಿಸರ, ಕ್ರಿಕೆಟ್ ಆಡುವವರ ಜೀವನ, ಕುಟುಂಬ, ಅವರ ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಂದರವಾದ ಕತೆ ಹೆಣೆದಿದ್ದಾರೆ ನಿರ್ದೇಶಕ ತಮಿಳರಸನ್ ಮತ್ತು ಪಚ್ಚುಮುತ್ತು. ಸಿನಿಮಾದಲ್ಲಿ ಕ್ರಿಕೆಟ್ ಜೊತೆಗೆ, ರಾಜಕೀಯ, ಜಾತೀಯತೆ, ಪ್ರೀತಿ, ಕ್ರಿಕೆಟ್ ಬಗೆಗಿನ ಪ್ರೀತಿ, ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಕ್ರೀಡಾ ಸ್ಪೂರ್ತಿ ಎಲ್ಲವೂ ಇದೆ. ಇದೇ ಕಾರಣಕ್ಕೆ ಸಿನಿಮಾ ಯುವಕರಿಗೆ ಹೆಚ್ಚು ಇಷ್ಟವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ